ಮಕ್ಕಳು ಚೆನ್ನಾಗಿ ಓದುವ ಬುದ್ಧಿವಂತ ಮಕ್ಕಳ ಜೊತೆಗೇ ಗೆಳೆತನ ಮಾಡಬೇಕು. ಓದಿನ ಹಾಗೂ ಪರೀಕ್ಷೆಯ ಒತ್ತಡ ತಮ್ಮನ್ನು ಕುಗ್ಗಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ನವದೆಹಲಿ (ಜನವರಿ 30, 2024): ಸ್ಪರ್ಧಾತ್ಮಕ ಬದುಕಿನಲ್ಲಿ ಒತ್ತಡ ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಪೋಷಕರು ಹಾಗೂ ಶಿಕ್ಷಕರು ಸೇರಿ ಬೆಳೆಸಬೇಕು ಎಂದಿರುವ ಪ್ರಧಾನಿ ನರೇಂದ್ರ ಮೋದಿ, ವಿದ್ಯಾರ್ಥಿಗಳ ಸವಾಲನ್ನು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಒಟ್ಟಾಗಿ ಎದುರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಏಳನೇ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದ ಅವರು, ಪೋಷಕರು ಮಕ್ಕಳ ಮಾರ್ಕ್ಸ್ ಕಾರ್ಡನ್ನು ತಮ್ಮ ವಿಸಿಟಿಂಗ್ ಕಾರ್ಡ್ ರೀತಿ ಬಳಸಬಾರದು. ಹಾಗೆಯೇ, ಮಕ್ಕಳು ಬೇರೆಯವರ ಜೊತೆಗೆ ಸ್ಪರ್ಧಿಸುವುದನ್ನು ಬಿಟ್ಟು ತಮ್ಮ ಜೊತೆಗೇ ತಾವು ಸ್ಪರ್ಧಿಸಬೇಕು ಎಂದು ಕಿವಿಮಾತು ಹೇಳಿದರು.
undefined
ಒತ್ತಡ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನಿವಾರ್ಯ. ಯಾವುದೇ ರೀತಿಯ ಒತ್ತಡ ಎದುರಿಸಲು ಮಕ್ಕಳು ಸನ್ನದ್ಧರಾಗಬೇಕು. ಆ ಗುಣವನ್ನು ಪೋಷಕರು ಹಾಗೂ ಶಿಕ್ಷಕರು ಸೇರಿ ಅವರಲ್ಲಿ ಬೆಳೆಸಬೇಕು. ಸ್ಪರ್ಧೆಯು ನಮಗೆ ಸ್ಫೂರ್ತಿಯಾಗಬೇಕು. ಸ್ಪರ್ಧೆ ಆರೋಗ್ಯಕರವಾಗಿರಬೇಕು. ಹೀಗಾಗಿ ಮಕ್ಕಳು ಚೆನ್ನಾಗಿ ಓದುವ ಬುದ್ಧಿವಂತ ಮಕ್ಕಳ ಜೊತೆಗೇ ಗೆಳೆತನ ಮಾಡಬೇಕು. ಓದಿನ ಹಾಗೂ ಪರೀಕ್ಷೆಯ ಒತ್ತಡ ತಮ್ಮನ್ನು ಕುಗ್ಗಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳ ಮೇಲೆ ಒತ್ತಡ ಹಾಕಬೇಡಿ:
ತಮ್ಮ ಬದುಕಿನಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗದ ಪೋಷಕರು ಮಕ್ಕಳ ಮೇಲೆ ಹೆಚ್ಚು ಒತ್ತಡ ಹಾಕುತ್ತಾರೆ. ಬೇರೆ ಮಕ್ಕಳ ಜೊತೆಗೆ ಹೋಲಿಸಿ ತಮ್ಮ ಮಕ್ಕಳನ್ನು ಹಂಗಿಸುತ್ತಾರೆ. ಇದು ತಪ್ಪು. ಯಾರಾದರೂ ಸಿಕ್ಕಾಗ ತಮ್ಮ ಬಗ್ಗೆ ಮಾತಾಡುವುದನ್ನು ಬಿಟ್ಟು ಮಕ್ಕಳ ಸಾಧನೆಯ ಬಗ್ಗೆ ಹೇಳುತ್ತಾರೆ. ಆದರೆ, ಪೋಷಕರು ಹೀಗೆ ಮಕ್ಕಳ ಮಾರ್ಕ್ಸ್ ಕಾರ್ಡನ್ನು ತಮ್ಮ ವಿಸಿಟಿಂಗ್ ಕಾರ್ಡ್ ರೀತಿ ಬಳಸಬಾರದು ಎಂದು ಮೋದಿ ಸಲಹೆ ನೀಡಿದರು.
ಗಲಾಟೆ ಸಂಸದರಿಗೆ ಮೋದಿ ಚಾಟಿ: ನಿಯಮ ಉಲ್ಲಂಘಿಸುವ ಸಂಸದರಿಗೆ ಬೆಂಬಲ ಸರಿಯೇ? ವಿಪಕ್ಷಗಳಿಗೆ ಟಾಂಗ್
ಶಿಕ್ಷಕರು - ಮಕ್ಕಳ ಮಧ್ಯೆ ಬಾಂಧವ್ಯ:
ಶಿಕ್ಷಕರು ವಿದ್ಯಾರ್ಥಿಗಳ ಜೊತೆಗೆ ಸಿಲೆಬಸ್‌ಗೂ ಮೀರಿದ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕು. ಮಕ್ಕಳು ತಮಗೆ ಎದುರಾಗುವ ಸಣ್ಣಪುಟ್ಟ ಸಮಸ್ಯೆಗಳನ್ನು ಶಿಕ್ಷಕರ ಬಳಿ ಹೇಳಿಕೊಳ್ಳುವಂತಿರಬೇಕು. ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳಿಗೆ ಬರೆಯುವ ಅಭ್ಯಾಸವೇ ಇಲ್ಲದಂತಾಗುತ್ತಿದೆ. ವಿದ್ಯಾರ್ಥಿಗಳು ಕನಿಷ್ಠ ಪಕ್ಷ ತಮ್ಮ ಶೇ. 50 ರಷ್ಟು ಸಮಯವನ್ನು ಬರೆಯುವುದಕ್ಕೆ ಮೀಸಲಿಡುವಂತೆ ಶಿಕ್ಷಕರು ನೋಡಿಕೊಳ್ಳಬೇಕು ಎಂದು ಮೋದಿ ಹೇಳಿದರು.
ಶಿಕ್ಷಣ ಇಲಾಖೆಯು ಈ ಬಾರಿಯ ಪರೀಕ್ಷಾ ಪೇ ಚರ್ಚಾವನ್ನು ಭಾರತ ಮಂಟಪಮ್‌ನಲ್ಲಿ ಆಯೋಜಿಸಿತ್ತು. 2.26 ಕೋಟಿ ಮಕ್ಕಳು, ಪೋಷಕರು ಹಾಗೂ ಶಿಕ್ಷಕರು ನೋಂದಣಿ ಮಾಡಿಕೊಂಡು ಆನ್‌ಲೈನ್ ಮೂಲಕ ಭಾಗವಹಿಸಿದ್ದರು.
ಇದು ನನಗೂ ಪರೀಕ್ಷೆ ಇದ್ದ ಹಾಗೆ: ಮೋದಿ
ಪರೀಕ್ಷಾ ಪೇ ಚರ್ಚಾ ಎಂಬುದು ನನಗೂ ಪರೀಕ್ಷೆಯಿದ್ದ ಹಾಗೆ. ವಿದ್ಯಾರ್ಥಿಗಳು ಇಂದು ಹಿಂದೆಂದಿಗಿಂತ ಹೆಚ್ಚು ಸೃಜನಶೀಲರಾಗಿದ್ದಾರೆ. ಈ ವಿದ್ಯಾರ್ಥಿಗಳೇ ನಮ್ಮ ಭವಿಷ್ಯವನ್ನು ರೂಪಿಸಲಿದ್ದಾರೆ. ಅವರೊಂದಿಗೆ ಸಂವಾದ ನಡೆಸುವುದು ನನ್ನನ್ನು ನಾನೇ ಪರೀಕ್ಷೆಗೆ ಒಡ್ಡಿಕೊಂಡಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನನಗೆ 30 ಸೆಕೆಂಡ್‌ನಲ್ಲಿ ನಿದ್ದೆ ಬರುತ್ತದೆ: ಮೋದಿ
ಆರೋಗ್ಯಕರ ಜೀವನಶೈಲಿ ಬೆಳೆಸಿಕೊಂಡರೆ ಓದು ಚೆನ್ನಾಗಿ ತಲೆಗೆ ಹತ್ತುತ್ತದೆ. ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯುವುದು ಹಾಗೂ ಚೆನ್ನಾಗಿ ನಿದ್ದೆ ಮಾಡುವುದು ಬಹಳ ಮುಖ್ಯ. ಎಷ್ಟೇ ಒತ್ತಡವಿದ್ದರೂ ಅದನ್ನು ನಿಭಾಯಿಸಿಕೊಂಡು ಚೆನ್ನಾಗಿ ನಿದ್ದೆ ಮಾಡಬೇಕು. ನನಗಂತೂ ಮಲಗಿದ 30 ಸೆಕೆಂಡ್‌ನಲ್ಲಿ ನಿದ್ದೆ ಬಂದುಬಿಡುತ್ತದೆ. ಮಲಗಿದಾಗ ಚೆನ್ನಾಗಿ ನಿದ್ದೆ ಮಾಡುತ್ತೇನೆ. ಎದ್ದಾಗ ಸಂಪೂರ್ಣ ಎಚ್ಚರವಿರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಊಟ, ತಿಂಡಿ ವೇಳೆ ಮೊಬೈಲ್ ಬೇಡ; ಮನೆಯಲ್ಲಿ ಎಲ್ಲರೂ ಫೋನ್ ಪಾಸ್ವರ್ಡ್ ಹಂಚಿಕೊಳ್ಳಿ: ಮೋದಿ
ನವದೆಹಲಿ: ಮನೆಯಲ್ಲಿ ಎಲ್ಲರೂ ತಮ್ಮ ಮೊಬೈಲ್ ಫೋನ್‌ಗಳ ಪಾಸ್ವರ್ಡ್‌ಗಳನ್ನು ಎಲ್ಲರ ಜೊತೆಗೂ ಹಂಚಿಕೊಳ್ಳಬೇಕು. ಇದರಿಂದ ನಮ್ಮ ವೈಯಕ್ತಿಕ ಬದುಕಿನಲ್ಲಿ ಪಾರದರ್ಶಕತೆ ಬರುತ್ತದೆ. ಜೊತೆಗೆ ಪರಸ್ಪರರ ನಡುವೆ ಬಾಂಧವ್ಯ ಹೆಚ್ಚಾಗಿ, ಅನುಮಾನಗಳು ದೂರವಾಗುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.
ಪರೀಕ್ಷಾ ಪೇ ಚರ್ಚಾದಲ್ಲಿ ಮಾತನಾಡಿದ ಅವರು, ಪೋಷಕರು ಮನೆಯಲ್ಲಿ ಮೊಬೈಲ್ ಫೋನ್‌ನಂತಹ ಗ್ಯಾಜೆಟ್ ಬಳಸುವುದಕ್ಕೆ ಕೆಲ ನಿಯಮಗಳನ್ನು ವಿಧಿಸಬೇಕು. ಊಟ, ತಿಂಡಿ ಮಾಡುವಾಗ ಯಾವುದೇ ಕಾರಣಕ್ಕೂ ಮೊಬೈಲ್ ಬಳಸಬಾರದು. ತಂತ್ರಜ್ಞಾನದ ಲಾಭವನ್ನು ಎಲ್ಲರೂ ಪಡೆಯಬೇಕು, ಆದರೆ ತಂತ್ರಜ್ಞಾನ ನಮ್ಮ ಬದುಕಿಗೆ ಹೊರೆಯಾಗಬಾರದು. ಅತಿಯಾದರೆ ಎಲ್ಲವೂ ವಿಷವಾಗುತ್ತದೆ ಎಂದು ತಿಳಿಸಿದರು.
ಮನೆಯಲ್ಲಿ ‘ನೋ ಗ್ಯಾಜೆಟ್ ಜೋನ್’ ನಿಗದಿಪಡಿಸಬೇಕು. ಅಲ್ಲಿ ಮೊಬೈಲ್ ಬಳಸಬಾರದು. ಉದಾಹರಣೆಗೆ, ಊಟ, ತಿಂಡಿ ಮಾಡುವ ಜಾಗದಲ್ಲಿ ಮೊಬೈಲ್ ಬಳಸಲೇಬಾರದು. ಇದೇ ವೇಳೆ, ಮಕ್ಕಳು ತಮ್ಮ ಪೋಷಕರಿಗೆ ತಂತ್ರಜ್ಞಾನ ಬಳಸುವುದನ್ನು ಹೇಳಿಕೊಡಬೇಕು ಎಂದು ಕಿವಿಮಾತು ಹೇಳಿದರು.
‘ಅತಿ’ಗಳನ್ನು ಬಿಡಿ:
ಸಮತೋಲಿತ ಜೀವನಶೈಲಿ ರೂಢಿಸಿಕೊಳ್ಳಲು ‘ಎಲ್ಲಾ ಅತಿಗಳನ್ನೂ’ ಬಿಡಬೇಕು. ಅತಿಯಾಗಿ ಮೊಬೈಲ್ ಬಳಸುವುದನ್ನು ಮಕ್ಕಳು ಬಿಡಬೇಕು. ಮಲಗುವುದಕ್ಕೆ ಮುಂಚೆ ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾ ಇರಬೇಡಿ. ಅದು ನಿದ್ದೆಯನ್ನು ಹಾಳುಮಾಡುತ್ತದೆ. ಹೇಗೆ ಮೊಬೈಲ್ ಫೋನ್ ಕೆಲಸ ಮಾಡುವುದಕ್ಕೆ ರೀಚಾರ್ಜ್ ಮಾಡಬೇಕೋ ಹಾಗೆಯೇ ನಮ್ಮ ದೇಹ ಸರಿಯಾಗಿ ಕೆಲಸ ಮಾಡುವುದಕ್ಕೂ ಅದನ್ನು ರೀಚಾರ್ಜ್ ಮಾಡಬೇಕಾಗುತ್ತದೆ. ದೇಹಕ್ಕೆ ವಿಶ್ರಾಂತಿ ನೀಡುವುದೇ ಅದನ್ನು ರೀಚಾರ್ಜ್ ಮಾಡುವುದಕ್ಕಿರುವ ಏಕೈಕ ಮಾರ್ಗ ಎಂದು ಪ್ರಧಾನಿ ಮೋದಿ ತಿಳಿಸಿದರು.
ಮೋದಿ ಟಾಪ್ 10 ಕಿವಿಮಾತು