ದುಡ್ಡಿನೆದುರು ಮನುಷ್ಯನ ಸಣ್ಣತನ ಸಾರುವ ಉಜಿರೆ SDM ವಿದ್ಯಾರ್ಥಿಗಳ ಕಿರುಚಿತ್ರ

By Suvarna News  |  First Published May 14, 2022, 11:44 AM IST

ಉಜಿರೆ ಎಸ್.ಡಿ.ಎಂ ಕಾಲೇಜಿನ ಬಿವೋಕ್‌ ವಿಭಾಗದ ಡಿಜಿಟಲ್ ಮಿಡಿಯಾ ಹಾಗು ಫಿಲ್ಮಂ ಮೇಕಿಂಗ್  ವಿದ್ಯಾರ್ಥಿ ರಚಿಸಿ, ನಿರ್ದೇಶನ ಮಾಡಿರುವ "ಆಫ್ ಟು ಡಸ್ಟ್ ಬಿನ್"   ಕನ್ನಡ ಕಿರುಚಿತ್ರವನ್ನು ಕನ್ನಡದ ಹಿರಿಯ ನಟ, ಎಂ.ಕೆ ಮಠ ಬಿಡುಗಡೆ ಮಾಡಿದರು


ಉಜಿರೆ (ಮೇ.12): ಸಿನೆಮಾ ರಂಗದಲ್ಲಿ ಉನ್ನತ ಮಟ್ಟದಲ್ಲಿ ಬೆಳೆಯಬೇಕಾದರೆ ನಾವು ನಮ್ಮ ತನವನ್ನು ಬಿಡದೆ, ನಮ್ಮನ್ನು ಗುರುತಿಸಿದವರನ್ನು ಮರೆಯದೆ ನಾವು ಮುನ್ನೆಡೆದರೆ ನಮಗೆ  ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಖ್ಯಾತ ಕನ್ನಡದ ಹಿರಿಯ ನಟ, ರಂಗಕರ್ಮಿ ಎಂ.ಕೆ ಮಠ (Senior Actor MK Mutt) ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅವರು ಉಜಿರೆ ಎಸ್.ಡಿ.ಎಂ (Ujire Sri Dharmasthala Manjunatheshwara College) ಕಾಲೇಜಿನ ಬಿವೋಕ್ (B.Voc - B.Vocational courses) ವಿಭಾಗದ ಡಿಜಿಟಲ್ ಮಿಡಿಯಾ ಹಾಗು ಫಿಲ್ಮಂ ಮೇಕಿಂಗ್ (Digital media and Film Making) ವಿದ್ಯಾರ್ಥಿ ಲೊಕೇಶ್ ಧರ್ಮಸ್ಥಳ (Lokesh Dharmastala) ರಚಿಸಿ, ನಿರ್ದೇಶನ ಮಾಡಿರುವ "ಆಫ್ ಟು ಡಸ್ಟ್ ಬಿನ್" (OFF TO DUSTBIN ) ಕನ್ನಡ ಕಿರುಚಿತ್ರವನ್ನು (Kannada Short Film) ಬಿಡುಗಡೆ ಮಾಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

Tap to resize

Latest Videos

ಕಾರಿನಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಹಣ ಎಗರಿಸಿದ ಕಳ್ಳರು!

ಸಿನೆಮಾ ಒಂದು ಸಾಗರ ಇದ್ದಂತೆ ಅಲ್ಲಿ ಉನ್ನತಮಟ್ಟದಲ್ಲಿ ಬೆಳೆಯಬೇಕಾದರೆ ಯಾವುದೆ ಅಡ್ಡ ದಾರಿಯಿಲ್ಲ, ಪ್ರತಿಭೆ, ಪರಿಶ್ರಮವೇ ಮುಖ್ಯದಾರಿ, ಆ ದಾರಿಯಲ್ಲಿ ನಾವು ಹೇಗೆ ಸಾಗುತ್ತೇವೂ ಅದರಂತೆ ನಮ್ಮ ಭವಿಷ್ಯವು ನಿರ್ಧಾರವಾಗುತ್ತದೆ, ಹಾಗಾಗಿ ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದರು.

ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ಲೋಕೇಶ್ ಧರ್ಮಸ್ಥಳ ಕಿರುಚಿತ್ರದ ನಿರ್ಮಾಣದ ಅನುಭವಗಳನ್ನು ಹಂಚಿಕೊಂಡರು. ನಂತರ ನೆರೆದಿರುವ ಪ್ರೇಕ್ಷಕರಿಗೆ ಚಿತ್ರದ ಪ್ರದರ್ಶನ ನೀಡಲಾಯಿತು. 'ಆಫ್ ಟು ಡಸ್ಟ್ ಬಿನ್' 14 ನಿಮಿಷದ ಅವಧಿಯಲ್ಲಿ ಚಿತ್ರವಾಗಿದೆ.  ದುಡ್ಡಿನ ಮುಂದೆ ಮನುಷ್ಯನ, ಸಣ್ಣತನದ ಬಗ್ಗೆ ಈ  ಚಿತ್ರ ಬಹಳ ಮಾರ್ಮಿಕವಾಗಿ ಮಾತನಾಡುತ್ತದೆ. ಅಲ್ಲದೆ ಚಿತ್ರದಲ್ಲಿ ನಟನೆ ಮಾಡಿರುವ ಕಾಲೇಜಿನ ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳ ಅಭಿನಯಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ  ಬಿವೋಕ್‍ನ ವಿವಿಧ ವಿಭಾಗಗಳ ಪ್ರಾಧ್ಯಪಾಕರು, ವಿದ್ಯಾರ್ಥಿಗಳು  ಉಪಸ್ಥಿತರಿದ್ದರು. ಸಮಾರಂಭದಲ್ಲಿ   ಡಿಜಿಟಲ್ ಮಿಡೀಯಾ ಹಾಗು ಫಿಲ್ಮಂ ಮೇಕಿಂಗ್ ವಿಭಾಗದ ಮುಖ್ಯಸ್ಥರಾದ ಮಾಧವ ಹೊಳ್ಳ ಸ್ವಾಗತಿಸಿ, ವಿದ್ಯಾರ್ಥಿ ಸುಮನ ವಂದಿಸಿದರು, ಗೌತಮ್ ಕಾರ್ಯಕ್ರಮವನ್ನು ನಿರೂಪಿಸಿದರು.

SSLC ಫಲಿತಾಂಶಕ್ಕೆ ದಿನ ನಿಗದಿ, PUC ಯದ್ದೂ ಶೀಘ್ರವೇ ಪ್ರಕಟ 

ಕರ್ನಾಟಕದ 7 ಅದ್ಭುತಗಳು ಅಭಿಯಾನಕ್ಕೆ ನಟ ರಮೇಶ್‌ ಅರವಿಂದ್ ಮೆಚ್ಚುಗೆ: ಕರ್ನಾಟಕದ ಏಳು ಅದ್ಭುತಗಳು (Seven Wonders Campaign)  ಅಭಿಯಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಚಾಲನೆ ನೀಡಿದ್ದಾರೆ. ಕನ್ನಡ ಪ್ರಭ, ಏಷ್ಯಾನೆಟ್ ನ್ಯೂಸ್, ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಅಭಿಯಾನ ಆರಂಭಿಸಿದೆ. ಸಿಎಂ ಬೊಮ್ಮಾಯಿ ಅಭಿಯಾನದ ಲೋಗೋ, ವೆಬ್‌ಸೈಟ್‌ ಅನಾವರಣ ಮಾಡಿದರು. ಖ್ಯಾತ ನಟ ರಮೇಶ್ ಅರವಿಂದ್ (Ramesh Aravind) ಕರ್ನಾಟಕದ ಏಳು ಅದ್ಭುತಗಳು ಅಭಿಯಾನಕ್ಕೆ ರಾಯಭಾರಿಯಾಗಿದ್ದಾರೆ.

ಏಷ್ಯಾನೆಟ್ ನ್ಯೂಸ್‌ ನೆಟ್‌ವರ್ಕ್ ಛೇರ್ಮನ್ ರಾಜೇಶ್‌ ಕಾಲ್ರಾ, ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ,  ನಟ ರಮೇಶ್ ಅರವಿಂದ್, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇನ್ನು ಈ ಏಳು ಅದ್ಭುತಗಳ ಅಭಿಯಾನಕ್ಕೆ ನಟ ರಮೇಶ್ ಅರವಿಂದ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಏಷ್ಯಾನೆಟ್ ನ್ಯೂಸ್‌ ಮತ್ತು ಕನ್ನಡ ಪ್ರಭ ನ್ಯೂಸ್ ಉತ್ತಮ ಕೆಲಸವನ್ನು ಮಾಡುತ್ತಿದೆ. ನಿಮ್ಮ ಸುತ್ತಮುತ್ತಲಿರುವ ಅದ್ಭುತಗಳನ್ನು ಪತ್ತೆ ಹಚ್ಚಿ, ಅದ್ಭುತ ತಾಣಗಳ ಬಗ್ಗೆ ನಮಗೆ ಮಾಹಿತಿಯನ್ನು ನೀಡಬೇಕು. ಪರಿಣಿತರ ತಂಡ ಏಳು ಅದ್ಭುತಗಳನ್ನು ಅಂತಿಮವಾಗಿ ಆಯ್ಕೆ ಮಾಡಲಿದೆ ಎಂದು ರಮೇಶ್ ಅರವಿಂದ್ ಹೇಳಿದರು. 

click me!