ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಮೇ 30): ಕೋವಿಡ್ (Covid) ಮಾಹಾಮಾರಿಯಿಂದ ಎರಡು ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಯವರು ಇಂದು ವಿಡಿಯೋ ಕಾನ್ಪರನ್ಸ್ ಮೂಲಕ ಅಭಯ ಹಸ್ತ ನೀಡಿದ್ದಾರೆ. ಇಡೀ ದೇಶಾದಾದ್ಯಂತ ಮಕ್ಕಳು ಅವರ ಸಪೋರ್ಟಿವ್ ಪೋಷಕರಿಗೆ 10 ಲಕ್ಷ ರೂ ಗಳ ಬಾಂಡ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಆ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರು ನಿಮ್ಮ ಜೊತೆ ಸರ್ಕಾರ ವಿದೆ.ನಿಮ್ಮ ಕುಟುಂಬದ ಜೊತೆ ನಾನಿದ್ದೇನೆ ಎಂದು ಅಭಯ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಪೋಷಕರನ್ನು ಕಳೆದುಕೊಂಡು ಅನಾಥರಾದ 4 ಮಕ್ಕಳಿಗೆ ಪಿ ಎಂ ಕೇರ್ಸ್ ಪಾರ್ ಚಿಲ್ಡ್ರನ್ ಯೋಜನೆಯಲ್ಲಿ 10 ಲಕ್ಷ ಬಾಂಡ್ ಲಭ್ಯವಾಗಿದೆ. ಹೊನ್ನಾಳಿ ತಾಲ್ಲೂಕಿನ ಎನ್ ಯುಕ್ತಿ , ಮಣಿಕಂಠ ಹಾಗು ದಾವಣಗೆರೆ ಸತೀಶ್, ರಮೇಶ್ ನಾಯ್ಕ್ ಗೆ 10 ಲಕ್ಷ ಬಾಂಡ್ ಪಡೆದ ಪಲಾನುಭವಿಗಳಾಗಿದ್ದಾರೆ. ಅವರು 23 ವರ್ಷವಾದ ನಂತರ ಬಾಂಡ್ ಮೊತ್ತ ಆ ಮಕ್ಕಳಿಗೆ ಲಭ್ಯವಾಗಲಿದೆ. ಬಾಂಡ್ ನೀಡಿದ ಬಾಲಕಿ ಯುಕ್ತಿಗೆ ಸ್ವತಃ ಪ್ರಧಾನಮಂತ್ರಿ ಮೋದಿಯವರಿಂದ ಬರೆದ ಪತ್ರದ ಸಾರಂಶ ಇಂತಿದೆ.
ಸಭಾಪತಿ ಆಗಬಹುದೆಂಬ ಆಸೆಯಿಂದ Basavaraj Horatti ಕೋಮುವಾದಿಪಕ್ಷಕ್ಕೆ ಶಿಫ್ಟ್
ಪ್ರೀತಿಯ ಮಿಸ್ ಯುಕ್ತಿ ಎನ್,
ಶುಭಾಶಯಗಳು, ಇಂದು ನಾನು ನಿಮಗೆ ಪ್ರಧಾನಮಂತ್ರಿಯಾಗಿ ಪತ್ರವನ್ನು ಬರೆಯುತ್ತಿಲ್ಲ, ಓರ್ವ ಕುಟುಂಬದ ಸದಸ್ಯನಾಗಿ ಪತ್ರ ಬರೆಯುತ್ತಿದ್ದೇನೆ.
ಕಳೆದ ಎರಡು ವರ್ಷಗಳಲ್ಲಿ ಮಾರಕ ಕೊರೊನನಿಗೆ ಜಗತ್ತಿನಾದ್ಯಂತ ಜನರು ತಮ್ಮ ಪ್ರೀತಿವಾತ್ರರನ್ನು ಕಳೆದುಕೊಂಡಿದ್ದಾರೆ. ಈ ಸಾಲಕಾಮಿಕದಲ್ಲಿ ತಮ್ಮ ಪೋಷಕರನ್ನು ಕಳೆದುಕೊಂಡು ಅವರು ಅನುಭವಿಸುತ್ತಿರುವ ನೋವು ವ್ಯಕ್ತಪಡಿಸಲು ಪದಗಳು ಸಾಲದು. ನನ್ನ ಬಾಲ್ಯದಲ್ಲಿ ನನ್ನ ತಾಯಿ ಹೇಳುತ್ತಿದ್ದ ಕೆಲವು ಸಂಗತಿಗಳು ಇಂದು ನನಗೆ ನೆನಪಾಗುತ್ತಿವೆ.
ವಾಸ್ತವವೆಂದರೆ, ಸುಮಾರು 100 ವರ್ಷಗಳ ಹಿಂದೆ ನನ್ನ ಕುಟುಂಬ ಕೂಡ ಇಂತಹದೇ ದುರಂತ ಮತ್ತು ನೋವಿಗೆ ಒಳಗಾಗಿದೆ. ಶತಮಾನದ ಹಿಂದೆ, ಇಂದಿನಂತೆ ಇಡೀ ವಿಶ್ವ ಭೀಕರ ಸಾಂಕ್ರಾಮಿಕಕ್ಕೆ ತುತ್ತಾಗಿದ್ದಾಗ, ನನ್ನ ತಾಯಿ ಕೂಡ ತನ್ನ ತಾಯಿಯನ್ನು ಅಂದರೆ ನನ್ನ ಅಜ್ಜಿಯನ್ನು ಕಳೆದುಕೊಂಡಿದ್ದರು. ಆಗ ನನ್ನ ತಾಯಿ ಎಷ್ಟು ಚಿಕ್ಕವರಾಗಿದ್ದರೆಂದರೆ ಆಕೆಗೆ ತನ್ನ ತಾಯಿಯ ಮುಖವೂ ಕೂಡ ನೆನಪಿರಲಿಲ್ಲ. ಆಕೆ ಇಡೀ ಜೀವನವನ್ನು ತನ್ನ ತಾಯಿಯಿಲ್ಲದ ಆಕೆಯ ಪ್ರೀತಿಯಿಂದ ಕಳೆದರು.
BAGALKOTEಯಲ್ಲಿ ವಿದ್ಯಾರ್ಥಿಗೆ ಥಳಿತ ಪ್ರಕರಣ, ಪ್ರಿನ್ಸಿಪಾಲ್ PSI ಸೇರಿ 7 ಮಂದಿ ವಿರುದ್ಧ FIR
ಅವರು ಹೇಗೆ ಬೆಳೆದಿರಬಹುದು ಯೋಚಿಸಿ. ಆದ್ದರಿಂದ ಇಂದು ನಾನು ನಿಮ್ಮ ಮನಸ್ಸಿನಲ್ಲಿರುವ ಆಕ್ರೋಶವನ್ನು, ನಿಮ್ಮ ಹೃದಯದಲ್ಲಿರುವ ತೊಳಲಾಟವನ್ನುಅರ್ಥಮಾಡಿಕೊಳ್ಳಬಲ್ಲೆ. ಪೋಷಕರ ಉಪಸ್ಥಿತಿ ಸದಾ ಮಕ್ಕಳಿಗೆ ಭಾರಿ ಬೆಂಬಲ ನೀಡುತ್ತದೆ. ಇಲ್ಲಿಯವರೆಗೆ ನಿಮ್ಮ ಪೋಷಕರು ನಿಮಗೆ ತಮ್ಮ ಮತ್ತು ಸರಿ ಒಳಿತು ಮತ್ತು ಕಡಕಿನ ವ್ಯತ್ಯಾಸದ ಬಗ್ಗೆ ಹೇಳಿದ್ದಾರೆ ಮತ್ತು ನಿಮಗೆ ಮಾರ್ಗದರ್ಶನ ಮಾಡಿದ್ದಾರೆ. ಇಂದು ಅವರು ನಿಮ್ಮೊಡನಿಲ್ಲವಾದರಿಂದ ನಿಮ್ಮ ಜವಾಬ್ದಾರಿ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ.
ನಿಮ್ಮ ಜೀವನದಲ್ಲಿ ಉಂಟಾಗಿರುವ ಶೂನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ಒಂದು ಕುಟುಂಬವಾಗಿ ನಿಮ್ಮ ಹೋರಾಟಗಳು, ಕಷ್ಯಗಳು ಮತ್ತು ನಿಮ್ಮ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ನೀವು ಒಬ್ಬಂಟಿಯಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಇಡೀ ದೇಶವೇ ನಿಮ್ಮಂದಿಗಿದೆ.
ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆಯು (pm cares for children scheme ) ನಿಮ್ಮ ಸುವರ್ಣ ಭವಿಷ್ಯ ಕ್ಕಾಗಿ ದೇಶದ ದೃಢ ಹೆಜ್ಜೆಯಾಗಿದೆ. ಈ ಯೋಜನೆಯು ನೀವು ಮುಕ್ತವಾಗಿ ಕನಸು ಕಾಣಬಹುದು ಮತ್ತು ನಿಮ್ಮ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುವಲ್ಲಿ ಯಾವುದ ಪ್ರಯತ್ನಗಳ ಕೊರತೆಯಾಗುವುದಿಲ್ಲವೆಂದು ಖಾತ್ರಿಪಡಿಸುತ್ತದೆ. ನೀವು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು. ಈ ಪತ್ರದೊಂದಿಗೆ ಯೋಜನೆಯ ಮಾಹಿತಿಯ ವಿವರಗಳು ವತ್ರವನ್ನು ಲಗತ್ತಿಸಲಾಗಿದೆ. ನಿಮ್ಮ ಉತ್ತಮ ಯೋಗಕ್ಷೇಮ ಮತ್ತು ಉಜ್ವಲ ಭವಿಷ್ಯಕ್ಕಾಗಿ ಶುಭಾಶಯಗಳೊಂದಿಗೆ, ಪ್ರಧಾನಿ ನರೇಂದ್ರಮೋದಿ
ಮಕ್ಕಳಿಗಾಗಿ ಪಿಎಂ ಕೇರ್ಸ್ (PM CARES) ಯೋಜನೆ 2021
ದಿನಾಂಕ: 11.03.2020ರ ನಂತರದಲ್ಲಿ ಕೋವಿಚ್19 ರಿಂದ ಪೋಷಕರಿಬ್ಬರನ್ನು ಕಳೆದುಕೊಂಡಂತಹ ಮಕ್ಕಳಿಗೆ ಕೇಂದ್ರ ಸರ್ಕಾರದ "PM CARES for Children” ಯೋಜನೆಯನ್ನು ರಾಜ್ಯದಲ್ಲಿಯೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಭಾರತ ಸರ್ಕಾರವು PM CARS Portal ನಲ್ಲಿ ಅನುಮೋದನೆಗೊಂಡಿರುವ ಎಲ್ಲಾ ಮಕ್ಕಳಿಗೆ ಅನ್ವಯಿಸುವಂತೆ ಈ ಮುಂದಿನ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ,
1. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ, 18 ವರ್ಷ ವಯೋಮಾನದ ಮಕ್ಕಳಿಗೆ ನಿಗದಿಪಡಿಸಿರುವ ನಿಶ್ಚಿತ ಮೊತ್ತವನ್ನು ಅಂಚೆ ಕಛೇರಿಯಲ್ಲಿ ಠೇವಣಿ ಇಡಲಾಗುವುದು. ಈ ಸಂಬಂಧ ಎಲ್ಲಾ ಅನುಮೋದಿತ ಮಕ್ಕಳ ಖಾತೆಯನ್ನು ಅಂಚೆ ಕಛೇರಿಯಲ್ಲಿ ತೆರೆಯಲಾಗಿದೆ.
2. ಅಂಚೆ ಕಛೇರಿಯಲ್ಲಿ ಫಲಾನುಭವಿ ಮತ್ತು ಜಿಲ್ಲಾಧಿಕಾರಿಗಳ ಜಂಟಿ ಖಾತೆಯಲ್ಲಿ ಇಟ್ಟಿರುವ ಇಡಿಗಂಟಿನ ಮೇಲೆ ಲಭ್ಯವಾಗುವ ಬಡ್ಡಿ ಹಣವನ್ನು 18 ವರ್ಷ ಪೂರ್ಣಗೊಂಡ ನಂತರ 23 ವಯಸ್ಸಿನವರೆಗೆ ಸ್ಟೈ ಫಂಡ್ ರೀತಿಯಲ್ಲಿ ಮಾಹೆಯಾನ ಒದಗಿಸಲಾಗುವುದು.
3. ಫಲಾನುಭವಿಗಳು 23 ವರ್ಷಕ್ಕೆ ಬಂದಾಗ ಇಡಿಗಂಟಿನ ರೂಪದಲ್ಲಿ (Lumpsum amount) ರೂ.10,00,000/ ಗಳ ಆರ್ಥಿಕ ನೆರವನ್ನು ಅವರುಗಳ ಮುಂದಿನ ಭವಿಷ್ಯದ ಉದ್ದೇಶಕ್ಕಾಗಿ ಕಲ್ಪಿಸುವುದು,
4. ಫಲಾನುಭವಿಗಳ ವಿದ್ಯಾಭ್ಯಾಸ ಮತ್ತು ಉನ್ನತ ಶಿಕ್ಷಣಕ್ಕೆ ನೆರವು ಒದಗಿಸುವುದು
5. ಫಲಾನುಭವಿಗಳಿಗೆ ರೂ.5,00,000/- ಗಳ ವರೆಗೆ ಉಚಿತ ಆರೋಗ್ಯ ವಿಮೆ ಸೌಲಭ್ಯ ಒದಗಿಸುವುದು.
6. ಮಾನ್ಯ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದನ್ವಯ PM CARES ನ ಎಲ್ಲಾ ಅನುಮೋದಿತ ಫಲಾನುಭವಿಗಳಿಗೆ ರೂ.50,000/-ಗಳ ಪರಿಹಾರ ಮೊತ್ತವನ್ನು (Ex gratia) ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಒದಗಿಸಲಾಗಿದೆ.
7.PM CARES ನ ಅನುಮೋದಿತ ಫಲಾನುಭವಿಗಳಿಗೆ ಪ್ರಾಯೋಜಕತ್ವದಡಿ ಮಾಹೆಯಾನ 2000/-ಗಳ ಆರ್ಥಿಕ ಸೌಲಭ್ಯವನ್ನು 2021-22ನೇ ಆರ್ಥಿಕ ಸಾಲಿಗೆ ಅನ್ವಯಿಸುವಂತೆ ಸದರಿಯವರುಗಳು PM CARES PORTAL ನಲ್ಲಿ District Magistrate Login ಮೂಲಕ ಅನುಮೋದನೆಗೊಂಡ ದಿನಾಂಕದಿಂದ ಅನ್ವಯಿಸುವಂತೆ ಒದಗಿಸಲಾಗಿದೆ.