11 ಹೊಸ ವೈದ್ಯಕೀಯ ಕಾಲೇಜು ಮತ್ತು ಸಿಐಸಿಟಿ ಕ್ಯಾಂಪಸ್ ಉದ್ಘಾಟನೆ
ಕಳೆದ ಏಳು ವರ್ಷಗಳಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 596ಕ್ಕೆ ಏರಿದೆ
ಇಂದು ದೇಶದಲ್ಲಿ ಒಟ್ಟು 22 ಏಮ್ಸ್ ಗಳು ಸೇವೆಯಲ್ಲಿದೆ.
ನವದೆಹಲಿ (ಜ.12): ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi) ಅವರು ತಮಿಳುನಾಡಿನಲ್ಲಿ (TamilNadu) 11 ಹೊಸ ವೈದ್ಯಕೀಯ ಕಾಲೇಜುಗಳನ್ನು (medical colleges )ಮತ್ತು ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳು (CICT) ನ ಹೊಸ ಕ್ಯಾಂಪಸ್ ಅನ್ನು ಬುಧವಾರ ವಿಡಿಯೋ ಕಾನ್ಫರೆನ್ಸ್ (video conferencing) ಮೂಲಕ ಉದ್ಘಾಟನೆ ಮಾಡಿದರು. ಸುಮಾರು 4,000 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ, ಅದರಲ್ಲಿ ಸುಮಾರು 2,145 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಮತ್ತು ಉಳಿದ ಮೊತ್ತವನ್ನು ತಮಿಳುನಾಡು ಸರ್ಕಾರವು ಒದಗಿಸಿದೆ.
ವಿರುಧುನಗರ್, ನಾಮಕ್ಕಲ್, ನೀಲಗಿರೀಸ್, ತಿರುಪ್ಪೂರ್, ತಿರುವಳ್ಳೂರ್, ನಾಗಪಟ್ಟಣಂ, ದಿಂಡಿಗುಲ್, ಕಲ್ಲಕುರಿಚಿ, ಅರಿಯಲೂರ್, ರಾಮನಾಥಪುರಂ ಮತ್ತು ಕೃಷ್ಣಗಿರಿ ಜಿಲ್ಲೆಗಳಲ್ಲಿ ನೂತನ ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗಿವೆ. ಈ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯು ಕೈಗೆಟುಕುವ ದರದಲ್ಲಿ ವೈದ್ಯಕೀಯ ಶಿಕ್ಷಣವನ್ನು ಉತ್ತೇಜಿಸಲು ಮತ್ತು ದೇಶದ ಎಲ್ಲಾ ಭಾಗಗಳಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ತೋರಿದ ನಿರಂತರ ಪ್ರಯತ್ನದ ಶ್ರಮವಾಗಿದೆ. ಕಳೆದ ಏಳು ವರ್ಷಗಳಲ್ಲಿ, ವೈದ್ಯಕೀಯ ಕಾಲೇಜುಗಳ ಸಂಖ್ಯೆ 596ಕ್ಕೆ ಏರಿದ್ದು, ಶೇ.54ರಷ್ಟು ಹೆಚ್ಚಳವಾಗಿದೆ. ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿಯ ಸೀಟುಗಳ ಸಂಖ್ಯೆ ಸುಮಾರು 1 ಲಕ್ಷ 48 ಸಾವಿರವಾಗಿದ್ದು, 2014ರಲ್ಲಿದ್ದ 82 ಸಾವಿರಕ್ಕೆ ಹೋಲಿಸಿದರೆ ಪ್ರತಿಶತ 80ರ ಹೆಚ್ಚಳವಾಗಿದ್ದರೆ, 2014ರಲ್ಲಿದ್ದ 7ರಿಂದ ಏಮ್ಸ್ ಗಳ ಸಂಖ್ಯೆ ಇಂದು 22 ಆಗಿದೆ' ಎಂದರು.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, "ಮುಂದಿನ ಐದು ವರ್ಷಗಳಲ್ಲಿ ತಮಿಳುನಾಡಿಗೆ ಮೂರು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ನೆರವು ನೀಡಲಾಗುವುದು. ಇದು ರಾಜ್ಯಾದ್ಯಂತ ನಗರ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು, ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳು ಮತ್ತು ಗಂಭೀರ ಕಾಯಿಲೆಯ ಚಿಕಿತ್ಸಾ ವಿಭಾಗಗಳನ್ನು ಸ್ಥಾಪಿಸಲು ನೆರವಾಗುತ್ತದೆ" ಎಂದು ಮೋದಿ ಹೇಳಿದರು. ಮುಂಬರುವ ವರ್ಷಗಳಲ್ಲಿ, "ಭಾರತವನ್ನು ಗುಣಮಟ್ಟದ ಮತ್ತು ಅಗ್ಗದ ಆರೈಕೆಗಾಗಿ ಗೋ-ಟು ಇಂಡಿಯಾ ತಾಣವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು. ವೈದ್ಯಕೀಯ ಪ್ರವಾಸೋದ್ಯಮದ ಕೇಂದ್ರವಾಗಲು ಬೇಕಾದ ಎಲ್ಲವನ್ನೂ ಭಾರತ ಹೊಂದಿದೆ. ನಮ್ಮ ವೈದ್ಯರ ಕೌಶಲ್ಯದ ಆಧಾರದ ಮೇಲೆ ನಾನು ಇದನ್ನು ಹೇಳುತ್ತಿದ್ದೇನೆ, ”ಎಂದು ಅವರು ಹೇಳಿದರು. ಟೆಲಿಮೆಡಿಸಿನ್ ನತ್ತ ಗಮನಹರಿಸಬೇಕು ಎಂದು ಅವರು ವೈದ್ಯಕೀಯ ಸಮುದಾಯಕ್ಕೆ ಆಗ್ರಹಿಸಿದರು.
Augmenting health infrastructure & celebrating culture of Tamil Nadu. https://t.co/a3BoaJzmjK
— Narendra Modi (@narendramodi)
ವೈದ್ಯಕೀಯ ಕಾಲೇಜುಗಳು ಹಾಗೂ ಸಿಐಸಿಟಿ ನೂತನ ಕ್ಯಾಂಪಸ್ ಉದ್ಘಾಟನೆಯ ವೇಳೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಡಾ. ಎಲ್ ಮುರುಗನ್, ಡಾ.ಭಾರತಿ ಪವಾರ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ಉಪಸ್ಥಿತರಿದ್ದರು.
ಸಿಐಸಿಟಿಯ ಹೊಸ ಕ್ಯಾಂಪಸ್: ಚೆನ್ನೈನಲ್ಲಿ (Chennai ) ಸಿಐಸಿಟಿಯ (Central Institute of Classical Tamil) ಹೊಸ ಕ್ಯಾಂಪಸ್ ಸ್ಥಾಪನೆಯು (new campus )ಭಾರತೀಯ ಪರಂಪರೆಯನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಮತ್ತು ಶಾಸ್ತ್ರೀಯ ಭಾಷೆಗಳನ್ನು ಉತ್ತೇಜಿಸಲು ಪ್ರಧಾನ ಮಂತ್ರಿಯವರ ಯೋಚನೆಯ ಅನುಗುಣವಾಗಿ ನಿರ್ಮಾಣ ಮಾಡಲಾಗಿದೆ. ಹೊಸ ಕ್ಯಾಂಪಸ್ ಅನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರದ (Union Government) ಧನಸಹಾಯದಲ್ಲಿ ನಿರ್ಮಾಣ ಮಾಡಲಾಗಿದೆ. ಒಟ್ಟಾರೆ 24 ಕೋಟಿ ರೂ. ವೆಚ್ಚ ಇದಕ್ಕಾಗಿದೆ. ಇಲ್ಲಿವರೆಗೂ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಸಿಐಸಿಟಿ ಈಗ ಮೂರು ಅಂತಸ್ತಿನ ಹೊಸ ಕ್ಯಾಂಪಸ್ ನಿಂದ ಕಾರ್ಯನಿರ್ವಹಣೆ ಮಾಡಲಿದೆ. ಹೊಸ ಕ್ಯಾಂಪಸ್‌ನಲ್ಲಿ ವಿಶಾಲವಾದ ಗ್ರಂಥಾಲಯ, ಇ-ಲೈಬ್ರರಿ, ಸೆಮಿನಾರ್ ಹಾಲ್‌ಗಳು ಮತ್ತು ಮಲ್ಟಿಮೀಡಿಯಾ ಹಾಲ್‌ಗಳನ್ನು ಹೊಂದಿದೆ.
PM-CMs Meeting ಮುಖ್ಯಮಂತ್ರಿಗಳ ಜತೆ ಗುರುವಾರ ಪ್ರಧಾನಿ ಸಭೆ, ಎದುರುನೋಡುತ್ತಿರುವ ಕರ್ನಾಟಕ
ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿರುವ, ಸಿಐಸಿಟಿ ತಮಿಳು ಭಾಷೆಯ ಪ್ರಾಚೀನತೆ ಮತ್ತು ಅನನ್ಯತೆಯನ್ನು ಸ್ಥಾಪಿಸಲು ಸಂಶೋಧನಾ ಚಟುವಟಿಕೆಗಳನ್ನು ಮಾಡುವ ಮೂಲಕ ಶಾಸ್ತ್ರೀಯ ತಮಿಳಿನ ಪ್ರಚಾರಕ್ಕೆ ಕೊಡುಗೆ ನೀಡುತ್ತಿದೆ. ಸಂಸ್ಥೆಯ ಗ್ರಂಥಾಲಯವು 45,000 ಪ್ರಾಚೀನ ತಮಿಳು ಪುಸ್ತಕಗಳ ಶ್ರೀಮಂತ ಸಂಗ್ರಹವನ್ನು ಹೊಂದಿದೆ. ಶಾಸ್ತ್ರೀಯ ತಮಿಳನ್ನು ಉತ್ತೇಜಿಸಲು ಮತ್ತು ಅದರ ವಿದ್ಯಾರ್ಥಿಗಳನ್ನು ಬೆಂಬಲಿಸಲು, ಸಂಸ್ಥೆಯು ವಿಚಾರ ಸಂಕಿರಣಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದು, ಶಿಷ್ಯವೇತನ ನೀಡುವುದು ಇತ್ಯಾದಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.