ಬೆಂಗಳೂರು (ಜು.14): ಪಿಇಎಸ್ ವಿಶ್ವವಿದ್ಯಾಲಯ ಬಿ. ಟೆಕ್ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಿದ್ದ 2022ನೇ ಸಾಲಿನ ‘ಪೀ- ಸ್ಯಾಟ್’ ಪರೀಕ್ಷಾ ಫಲಿತಾಂಶವನ್ನು ಬುಧವಾರ ಪ್ರಕಟಿಸಿದ್ದು, ಮೊದಲ ರ‍್ಯಾಂಕ್ ತೆಲಂಗಾಣ ವಿದ್ಯಾರ್ಥಿ ಪಾಲಾಗಿದೆ. ಎರಡು, ಮೂರು ಮತ್ತು ನಾಲ್ಕನೇ ರ‍್ಯಾಂಕ್ ಸೇರಿದಂತೆ ಟಾಪ್ 10 ರ‍್ಯಾಂಕ್ ಗಳಲ್ಲಿ ಏಳು ರ‍್ಯಾಂಕ್ ಗಳನ್ನು ಬೆಂಗಳೂರಿನ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ.
ಪಿಇಎಸ್ ವಿವಿ ಕುಲಾಧಿಪತಿ ಪ್ರೊ.ಎಂ.ಆರ್.ದೊರೆಸ್ವಾಮಿ ಅವರು ಬುಧವಾರ ಹೊಸಕೆರೆಹಳ್ಳಿ ಬಳಿಯ ವಿವಿಯ ಕಚೇರಿಯಲ್ಲಿ ಫಲಿತಾಂಶ ಬಿಡುಗಡೆ ಮಾಡಿ ರ‍್ಯಾಂಕ್ ವಿಜೇತರನ್ನು ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು, ತೆಲಂಗಾಣದ ವಿದ್ಯಾರ್ಥಿ ನಂದನ್ ಮಂಜುನಾಥ ಇಮ್ಮಡಿಸೆಟ್ಟಿಪ್ರಥಮ ರ‍್ಯಾಂಕ್ ಪಡೆದಿದ್ದರೆ, ಎರಡನೇ ರಾರಯಂಕನ್ನು ಬೆಂಗಳೂರಿನ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಆತ್ಮಕುರಿ ವೆಂಕಟ ಮಾಧವ ಶ್ರೀರಾಮ್ ಮತ್ತು ಮೂರನೇ ರಾರಯಂಕನ್ನು ನ್ಯಾಷನಲ್ ಪಬ್ಲಿಕ್ ಶಾಲೆಯ ತನಯ್ ಗಾಡ್, ನಾಲ್ಕನೇ ರಾರಯಂಕನ್ನು ನಿತಿನ್ ವೆಚಾ ಪಡೆದುಕೊಂಡಿದ್ದಾರೆ. ಅದೇ ರೀತಿ 5ನೇ ರ‍್ಯಾಂಕ್ ಗೌಹಾಟಿಯ ಎಂ.ಡಿ.ಮರಫುದ್ದೀನ್ ಅಹಮದ್, 6ನೇ ರ‍್ಯಾಂಕ್ ಗುಜರಾತ್‌ನ ಜಶ್ ಝಾತಾಕಿಯಾ, 7ರಿಂದ 10 ರ ವರೆಗಿನ ರ‍್ಯಾಂಕ್ ಗಳನ್ನು ಕ್ರಮವಾಗಿ ಬೆಂಗಳೂರಿನ ಅಶೀಶ್ ಅಹುಜಾ, ಆದಿತ್ಯ ಕಿಶೋರ್, ಸಿ.ಎಸ್.ಸಿದ್ಧಾಥ್‌ರ್ ಮತ್ತು ಜತಿನ್ ವಿನೋದ್ ಕುಮಾರ್ ಪಡೆದುಕೊಂಡಿದ್ದಾರೆ. ಟಾಪ್ 10 ರ‍್ಯಾಂಕ್ ಪಡೆದಿರುವವರೆಲ್ಲರೂ ಬಾಲಕರಾಗಿರುವುದು ವಿಶೇಷ.
ಪಿಎಸ್‌ಇ ವಿವಿಯಲ್ಲಿನ 1200 ಬಿ.ಟೆಕ್ ಸೀಟುಗಳ ಪ್ರವೇಶಕ್ಕಾಗಿ ಪ್ರತೀ ವರ್ಷ ಪಿಇಎಸ್ ಸ್ಕಾಲರ್‌ಶಿಪ್ ಆಪ್ಟಿಟ್ಯೂಟ್ ಟೆಸ್ಟ್ (ಪೀ-ಸ್ಯಾಟ್) ನಡೆಸುತ್ತೇವೆ. ಪ್ರಸಕ್ತ ಸಾಲಿನಲ್ಲಿ 20 ಸಾವಿರ ವಿದ್ಯಾರ್ಥಿಗಳು ನೋಂದಾಯಿಸಿ ಕೊಂಡಿದ್ದರು. ಪರೀಕ್ಷೆ ಬರೆದ ಎಲ್ಲರೂ ಬಿ.ಟೆಕ್ ಪ್ರವೇಶಕ್ಕೆ ಅರ್ಹತೆ ಪಡೆದಿದ್ದು, ಅವರಿಗೆ ರ‍್ಯಾಂಕ್ ಆಧಾರದಲ್ಲಿ ಜು.23 ಮತ್ತು 24ರಂದು ಪಿಇಎಸ್ ಆವರಣದಲ್ಲಿ ಕೌನ್ಸೆಲಿಂಗ್ ನಡೆಸುತ್ತೇವೆ ಎಂದರು ತಿಳಿಸಿದರು.
ತಮ್ಮ ವಿವಿಯ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯೂನಿಕೇಷನ್ ವಿಭಾಗದ ಸಜೇಲ್ ಜೈನ್ ಎಂಬ ವಿದ್ಯಾರ್ಥಿಯು ಬಾಹ್ಯಕಾಶ ಸಂಶೋಧನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದು, ಅವರು ಡಾ ಕಲ್ಪನಾ ಚಾವ್ಲಾ ವಿದ್ಯಾರ್ಥಿ ವೇತನಕ್ಕೆ ಪಡೆಯಲಿದ್ದಾರೆ ಎಂದು ತಿಳಿಸಿ ಈ ವಿದ್ಯಾರ್ಥಿಗೆ ಶುಭ ಹಾರೈಸಿದರು.
2276 ವಿದ್ಯಾರ್ಥಿಗಳಿಗೆ ಉದ್ಯೋಗ: 2022ರಲ್ಲಿ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್, ಟೆಕ್ನಾಲಜಿ, ಮ್ಯಾನೇಜ್‌ಮೆಂಟ್, ಕಾಮರ್ಸ್, ಫಾರ್ಮಸಿ ವಿಭಾಗದಲ್ಲಿ ಪದವಿ ವ್ಯಾಸಂಗ ಮುಗಿಸಿದ 2,267 ವಿದ್ಯಾರ್ಥಿಗಳು ಕ್ಯಾಂಪಸ್ ಸೆಲೆಕ್ಷನ್ ವೇಳೆ ಹೆಸರಾಂತ ಕಂಪನಿಗಳಲ್ಲಿ ಉದ್ಯೋಗಾವಕಾಶಕ್ಕೆ ಅರ್ಹತೆ ಗಳಿಸಿದ್ದಾರೆ. ಇದರಲ್ಲಿ 1751 ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಆಯಾ ಸಂಸ್ಥೆಗಳಿಂದ ಖಚಿತವಾಗಿದೆ. ಉಳಿದ 584 ವಿದ್ಯಾರ್ಥಿಗಳಿಗೆ ಒಂದಕ್ಕಿಂತ ಹೆಚ್ಚಿನ ಆಫರ್ ಸಿಕ್ಕಿದೆ. ಅವರು ತಮ್ಮಿಷ್ಟದ ಸಂಸ್ಥೆಯಲ್ಲಿ ಉದ್ಯೋಗ ಆಯ್ಕೆ ಮಾಡಿಕೊಳ್ಳಬೇಕಿದೆ. ಒಟ್ಟು 468 ಕಂಪನಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಭಾಗವಹಿಸಿ ಪ್ರತಿಭಾನ್ವಿತ ಮಕ್ಕಳನ್ನು ಆಯ್ಕೆ ಮಾಡಿಕೊಂಡಿವೆ ಎಂದು ಇದೇ ವೇಳೆ ಪಿಇಎಸ್ ವಿವಿಯ ಕುಲಸಚಿವ ಡಾ ಕೆ.ಎಸ್.ಶ್ರೀಧರ್ ವಿವರಿಸಿದರು.
ಫೇಲ್ ಆದವರಿಗೆ ಉಚಿತ ತಾಂತ್ರಿಕ ತರಬೇತಿ : ಪಿಇಎಸ್ ವಿವಿಯು ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಅನುತ್ತೀರ್ಣ ಆದ ವಿದ್ಯಾರ್ಥಿಗಳಿಗೆ ಉಚಿತ ವೃತ್ತಿಪರ ಕೋರ್ಸುಗಳ ಮೂಲಕ ತಾಂತ್ರಿಕ ತರಬೇತಿ ನೀಡಲಾರಂಭಿಸಿದೆ. ಮೊಬೈಲ್, ಟಿವಿ ರಿಪೇರಿ, ಸಿಎನ್‌ಸಿ ಮಷಿನ್ ಅಪರೇಟಿಂಗ್, ಕಂಪ್ಯೂಟರ್ ಶಿಕ್ಷಣದ ಬಗ್ಗೆ ಮೂರು ತಿಂಗಳ ತರಬೇತಿ ನೀಡಲಿದ್ದು, ಅಸಕ್ತರು ವಿವಿಯನ್ನು ಸಂಪರ್ಕಿಸಿ ತರಬೇತಿ ಪಡೆಯಬಹುದಾಗಿದೆ. ಸದ್ಯ 15 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ ಎಂದು ಪಿಇಎಸ್ ವಿವಿ ಕುಲಪತಿ ಡಾ ಸೂರ್ಯ ಪ್ರಸಾದ್ ತಿಳಿಸಿದರು.
ವಿದ್ಯಾರ್ಥಿಗಳಿಂದ ಸಾಕು ಪ್ರಾಣಿ ಚಲನ ವಲನ ಗಮನಿಸಲು ವಾಚ್: ಮನುಷ್ಯರು ತಾವು ನಿತ್ಯ ಎಷ್ಟುನಡೆದಿದ್ದೇನೆ, ಓಡಿದ್ದೇನೆ ಇದರಿಂದ ಎಷ್ಟುಕೊಲೆಸ್ಟ್ರಾಲ್ ಕಡಿಮೆಯಾಗಿದೆ, ಹಾರ್ಚ್‌ಬೀಟ್, ರಕ್ತದೊತ್ತಡ ಎಷ್ಟಿದೆ ಎಂಬಿತ್ಯಾದಿ ತಮ್ಮ ದೈನಂದಿನ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಇರುವ ಸ್ಮಾರ್ಚ್ ವಾಚ್‌ಗಳ ರೀತಿಯಲ್ಲೇ ಸಾಕು ಪ್ರಾಣಿಗಳ ಚಟುವಟಿಕೆಗಳನ್ನೂ ಗಮನಿಸಬಹುದಾದ ಸ್ಮಾರ್ಚ್ ವಾಚ್‌ಗಳನ್ನು ಪಿಇಎಸ್ ವಿವಿಯ ವಿದ್ಯಾರ್ಥಿಗಳು ಸಂಶೋಧಿಸುತ್ತಿದ್ದಾರೆ.
ಈಗಾಗಲೇ ಕಳೆದ ಒಂದೇ ವರ್ಷದಲ್ಲಿ ನಾಯಿಗಳ ಚಲನವಲನ, ದೈಹಿಕ ಚಟುವಟಿಕೆ ಅಳೆದು ಮಾಹಿತಿ ನೀಡುವ ವಾಚನ್ನು ಸಂಶೋಧಿಸಿದ್ದು, ಇದೇ ತಂತ್ರಜ್ಞಾನ ಬಳಸಿಕೊಂಡು ಬೆಕ್ಕು, ಹಸು, ಮೇಕೆ, ಕುರಿ ಮತ್ತಿತರ ಪ್ರಾಣಿಗಳ ದೈಹಿಕ ಚಟುವಟಿಕೆ ಲೆಕ್ಕ ಹಾಕುವ ವಾಚ್‌ಗಳನ್ನು ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಸುದ್ದಿಗೋಷ್ಠಿ ವೇಳೆ ಈ ಮಾಹಿತಿ ನೀಡಿದ ಪಿಇಎಸ್ ನವೋದ್ಯಮ ವಿಭಾಗದ ಮುಖ್ಯಸ್ಥ ಸುರೇಶ್ ನರಸಿಂಹ, ಪಿಇಎಸ್ ವಿವಿಯಲ್ಲಿ ಎಂಜಿನಿಯರಿಂಗ್ ಮುಗಿಸಿ ‘ಫಾಂಡ್’ ಎಂಬ ಹೆಸರಿನಲ್ಲಿ ಸ್ಟಾರ್ಚ್‌ವೊಂದನ್ನು ಸ್ಥಾಪಿಸಿರುವ ಪ್ರಾರ್ಥನಾ, ಪಲ್ಲವಿ ಮತ್ತು ವಿಸ್ಮಯಾ ಎಂಬ ಮೂವರು ವಿದ್ಯಾರ್ಥಿಗಳು ಪೆಟ್‌ವಾಚ್ ಸಂಶೋಧನೆ ಮಾಡಿದ್ದು, ಸದ್ಯದಲ್ಲಿಯೇ ಅಧಿಕೃತವಾಗಿ ಈ ವಾಚನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದಾರೆ. ಆನ್‌ಲೈನ್ ಮೂಲಕ ವಾಚ್‌ಗಳು ಶೀಘ್ರದಲ್ಲೇ ಲಭ್ಯವಾಗಲಿವೆ. ಇದರಿಂದ ಮನೆಯಲ್ಲಿನ ಸಾಕು ಪ್ರಾಣಿಗಳ ಆರೋಗ್ಯವನ್ನೂ ಉತ್ತಮವಾಗಿಡಲು ನೆರವಾಗುತ್ತದೆ ಎಂದರು.