1500 ಮಾದರಿ ಸರ್ಕಾರಿ ಶಾಲೆಗಳ ಅಭಿವೃದ್ಧಿ: ಸಚಿವ ನಾಗೇಶ್‌

By Kannadaprabha NewsFirst Published Jul 14, 2022, 8:20 AM IST
Highlights

*   ಮಾದರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪೋಕನ್‌ ಇಂಗ್ಲಿಷ್‌ ಕಲಿಸಲಾಗುವುದು
*  ಪ್ರತಿ ತರಗತಿಗೆ ಒಬ್ಬ ಶಿಕ್ಷಕರನ್ನು ಒದಗಿಸಲಾಗುವುದು
*  ಈಗಿರುವ ಶಾಲೆಗಳಲ್ಲೇ ಮಾದರಿ ಶಾಲೆ ಆರಂಭ 

ಶಿರಸಿ(ಜು.14):  ರಾಜ್ಯದ 1,500 ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿಸುವ ಗುರಿ ಸರ್ಕಾರದ ಮುಂದಿದೆ. ಶೀಘ್ರದಲ್ಲಿ ಈ ಕೆಲಸವನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ ಹೇಳಿದರು.
ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿ, ಮಾದರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪೋಕನ್‌ ಇಂಗ್ಲಿಷ್‌ ಕಲಿಸಲಾಗುವುದು. ಪ್ರತಿ ತರಗತಿಗೆ ಒಬ್ಬ ಶಿಕ್ಷಕರನ್ನು ಒದಗಿಸಲಾಗುವುದು. ಈಗಿರುವ ಶಾಲೆಗಳಲ್ಲೇ ಮಾದರಿ ಶಾಲೆಗಳನ್ನು ಆರಂಭಿಸಲಾಗುತ್ತದೆ ಎಂದರು.

ಒಂದು ತರಗತಿಗೆ ಮಕ್ಕಳ ಸಂಖ್ಯೆ 15ಕ್ಕೆ ನಿಗದಿಗೊಳಿಸಬೇಕು ಎಂಬ ಬೇಡಿಕೆ ಇದೆ. ಆದರೆ, ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ಒಂದು ತರಗತಿಗೆ 30 ಮಕ್ಕಳಿರಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕತೆ ಬರುತ್ತದೆ. ಮಲೆನಾಡಿನ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೇ ಕಡಿಮೆ ಇದ್ದು, 12-13 ಮಕ್ಕಳು ಪ್ರತಿ ತರಗತಿಗೆ ಇರಲಿದ್ದಾರೆ. ಇಷ್ಟಾದರೂ ಮಕ್ಕಳ ಕೊರತೆ ಕಾರಣಕ್ಕೆ ಯಾವುದೇ ಶಾಲೆ ಮುಚ್ಚುವುದಿಲ್ಲ ಎಂದರು.

ನಾರಾಯಣ ಗುರು ಪಾಠ ಮತ್ತೆ ಸಮಾಜ ವಿಜ್ಞಾನಕ್ಕೇ ಸೇರ್ಪಡೆ: ನಾಗೇಶ್‌ ಸೂಚನೆ

ಪಠ್ಯಪುಸ್ತಕ ಪರಿಷ್ಕರಣೆ ಹಿಂದೆಯೂ ಆಗಿತ್ತು. ಆದರೆ, ನಾವು ಚರ್ಚೆ ನಡೆಸುತ್ತಿದ್ದೆವು. ಈಗಿನ ವಿರೋಧ ಪಕ್ಷಗಳಂತೆ ಬೀದಿಯಲ್ಲಿ ನಿಂತು ಕೂಗುತ್ತಿರಲಿಲ್ಲ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪಠ್ಯಪುಸ್ತಕ ಬದಲಾವಣೆ ಮಾಡಲಾಗಿತ್ತು. ಆದರೆ, ಇಂದು ರಾಜಕೀಯ ಪಕ್ಷಗಳು ಪಠ್ಯ ಬದಲಾವಣೆಯನ್ನು ರಾಜಕೀಯಗೊಳಿಸುತ್ತಿರುವುದು ದುರಾದೃಷ್ಟಎಂದರು.

ಸಂಸ್ಕೃತ ತೃತೀಯ ಭಾಷೆಯಾಗಿಸಲು ಶಿಫಾರಸು: ಸಚಿವ ನಾಗೇಶ

ಭಾರತೀಯ ಸಂಸ್ಕೃತಿ ಅರಿಯಲು ಸಂಸ್ಕೃತ ಅಗತ್ಯ. ಶಿಕ್ಷಣ ವ್ಯವಸ್ಥೆಯಲ್ಲಿ ತೃತೀಯ ಭಾಷೆಯಾಗಿ ಸಂಸ್ಕೃತವನ್ನಾಗಿಸಲು ನಾವು ಶಿಫಾರಸು ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ ಹೇಳಿದರು.
ಇಲ್ಲಿನ ಸ್ವರ್ಣವಲ್ಲಿಯಲ್ಲಿ ಗುರುಪೂರ್ಣಿಮೆ ಅಂಗವಾಗಿ 32ನೇ ಚಾತುರ್ಮಾಸ್ಯ ವ್ರತ ಸಂಕಲ್ಪದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯತ್ವವೇ ಇಲ್ಲದ ಅವಿವೇಕಿ ಶಿಕ್ಷಣ ಸಚಿವ ನಾಗೇಶ್‌ ಎಡವಟ್ಟುಗಳು ಒಂದೋ, ಎರಡೋ?: ಸಿದ್ದು

ಈ ದೇಶದಲ್ಲಿ ಏನು ಕಲಿಸಬೇಕು, ಹೇಗೆ ಕಲಿಸಬೇಕು ಎಂಬ ಚಿಂತನೆಗಳೇ ನಡೆದಿರಲಿಲ್ಲ. ಬ್ರಿಟಿಷ್‌ ಸ್ಥಾಪನೆಯ ವ್ಯವಸ್ಥೆಗಳನ್ನು ಬದಲಿಸಲು ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಶಿಕ್ಷಣ ಪದ್ಧತಿ ಬದಲಾವಣೆ ಆಗಬೇಕು ಎಂದು ಸ್ವಾಮಿ ವಿವೇಕಾನಂದರು, ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ್ದರು. ಜಗತ್ತಿನ ಶ್ರೇಷ್ಠ ಭಾಷೆ ಸಂಸ್ಕೃತ ಎಲ್ಲಿ ಕಣ್ಮರೆ ಆಗಿಬಿಡಬಹುದು ಎಂಬ ಆತಂಕ ಕಾಡುತ್ತಿತ್ತು. ಆದರೆ, ಅವರ ಆಶಯಗಳು ಈ ದೇಶದಲ್ಲಿ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮೆಕಾಲೆ ಶಿಕ್ಷಣದಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಆಗಿದೆ. ಎಡರಂಗದ ವಿಚಾರ ಧಾರೆಯೇ ಶಿಕ್ಷಣ ವ್ಯವಸ್ಥೆಯಲ್ಲೂ ನಡೆದುಕೊಂಡು ಬಂದಿತ್ತು. ಅಟಲ್‌ಜಿ ಕಾಲದಲ್ಲಿ ಶಿಕ್ಷಣ ವ್ಯವಸ್ಥೆ ಬದಲಿಸಲು ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಹೊಸ ಶಿಕ್ಷಣ ನೀತಿ ಜಾರಿಗೆ ತರಲು ಯತ್ನಗಳು ಈಗ ನಡೆದಿವೆ. ರಾಜ್ಯದಲ್ಲಿ ಶಿಕ್ಷಣದಲ್ಲಿ ನೈತಿಕ ಶಿಕ್ಷಣ ಅಳವಡಿಸಲು ಯತ್ನ ನಡೆದಿದೆ. ಎಲ್ಲ ಸ್ವಾಮೀಜಿಗಳ ಸಲಹೆ ಪಡೆದು ಪಠ್ಯಕ್ರಮ ರಚಿಸಲಿದ್ದೇವೆ ಎಂದು ಹೇಳಿದರು.
 

click me!