ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಖಾಸಗಿ ಸ್ಕೂಲ್‌ನ ಸೌಲಭ್ಯಗಳು ದೊರಕಬೇಕು: ದೊರೆಸ್ವಾಮಿ

By Girish Goudar  |  First Published Dec 9, 2022, 11:05 PM IST

ವಿಜ್ಞಾನ ಮೇಳ ಕಾರ್ಯಕ್ರಮವನ್ನು ವಿಸ್ತಾರಗೊಳಿಸಿ, ಕರ್ನಾಟಕ ಎಲ್ಲ 70 ವಿಶ್ವವಿದ್ಯಾಲಯಗಳೂ ತಮ್ಮ ವ್ಯಾಪ್ತಿಗೆ ಒಳಪಟ್ಟ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಇಂತಹ ಮೇಳಗಳನ್ನು ಆಯೋಜಿಸಬೇಕು: ದೊರೆಸ್ವಾಮಿ


ವರದಿ: ನಟರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು(ಡಿ.09): ಕರ್ನಾಟಕ ಸರ್ಕಾರ ಬಡವರ ಕನ್ನಡ ಶಾಲೆ ಮತ್ತು ಶ್ರೀಮಂತರ ಶಾಲೆಗಳ ಅಂತರವನ್ನು ಅಳಿಸಲು ಪೂರ್ಣ ಸನ್ನದ್ಧವಾಗಬೇಕಿದೆ. ಮಕ್ಕಳಿಗೆ ಹೈಟೆಕ್‌ ಪ್ರಯೋಗಾಲಯ ಸೌಲಭ್ಯ ದೊರೆಯಬೇಕಿದೆ. 40 ಸಾವಿರ ಸರ್ಕಾರಿ ಶಾಲೆಗಳಿದ್ದರೂ ಇನ್ನೂ ಈ ಸೌಲಭ್ಯ ದೊರೆತಿಲ್ಲ, ಈ ನಿಟ್ಟಿನಲ್ಲಿ ಎಲ್ಲಾ ಚುನಾಯಿತ ಪ್ರತಿನಿಧಿಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಶಾಲಾ ದತ್ತು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್ ದೊರೆಸ್ವಾಮಿ ಕರೆ ನೀಡಿದರು. 

Tap to resize

Latest Videos

ಇಂದು(ಶುಕ್ರವಾರ) ಕರ್ನಾಟಕ ಸರ್ಕಾರದ ಸಹಯೋಗದಲ್ಲಿ 100 ಸರ್ಕಾರಿ ಶಾಲೆಗಳನ್ನ ಆಯ್ದುಕೊಂಡು 2400 ಮಕ್ಕಳಿಗಾಗಿ ವಿಜ್ಞಾನ ಮೇಳ ಮತ್ತು ಯೋಗ ಶಿಬಿರವನ್ನು PES ಯೂನಿವರ್ಸಿಟಿಯಲ್ಲಿ 3 ದಿನಗಳ ಕಾಲ ಆಯೋಜಿಸಲಾಗಿದೆ. 

Kannada University ಘಟಿಕೋತ್ಸವ: ಭಾರತ ಜ್ಞಾನದ ವಿಶ್ವಗುರು ಆಗಲಿ: ರಾಜ್ಯಪಾಲ

ವಿಜ್ಞಾನ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ದೊರೆಸ್ವಾಮಿ ಅವರು, ಬಡವರ ಮಕ್ಕಳು ಓದುವ ಸರ್ಕಾರಿ ಶಾಲೆಗಳಿಗೆ, ಶ್ರೀಮಂತ ಮಕ್ಕಳು ಓದುವ ಖಾಸಗಿ ಶಾಲೆಗಳಂತೆ ಎಲ್ಲಾ ಸೌಲಭ್ಯಗಳು ದೊರೆಯಬೇಕು. ವಿಜ್ಞಾನ ಮೇಳ ಕಾರ್ಯಕ್ರಮವನ್ನು ವಿಸ್ತಾರಗೊಳಿಸಿ, ಕರ್ನಾಟಕ ಎಲ್ಲ 70 ವಿಶ್ವವಿದ್ಯಾಲಯಗಳೂ ತಮ್ಮ ವ್ಯಾಪ್ತಿಗೆ ಒಳಪಟ್ಟ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಇಂತಹ ಮೇಳಗಳನ್ನು ಆಯೋಜಿಸಬೇಕು ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ, ಕರ್ನಾಟಕ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲೆಹೆಗಾರರಾದ ಎಂ. ಆರ್ ದೊರೆಸ್ವಾಮಿ ಹೇಳಿದರು.

ಜ್ಞಾನಕ್ಕೆ ತಾರತಮ್ಯವಿಲ್ಲ, ವಿಜ್ಞಾನಿ ದೇಶಕ್ಕೆ ಸಂಪತ್ತು:

ಕಂದಾಯ ಸಚಿವ ಆರ್.ಅಶೋಕ ಮಾತನಾಡಿ ನಾನೂ ಸರ್ಕಾರಿ ಶಾಲೆಯಲ್ಲಿ ಓದಿದವನು , ದೊರೆಸ್ವಾಮಿ ಸಹ ಓದಿದ್ದು, ಸರ್ಕಾರಿ ಶಾಲೆಯಲ್ಲೇ, ಜ್ಞಾನಕ್ಕೆ ಖಾಸಗಿ ಅಥವಾ ಸರ್ಕಾರಿ ಎನ್ನುವ ತಾರತಮ್ಯವಿಲ್ಲ. ಸಾಧಕರು ಸಾಧನೆ ಮಾಡುತ್ತಾರೆ. ಉಳಿದವರು ಸೋಮಾರಿಗಳಾಗುತ್ತಾರೆ. ಜ್ಞಾನವಿರುವವರಿಗೆ ವಿಜ್ಞಾನ ಕಂಡಿತವಾಗಿ ಅರ್ಥವಾಗುತ್ತದೆ. ನರೇಂದ್ರ ಮೋದಿ ಯೋಗವನ್ನು ಇಡೀ ದೇಶಕ್ಕೆ ಕೊಟ್ಟಿದ್ದಾರೆ. ಭಾರತ ಈಗ ಹೊಸ ಆವಿಷ್ಕಾರಗಳಲ್ಲಿ ತೊಡಗಿದೆ ಹಾಗೂ ಸಿರಿ ಧಾನ್ಯಗಳ ವಿಚಾರಕ್ಕೆ ವಿಶ್ವ ಗುರು ಆಗುವುದಕ್ಕೆ ಹೊರಟಿದೆ ಈ ಸಾಧನೆಗೆ ಕಾರಣವೇ ಭಾರತದ ವಿಜ್ಞಾನಿಗಳು. ಒಬ್ಬ ವಿಜ್ಞಾನಿ ಮನೆಗೆ ಅಷ್ಟೇ ಸಂಪತ್ತಾಗುವುದಿಲ್ಲ ಇಡೀ ದೇಶಕ್ಕೆ ಸಂಪತ್ತಾಗುತ್ತಾನೆ ಎಂದು ಹೇಳಿದರು.

Mandya: ಮೂಲ ಸೌಲಭ್ಯವಿಲ್ಲದ ಮಂಡ್ಯ ವಿಶ್ವವಿದ್ಯಾನಿಲಯ

ಸಮರ್ಪಣಾಭಾವ ಬೆಳಸಿಕೊಳ್ಳಿ:

ಭಾರತ ರತ್ನ ಪ್ರೊ. ಎನ್.ಆರ್. ರಾವ್ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಮಾತನಾಡಿ, ಸಾಧನೆಗೆ ಬೇಕಾದ ಏಕಾಗ್ರತೆ, ನಾಯಕತ್ವ, ಸಮರ್ಪಣಾ ಭಾವ  ಹಾಗೂ ಉನ್ನತಧೇಯಗಳ ಕನಸು ಇವೆಲ್ಲವನ್ನು ಮೈಗೂಡಿಸಿಕೊಳ್ಳಿ, ದೇಶದ ಹಾಗೂ ವಿಶ್ವದ ಗಮನಸೆಳೆದ ಇಂತಹ ಶ್ರೇಷ್ಟ ವಿದ್ವಾಂಸರನ್ನು ಪರಿಚಯಿಸಿರುವ ಉದ್ದೇಶವೇ ನೀವು.  ಅವರಂತೆ ಉನ್ನತಸಾಧನೆಗಳ ಮೂಲಕ ನಿಮಗೆ ನಿಮ್ಮ ಕುಟುಂಬಕ್ಕೆ, ನಿಮ್ಮಗುರುಗಳಿಗೆ, ಶಾಲೆಗೆ. ಇಡೀ ದೇಶಕ್ಕೆ ಹೆಸರು ತರುವ ಕನಸು ನಿಮ್ಮದಾಗಲಿ, ಜ್ಞಾನ ವಿಜ್ಞಾನ ಕೌಶಲಗಳ ಈ ಕಾರ್ಯವನ್ನು ಸದುಪಯೋಗಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಕುಲಾಧಿಪತಿ ಪದ್ಮಶ್ರೀ ಪ್ರೊ. ಎಚ್‌. ಆರ್. ನಾಗೇಂದ್ರ, ಕುಲಸಚಿವ ಡಾ.ಕೆ.ಎಸ್. ಶೀಧರ್, ಕುಲಸಚಿವ ಡಾ. ಜೆ. ಸೂರ್ಯಪ್ರಸಾದ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
 

click me!