School Fee: ಶುಲ್ಕ ಕಟ್ಟದ ಮಕ್ಕಳನ್ನು ಬಿಸಿಲಲ್ಲಿ ನಿಲ್ಲಿಸಿದ ಶಾಲೆ ವಿರುದ್ಧ ಆಕ್ರೋಶ

By Kannadaprabha NewsFirst Published Dec 22, 2021, 5:57 AM IST
Highlights

*   ಕಮಲಾನಗರದ ಅಮರವಾಣಿ ಶಾಲೆ 
*   ಶಾಲಾ ಆಡಳಿತ ಮಂಡಳಿಯಿಂದ ಅಮಾನವೀಯ ವರ್ತನೆ
*   ಮಕ್ಕಳ ಆರೋಗ್ಯದಲ್ಲಿ ಏರುಪೇರು
 

ಬೆಂಗಳೂರು(ಡಿ.22):  ಶುಲ್ಕ ಕಟ್ಟದ(School Fee) ಮಕ್ಕಳನ್ನು ಬಿಸಿಲಿನಲ್ಲಿ ನಿಲ್ಲಿಸಿದ್ದು, ಇದರಿಂದ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಆರೋಪಿಸಿ ಪೋಷಕರು ಕಮಲಾನಗರದ ಅಮರವಾಣಿ ಶಾಲೆ ಮುಂದೆ ಗುಂಪುಗೂಡಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಮಂಗಳವಾರ ನಡೆದಿದೆ. 10 ಸಾವಿರ ರು. ಶುಲ್ಕ ಬಾಕಿ ಉಳಿಸಿಕೊಂಡಿದ್ದಕ್ಕೆ ಮಕ್ಕಳನ್ನು(Children) ಸೋಮವಾರ ಇಡೀ ದಿನ ಕ್ಲಾಸ್‌ನಿಂದ ಹೊರಹಾಕಿದ್ದಾರೆ. ಬಿಸಿಲಿನಲ್ಲಿ ನಿಲ್ಲಿಸಿದ್ದರಿಂದ ಮಕ್ಕಳ ಆರೋಗ್ಯದಲ್ಲಿ(Health) ಏರುಪೇರಾಗಿದೆ. ತಲೆನೋವು ಮತ್ತು ಜ್ವರದಿಂದ ಮಕ್ಕಳು ಬಳಲುತ್ತಿದ್ದಾರೆ ಎಂದು ಆರೋಪಿಸಿ ಪೋಷಕರು(Parents) ಮಂಗಳವಾರ ಶಾಲೆ ಬಳಿ ಬಂದು ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದರು.

ಸಮಯಾವಕಾಶ ನೀಡಿ ಎಂದರೂ ಶಾಲೆಯವರು ಕೇಳುತ್ತಿಲ್ಲ. ಶುಲ್ಕ ಕಟ್ಟಿ ಇಲ್ಲ ಟಿಸಿ ತೆಗೆದುಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ. ಮಕ್ಕಳ ವಿರುದ್ಧ ಅಮಾನವೀಯವಾಗಿ ವರ್ತಿಸಿದ್ದಾರೆ. ಕೊರೋನಾ(Coronavirus) ಸಂಕಷ್ಟದ ಹಿನ್ನೆಲೆಯಲ್ಲೂ ಕಳೆದ ವರ್ಷ ಶುಲ್ಕ ಪಾವತಿಸಿದ್ದೇವೆ. ಈ ಸಲ ಸ್ವಲ್ಪ ವಿಳಂಬವಾಗಿದೆ. ಆದ್ದರಿಂದ ಕಾಲವಕಾಶ ನೀಡಬೇಕು ಎಂದು ಪೋಷಕರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪೋಷಕರು ಮತ್ತು ಶಾಲೆಯ ಸಿಬ್ಬಂದಿ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿ ಗದ್ದಲ ಉಂಟಾಯಿತು. ಶಾಲೆಯ ಕೆಲ ಸಿಬ್ಬಂದಿ ಕೊನೆಗೆ ಪೋಷಕರನ್ನು ಸಮಾಧಾನಪಡಿಸಿ ಕಳುಹಿಸಿದರು.

National Education Policy: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಯಾವಾಗ? ಸ್ಪಷ್ಟನೆ ಕೊಟ್ಟ ಸಚಿವ

ಕಳೆದ ವರ್ಷದ ಖಾಸಗಿ ಶಾಲಾ ಶುಲ್ಕ 15% ಕಡಿತ

ಹೈಕೋರ್ಟ್‌(Highcourt) ಆದೇಶದ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳು ಶೇ. 15ರಷ್ಟು ಬೋಧನಾ ಶುಲ್ಕ ಕಡಿತಗೊಳಿಸಿ, ಶೇ. 85ರಷ್ಟು ಶುಲ್ಕ ಪಡೆಯಬೇಕು. ಹೆಚ್ಚುವರಿ ಶುಲ್ಕ(Fees) ಪಡೆದಿದ್ದರೆ ವಾಪಸ್‌ ನೀಡಬೇಕು, ಇನ್ನುಳಿದ ಯಾವುದೇ ಶುಲ್ಕ ಪಡೆಯಬಾರದೆಂದು ರಾಜ್ಯ ಸರ್ಕಾರ(Government Of Karnataka) ಆದೇಶ ಹೊರಡಿಸಿದೆ.

ಒಂದೊಮ್ಮೆ ಪೂರ್ಣ ಶುಲ್ಕ ಪಡೆದಿದ್ದರೆ ಪೋಷಕರಿಗೆ(Parents) ಹಿಂದಿರುಗಿಸಬೇಕು. ಇಲ್ಲದಿದ್ದರೆ, 2021-22 ನೇ ಸಾಲಿನ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕು, ಬೋಧನಾ ಶುಲ್ಕ (Tuition Feeಹೊರತುಪಡಿಸಿ ಬೇರಾವುದೇ ಶುಲ್ಕ ಪಡೆಯುವಂತಿಲ್ಲ. ಶಾಲಾ ಅಭಿವೃದ್ಧಿ ಶುಲ್ಕ(School Development Fee), ಐಚ್ಛಿಕ ಶುಲ್ಕ, ಟ್ರಸ್ಟ್‌ ಹಾಗೂ ಸೊಸೈಟಿಗಳಿಗೆ ಯಾವುದೇ ವಂತಿಗೆ ಸ್ವೀಕರಿಸದಂತೆ ಸರ್ಕಾರ ನಿರ್ಬಂಧ ವಿಧಿಸಿದೆ. ಒಂದೊಮ್ಮೆ, ಶೇ.15 ಕ್ಕಿಂತಲೂ ಹೆಚ್ಚು ಶುಲ್ಕ ಕಡಿತಗೊಳಿಸಲು ಆಡಳಿತ ಮಂಡಳಿಗಳು ಇಚ್ಛಿಸಿದರೆ ನೀಡಬಹುದು ಎಂದು ತಿಳಿಸಲಾಗಿದೆ.

ಹೆಚ್ಚುವರಿ ಶುಲ್ಕ ವಾಪಸ್ ನೀಡಲು ಖಾಸಗಿ ಶಾಲೆಗಳಿಗೆ ಸರ್ಕಾರ ಆದೇಶ

2020-21ನೇ ಶೈಕ್ಷಣಿಕ ವರ್ಷದಲ್ಲಿ ಪಡೆದಿರುವ ಹೆಚ್ಚುವರಿ ಶುಲ್ಕವನ್ನು (School Fee) ವಾಪಸ್ ನೀಡಬೇಕೆಂದು ರಾಜ್ಯ ಖಾಸಗಿ ಶಾಲೆಗಳಿಗೆ (Private Schools) ಸರ್ಕಾರ ಆದೇಶಿಸಿದೆ. 2020-21 ನೇ ಸಾಲಿನ ಪೂರ್ಣ ಶುಲ್ಕ ಪಡೆದಿದ್ದರೆ ವಾಪಸ್ ಮಾಡುವಂತೆ ಶಾಲೆಗಳಿಗೆ ಆದೇಶಿಸಲಾಗಿದೆ. ಇದರಿಂದ ಖಾಸಗಿ ಶಾಲೆ ಮಕ್ಕಳ ಶುಲ್ಕ ಪಾವತಿಸಿದ್ದ ಪೋಷಕರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.

EWISR Bengaluru Schools:ರಾಷ್ಟ್ರೀಯ ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರಿನ 6 ಅಂತರಾಷ್ಟ್ರೀಯ ಶಾಲೆಗಳು

ಈ ಹಿಂದೆ ಶೇ.30 ರಷ್ಟು ಶುಲ್ಕ ಕಡಿತ ಮಾಡಿ ಸರ್ಕಾರ (Karnataka Government) ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶ  ಪ್ರಶ್ನಿಸಿ ಕೆಲ ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೊರೆ ಹೋಗಿತ್ತು.  ಕೊರೋನಾ ಮತ್ತು ಲಾಕ್ ಡೌನ್ ಹಿನ್ನೆಲೆ ಶುಲ್ಕ ಕಡಿತಗೊಳಿಸಬೇಕೆಂದು ಪೋಷಕರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ರಾಜ್ಯದಲ್ಲಿರುವ ಯಾವುದೇ ಮಾದರಿಯ ಪಠ್ಯಕ್ರಮವನ್ನು ಬೋಧಿಸುವ ಖಾಸಗಿ ಶಾಲೆಗಳು ಕಳೆದ ಸಾಲಿನ ಅಂದರೆ 2019-20ನೇ ಸಾಲಿನ ಬೋಧನಾ ಶುಲ್ಕದ ಶೇ. 70 ಭಾಗವನ್ನು ಮಾತ್ರ ಪೋಷಕರಿಂದ ಒಟ್ಟು ಶುಲ್ಕವಾಗಿ ಪಡೆಯಬೇಕು. ಈ ಬಾರಿ ಅವಧಿ ಶುಲ್ಕವನ್ನು ಹೊರತುಪಡಿಸಿ ಯಾವುದೇ ಅಭಿವೃದ್ಧಿ ಶುಲ್ಕಗಳನ್ನು ಶಾಲೆಗಳು ಪಡೆಯುವಂತಿಲ್ಲ. ವಿವಿಧ ಯಾವುದೇ ವಂತಿಕೆಯನ್ನು ಪಡೆಯುವಂತಿಲ್ಲ ಎಂದು ಕರ್ನಾಟಕ ಸರ್ಕಾರ ಹೇಳಿತ್ತು.
 

click me!