ಮಳೆ ನೀರು ಬಂದ್ರೆ ತುಂಬಿಕೊಳ್ಳುತ್ತೆ ಜ್ಞಾನ ದೇಗುಲ: ಶಾಲೆಯ ಕೊಠಡಿಗೆ ನೀರು ರಜೆ ಫಿಕ್ಸ್!

By Govindaraj S  |  First Published Jun 1, 2022, 8:14 PM IST

ಶಿಕ್ಷಣ ಸಚಿವರು ಈ ಸ್ಟೋರಿ ನೊಡಲೇಬೇಕು .ಆ ಶಾಲೆ ಸ್ಥಾಪನೆಯಾಗಿ 75 ವರ್ಷ ಪೂರೈಸಿ ಅಮೃತ ಮಹೋತ್ಸವ ಆಚರಿಸ್ತಿದೆ. ಅಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಂಡು ಕೊಂಡಿದ್ದಾರೆ. ಆ ಸರ್ಕಾರಿ ಶಾಲೆ ಮೇಲೆ ಊರಿನವರಿಗೂ ಅಷ್ಟೇ ಅಭಿಮಾನ. 


ವರದಿ: ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ  ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಜೂ.01): ಶಿಕ್ಷಣ ಸಚಿವರು ಈ ಸ್ಟೋರಿ ನೊಡಲೇಬೇಕು .ಆ ಶಾಲೆ ಸ್ಥಾಪನೆಯಾಗಿ 75 ವರ್ಷ ಪೂರೈಸಿ ಅಮೃತ ಮಹೋತ್ಸವ ಆಚರಿಸ್ತಿದೆ. ಅಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಂಡು ಕೊಂಡಿದ್ದಾರೆ. ಆ ಸರ್ಕಾರಿ ಶಾಲೆ ಮೇಲೆ ಊರಿನವರಿಗೂ ಅಷ್ಟೇ ಅಭಿಮಾನ. ಆದರೆ ಈಗ ಆ ಶಾಲೆ ಶಿಥಿಲಾವಸ್ಥೆ ತಲುಪಿದೆ. ದುರಸ್ತಿಗೆ ಸಂಬಂಧಪಟ್ಟ ಇಲಾಖೆಯವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆ ಬಂದ್ರೆ ಶಾಲೆಯ ವಿಧ್ಯಾರ್ಥಿಗಳಿಗೆ ರಜೆ ಕೊಡ್ತಾರೆ ಶಿಕ್ಷಕರು. ಆತಂಕದಲ್ಲಿ ಶಾಲೆಗೆ ಆಗಮಿಸ್ತಿರೋ ವಿಧ್ಯಾರ್ಥಿಗಳು. ಇದೆಲ್ಲಿ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ.

Tap to resize

Latest Videos

undefined

ಚಾಮರಾಜನಗರ ತಾಲೂಕು ಉಡಿಗಾಲ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ದುಸ್ಥಿತಿ ಇದು. ಈ ಶಾಲೆಯಲ್ಲಿ 13 ಕೊಠಡಿಗಳಿದ್ದು ಎಲ್ಲಾ ಕೊಠಡಿಗಳು ಶಿಥಿಲಾಸ್ಥೆ ತಲುಪಿದ್ದು, ಬೀಳುವ ಹಂತ ತಲುಪಿದೆ. 1930ರಂದು ಉದ್ಘಾಟನೆಗೊಂಡಿರುವ ಈ ಕಟ್ಟಡ ಇಂದಿಗೂ ಹಾಗೆ ಇದ್ದು, ಒಂದನೇ ತರಗತಿಯಿಂದ ಎಂಟನೆ ತರಗತಿವರೆಗೆ ಸುಮಾರು 254 ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡುತ್ತಿದ್ದು, ಸುತ್ತಮುತ್ತಲ ಗ್ರಾಮದಿಂದ ಬರುವ ವಿಧ್ಯಾರ್ಥಿಗಳಿಗೆ ಈ ಶಾಲೆಯೆ ಆಸರೆ. ಬಹುತೇಕ  ಕಟ್ಟಡದ ಎಲ್ಲಾ ಗೋಡೆಗಳು ಬಿರುಕು ಬಿಟ್ಟಿದ್ದು,  ಛಾವಣಿಗೆ ಪ್ಲಾಸ್ಟಿಕ್ ಚೀಲಗಳನ್ನು ಮುಚ್ಚಿದ್ದರು, ಮಳೆ ಬಂದರೆ ಕೊಠಡಿಯೊಳಗೆ ನೀರು ಬೀಳಲಾರಂಭಿಸುತ್ತದೆ.

ಚಾಮರಾಜನಗರ: ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಸ್ಥಗಿತ, ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಶಾಸಕ

ಜೊತೆಗೆ ನೀರಿನಲ್ಲೇ ಮಕ್ಕಳು ಕೂರಬೇಕು. ಹೀಗಾಗಿ ಮಳೆ ಬಂದರೆ ಶಾಲೆಗೆ ರಜೆ ಕೊಡಬೇಕಾದ ಪರಿಸ್ಥಿತಿ. ಶಾಲಾ ಆವರಣದಲ್ಲಿ ಶಾಲೆಯಷ್ಟೇ ವಯಸ್ಸಾಗಿರುವ ಹತ್ತಕ್ಕೂ ಹೆಚ್ಚು ಬೃಹದಾಕಾರದ ಮರಗಳು ಬೆಳೆದಿದ್ದು, ಕಟ್ಟಡದ ಮೇಲೆ ವಾಲಿದ್ದು ಯಾವಾಗ ಬೇಕಾದರು ಬೀಳುವ ಪರಿಸ್ಥಿತಿ ಇದ್ದು, ಅಲ್ಪ ಮಳೆ ಅಥವಾ ಜೋರು ಗಾಳಿ ಬೀಸಿದರೆ ಕಟ್ಟಡ ಕುಸಿಯುವ ಆತಂಕ. ಶಾಲಾ ಕೊಠಡಿಗಳು ಅಲ್ಲಲ್ಲಿ ಬಿರುಕು ಬಿಟ್ಟಿದ್ದು ಯಾವಾಗ ಬೀಳುತ್ತೋ ಅಂತ ಶಿಕ್ಷಕರು ಹಾಗು ಮಕ್ಕಳು ಜೀವ ಭಯದಲ್ಲಿದ್ದಾರೆ. ಹೆಂಚುಗಳು ಹಾಗು ಛಾವಣಿ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಸರ್ಕಾರಿ ಶಾಲೆಯ ದುಸ್ಥಿತಿ ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಒಂದು ಕಡೆ ವಿಧ್ಯಾಬ್ಯಾಸ ಮತ್ತೊಂದು ಕಡೆ ಜೀವ ಭಯದ ನಡುವೆಯೆ ಅದೆಷ್ಟೊ ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮುಗಿಸಿ ಹೋಗಿದ್ದು,  92 ವರ್ಷ ಪೊರೈಸಿರುವ ಈ ಶಾಲೆ ಶತಮಾನದ  ಸನಿಹದಲ್ಲಿದೆ. ಒಂಬತ್ತು ದಶಕ ಪೂರೈಸಿರುವ  ಶಾಲೆಯ ಕಟ್ಟಡ ನವೀಕರಣ ಸಂಬಂಧ ದುರಸ್ಥಿಗೊಳಿಸಿ ಕೊಡುವಂತೆ ಎಸ್ ಡಿಎಂಸಿ ಸದಸ್ಯರು, ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಹಾಗು ಶಿಕ್ಷಕರು ಜಿಲ್ಲಾಡಳಿತಕ್ಕೆ ಸಾಕಷ್ಟು ಸಲ ಮನವಿ ಸಲ್ಲಿಸಿದ್ದಾರೆ. ಮಾಜಿ ಸಚಿವ ಸುರೇಶ್ ಕುಮಾರ್ ಅವರೂ ಶಾಲೆಯ ಪರಿಸ್ಥಿತಿ ಅವಲೋಕಿಸಿ ಕ್ರಮದ ಭರವಸೆ ನೀಡಿದ್ದರು. ಶಿಕ್ಷಣ ಸಚಿವರು ಬದಲಾದರೂ ಆದರೆ ಶಾಲೆಯ ವ್ಯವಸ್ಥೆ ಬದಲಾಗಿಲ್ಲ. ಮಕ್ಕಳ ವಿದ್ಯಾಬ್ಯಾಸದ ದೃಷ್ಟಿಯಿಂದ ಶಾಲೆ ನವೀಕರಣಕ್ಕೆ ಎಷ್ಟೆ ಪ್ರಯತ್ನಿಸಿದರು ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ. 

Chamarajanagar: ಜಮೀನು ಮಾರಾಟ ಮಾಡುವ ವಿಚಾರಕ್ಕೆ ಜಗಳ: ಪತ್ನಿ ಕೊಂದು ಠಾಣೆಗೆ ಶರಣಾದ ಪತಿ

ಇದರಿಂದ ಬೇಸತ್ತಿರುವ ಗ್ರಾಮಸ್ಥರು ಈ ಶಾಲಾ ಕಟ್ಟಡ ಕೆಡವಿ  ಹೊಸ ಕಟ್ಟಡ ಕಟ್ಟಬೇಕು ಇಲ್ಲವಾದರೆ ಮಕ್ಕಳನ್ನು ಶಾಲೆಗೆ ಕಳುಹಿಸದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಗೆ ಬರುವ ಉಸ್ತುವಾರಿ ಸಚಿವರು ಹಾಗು ಶಿಕ್ಷಣ ಸಚಿವರ ಗಮನಕ್ಕು ತಂದರು ಯಾವುದೆ ಪ್ರಯೋಜನವಾಗಿಲ್ಲ. ಉಡಿಗಾಲ ಗ್ರಾಮ ಗುಂಡ್ಲುಪೇಟೆ-ಚಾಮರಾಜನಗರ ಮಾರ್ಗದಲ್ಲಿದ್ದು ಜಿಲ್ಲೆಗೆ ಬರುವ ಬಹುತೇಕ ಶಾಸಕರು, ಮಂತ್ರಿಗಳು, ಇತರೆ  ಜನಪ್ರತಿನಿಧಿಗಳೆಲ್ಲ ಈ ರಸ್ತೆಯಲ್ಲಿಯೇ ಸಂಚರಿಸಿದ್ರೂ ಕೂಡ ಗಮನ ಹರಿಸದೆ ಇರುವುದು ದುರಂತವೇ ಸರಿ. ಮುಂದೆ ಮಳೆಗಾಲ ಬರಲಿದ್ದು, ದುರಂತ ಸಂಭವಿಸುವ ಮುನ್ನವೆ ಸರ್ಕಾರ ಹಾಗು ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳುವುದೆ ಕಾದು ನೋಡಬೇಕಾಗಿದೆ.

click me!