ಸಕಾಲಕ್ಕೆ ಬಸ್‌ಗಳು ಸಿಗದೇ ವಿದ್ಯಾರ್ಥಿಗಳು ಶಾಲೆ ಹೋಗಲು ಹಾಗೂ ಮನೆಗೆ ಹಿಂದಿರುಗಲು ಪರದಾಡುವಂತಾಗಿದೆ. ಒಡಿಶಾದ ವಿದ್ಯಾರ್ಥಿಯೊಬ್ಬನಿಯಿಂದಾಗಿ ಅಲ್ಲಿನ ಸರ್ಕಾರಿ ಬಸ್ ನಿಗಮ, ಬಸ್ ಸಂಚಾರ ಸಮಯವನ್ನೇ ಬದಲಾಯಿಸಿದೆ. ಆತ ಮಾಡಿದ ಒಂದು ಟ್ವೀಟ್‌ಗೆ ಪ್ರತಿಸ್ಪಂದಿಸಿದ ಅಧಿಕಾರಿಗಳ ನಡೆಗೂ ಟ್ವಿಟರ್‌ನಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ದೇಶಾದ್ಯಂತ ಲಾಕ್‌ಡೌನ್ ಬಳಿಕ ಮುಚ್ಚಲ್ಪಟ್ಟಿದ್ದ ಶಾಲೆಗಳು ಈಗ ಓಪನ್ ಆಗ್ತಿವೆ. ಆನ್‌ಲೈನ್ ಕ್ಲಾಸ್‌ಗಳಿಂದ ಮಕ್ಕಳು ಆಫ್‌ಲೈನ್ ತರಗತಿಗೆ ಬರುತ್ತಿದ್ದಾರೆ. ಕೆಲವು ರಾಜ್ಯಗಳು ಈಗಾಗಲೇ ಶಾಲೆಗಳನ್ನು ಪುನಾರಂಭಿಸಿದ್ರೆ, ಇನ್ನು ಕೆಲ ರಾಜ್ಯಗಳು ಕೋವಿಡ್-೧೯ ಭೀತಿಯಿಂದ ಶಾಲೆಗಳನ್ನ ತೆರೆಯುವುದೋ? ಬೇಡ್ವೋ? ಎಂಬ ಚಿಂತನೆ ನಡೆಸ್ತಿವೆ. ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಶಾಲಾ ಕಟ್ಟಡಗಳು ಬಂದ್ ಆದ್ವು. ಸಾರ್ವಜನಿಕರ ಸಾರಿಗೆ ಕೂಡ ಸಂಪೂರ್ಣವಾಗಿ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿತ್ತು. ಆ ನಂತರ ಲಾಕ್‌ಡೌನ್ ತೆರವು ಆಗುತ್ತಿದ್ದಂತೆ ಸಾರಿಗೆ ವ್ಯವಸ್ಥೆ ಸಾರ್ವಜನಿಕರಿಗೆ ಮುಕ್ತವಾಗಿದೆ. ಇದೀಗ ಕೆಲ ರಾಜ್ಯಗಳು ಶಾಲೆಗಳನ್ನು ಪ್ರಾರಂಭಿಸಿದ್ದು, ಮಕ್ಕಳನ್ನ ಶಾಲೆಗಳಿಗೆ ಆಕರ್ಷಿಸಲು ಪ್ರಯತ್ನ ನಡೆಸ್ತಿವೆ. ಇತ್ತೀಚೆಗಷ್ಟೇ ತಮಿಳುನಾಡು ಶಾಲೆಯೊಂದು ತನ್ನ ಕಾರಿಡಾರ್‌ಗಳನ್ನು ಹೋಲುವಂತಹ ರೈಲು ಚಿತ್ರವನ್ನು ಚಿತ್ರಿಸಿತ್ತು.
ಸದ್ಯ ವಿದ್ಯಾರ್ಥಿಗಳು ತಮ್ಮ ಮಾಸ್ಕ್ ಧರಿಸಿ ಮತ್ತು ಕೈ ಸ್ಯಾನಿಟೈಸರ್ಗಳನ್ನು ಹೊತ್ತುಕೊಂಡು ಶಾಲೆಗೆ ಬಂದು ಹೋಗುತ್ತಿದ್ದಾರೆ. ಆದ್ರೆ ವಿದ್ಯಾರ್ಥಿಗಳು ತಮ್ಮದೇ ಆದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೊದಲನೆಯದಾಗಿ, ಬೇಡಿಕೆಯ ಕೊರತೆಯಿಂದಾಗಿ, ಸಾರಿಗೆ ವ್ಯವಸ್ಥೆಗಳು ತಮ್ಮ ಬಸ್ ಮತ್ತು ರೈಲು ಸಮಯವನ್ನು ಕಡಿಮೆ ಮಾಡಿವೆ. ಇದು ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯನ್ನುಂಟು ಮಾಡಿದೆ.
undefined
ಈ ವಿಶ್ವವಿದ್ಯಾಲಯದಲ್ಲಿ ಓದುತ್ತಲೇ ಪಾರ್ಟ್ ಟೈಮ್ ಜಾಬ್ ಕೂಡ ಮಾಡಬಹುದು!
ಸಕಾಲಕ್ಕೆ ಬಸ್‌ಗಳು ಸಿಗದೇ ವಿದ್ಯಾರ್ಥಿಗಳು ಶಾಲೆ ಹೋಗಲು ಹಾಗೂ ಮನೆಗೆ ಹಿಂದಿರುಗಲು ಪರದಾಡುವಂತಾಗಿದೆ. ಒಡಿಶಾದ ವಿದ್ಯಾರ್ಥಿಯೊಬ್ಬನಿಯಿಂದಾಗಿ ಅಲ್ಲಿನ ಸರ್ಕಾರಿ ಬಸ್ ನಿಗಮ, ಬಸ್ ಸಂಚಾರ ಸಮಯವನ್ನೇ ಬದಲಾಯಿಸಿದೆ.
ಸಾರಿಗೆ ಬಸ್‌ನಿಂದಾಗಿ ತನಗಾಗುತ್ತಿರುವ ಸಮಸ್ಯೆಯನ್ನ ಆ ವಿದ್ಯಾರ್ಥಿ ಟ್ವಿಟರ್ ಮೂಲಕ ಹೇಳಿಕೊಂಡಿದ್ದ. ಹೊಸ ಬಸ್ ಸಮಯವು ಹೇಗೆ ತಡವಾಗಿ ಶಾಲೆಗೆ ತಲುಪುತ್ತದೆ ಅನ್ನೋದನ್ನ ವಿದ್ಯಾರ್ಥಿ ಬಿಡಿಸಿ ಹೇಳಿದ್ದಾನೆ. ಇದರ ಬೆನ್ನಲ್ಲೇ ಎಚ್ಚೆತ್ತ ಸಾರಿಗೆ ಇಲಾಖೆ, ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಲು ಸಹಾಯ ಆಗುವಂತೆ ಬಸ್ ಸಮಯವನ್ನು ಬದಲಾಯಿಸಿದೆ.
ಭುವನೇಶ್ವರದ ಎಂಬಿಎಸ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿರುವ ಸಾಯಿ ಅನ್ವೇಶ್ ಅಮೃತಂ ಪ್ರಧಾನ್ ತನ್ನ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಲು ಎಲ್ಲರನ್ನು ಟ್ವಿಟರ್‌ಗೆ ಕರೆದೊಯ್ದಿದ್ದ. ಬದಲಾದ ಬಸ್ ವೇಳಾಪಟ್ಟಿಯಿಂದಾಗಿ ತಾನು ಪ್ರತಿದಿನ ಶಾಲೆಗೆ ತಡವಾಗಿ ತಲುಪುವಂತಾಗಿದೆ ಎಂದು ಟ್ವೀಟ್ ಮೂಲಕ ರಾಜ್ಯ ಸಾರಿಗೆ ಇಲಾಖೆಗೆ ಮಾಹಿತಿ ತಲುಪಿಸಿದ್ದ. ಸಾಯಿಯ ಶಾಲೆ ಬೆಳಿಗ್ಗೆ 7: 30 ಕ್ಕೆ ಪ್ರಾರಂಭವಾದರೆ, ಅವನ ಮಾರ್ಗದ ಮೊದಲ ಬಸ್ ಬೆಳಗ್ಗೆ 7:40 ಕ್ಕೆ ಹೊರಡುತ್ತದೆ. ಇದರಿಂದಾಗಿ ಅವನು ಪ್ರತಿದಿನ ಶಾಲೆ ತಲುಪುವುದು ತಡವಾಗುತ್ತಿತ್ತು. ತನ್ನ ಈ ಸಮಸ್ಯೆ ಬಗ್ಗೆ ಸಾಯಿ ಅನ್ವೇಶ್, ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ಹಾಗೂ ಪ್ರಾದೇಶಿಕ ನಗರ ಸಾರಿಗೆ ಭುವನೇಶ್ವರ (ಸಿಆರ್‌ಯುಟಿ) ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಿದ್ದ.
ಪರೀಕ್ಷೆ ಟೈಮಲ್ಲಿ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಹೇಗೆ?
ತನ್ನ ಸಮಸ್ಯೆ ಬಗ್ಗೆ ವಿದ್ಯಾರ್ಥಿ ಸಾಯಿ ಮಾಡಿರೋ ಪ್ರಾಮಾಣಿಕ ಟ್ವೀಟ್ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ. ಅದು ಎಷ್ಟರ ಮಟ್ಟಿಗೆಂದರೆ, ಒಡಿಶಾ ಸಾರಿಗೆ ಇಲಾಖೆಯು ಸರ್ಕಾರ ನಡೆಸುವ ‘ಮೊಬಸ್’ ನ ಸಮಯವನ್ನು ಬದಲಿಸಿದೆ. ಇದರಿಂದಾಗಿ ಸಾಯಿ ಈಗ ಸರಿಯಾದ ಸಮಯಕ್ಕೆ ತನ್ನ ಶಾಲೆ ತಲುಪಬಹುದಾಗಿದೆ. ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ಮತ್ತು ಸಿಆರ್‌ಯುಟಿ ಇಬ್ಬರೂ ಬಾಲಕನ ಕೋರಿಕೆಗೆ ಪ್ರತಿಕ್ರಿಯಿಸಿದ್ದಾರೆ. ಬೋತ್ರಾ ಅವರು, ವಿದ್ಯಾರ್ಥಿ ಸಾಯಿಯ ಧೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ಇನ್ಮುಂದೆ ಬಸ್ ಸಂಚಾರದ ಸಮಯ ಬದಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ, ಮೊದಲ ಮೊಬಸ್ ಬೆಳಗ್ಗೆ 7 ಗಂಟೆಗೆ ಹೊರಡಲಿದ್ದು, ಸಾಯಿ ಇನ್ನು ಮುಂದೆ ಶಾಲೆಗೆ ಹೋಗಲು ತಡವಾಗುವುದಿಲ್ಲ ಎಂದು ಭರವಸೆ ನೀಡಿದ್ರು.
ಅಂದಹಾಗೆ ಈ ಟ್ವೀಟ್‌ಗಳನ್ನು ನೂರಾರು ಜನ ನೆಟಿಜನ್‌ಗಳು ಲೈಕ್ ಮಾಡಿದ್ದು, ಶೇರ್ ಮಾಡಿದ್ದಾರೆ. ರಾಜ್ಯ ಸಾರಿಗೆ ಇಲಾಖೆಯ ತ್ವರಿತ ಮತ್ತು ಹೃದಯಸ್ಪರ್ಶಿ ಪ್ರತಿಕ್ರಿಯೆಗಳ ಕುರಿತ ಸಾಮಾಜಿಕ ಬಳಕೆದಾರರು ಪ್ರಶಂಸಿಸಿದ್ದಾರೆ. ಟ್ವಿಟ್ಟರ್ ಬಳಕೆದಾರರು ಸಾರಿ ಇಲಾಖೆಯ ಸಮರ್ಪಕ ಸಾರ್ವಜನಿಕ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಒಡಿಶಾ ಸರ್ಕಾರದ ತ್ವರಿತ ಮತ್ತು ಪರಿಣಾಮಕಾರಿ ಸೇವೆಗಳನ್ನು ಎತ್ತಿ ತೋರಿಸುತ್ತದೆ.
ಕಾಲೇಜ್ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್