ಕರ್ನಾಟಕದಲ್ಲಿ ಹೊಸ ಸರ್ಕಾ​ರ ಬಂದರೂ ನಿಲ್ಲದ ಭ್ರಷ್ಟಾಚಾರ: ರುಪ್ಸಾ

By Kannadaprabha NewsFirst Published Jun 15, 2023, 1:53 PM IST
Highlights

ಕಾಂಗ್ರೆಸ್‌ ಸರ್ಕಾರ ಭ್ರಷ್ಟಮುಕ್ತ ಆಡಳಿತ ನೀಡುವುದಾಗಿ ಭರವಸೆ ನೀಡಿದೆ. ಆದರೆ, ಶಿಕ್ಷಣ ಇಲಾಖೆಯ ಒಂದಷ್ಟು ಮಂದಿ ಅಧಿಕಾರಿಗಳು ಭ್ರಷ್ಟಾಚಾರ ಮುಂದುವರೆಸಿದ್ದಾರೆ: ರುಪ್ಸಾ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ 

ಬೆಂಗಳೂರು(ಜೂ.15):  ಹೊಸ ಸರ್ಕಾರ ಬಂದರೂ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಿಂತಿಲ್ಲ. ಅಧಿಕಾರಿಗಳಿಂದ ಖಾಸಗಿ ಶಾಲೆಯವರ ಮೇಲೆ ಕಿರುಕುಳ, ಭ್ರಷ್ಟಾಚಾರ ಮುಂದುವರೆದಿದೆ ಎಂದು ಖಾಸಗಿ ಶಾಲಾ ಸಂಘಟನೆ ರುಪ್ಸಾ ಕರ್ನಾಟಕ ಆರೋಪಿಸಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ರುಪ್ಸಾ ಅಧ್ಯಕ್ಷ ಲೋಕೇಶ್‌ತಾಳಿಕಟ್ಟೆ, ಕಾಂಗ್ರೆಸ್‌ಸರ್ಕಾರ ಭ್ರಷ್ಟಮುಕ್ತ ಆಡಳಿತ ನೀಡುವುದಾಗಿ ಭರವಸೆ ನೀಡಿದೆ. ಆದರೆ, ಶಿಕ್ಷಣ ಇಲಾಖೆಯ ಒಂದಷ್ಟು ಮಂದಿ ಅಧಿಕಾರಿಗಳು ಭ್ರಷ್ಟಾಚಾರ ಮುಂದುವರೆಸಿದ್ದಾರೆ. 

ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಕ್ಕೆ ರುಪ್ಸಾ ಸ್ವಾಗತ: ಶಾಲೆ, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳನ್ನೇ ಬೆದರಿಸಿಕೊಂಡು ಖಾಸಗಿ ಶಾಲೆಗಳಿಂದ ಮಾನ್ಯತೆ ನೀಡಿಕೆ, ನವೀಕರಣ ಸೇರಿದಂತೆ ವಿವಿಧ ವಿಚಾರಗಳಿಗೆ ಲಕ್ಷಾಂತರ ರು. ಹಣ ವಸೂಲಿ ದಂಧೆಗೆ ಇಳಿಸಿದ್ದಾರೆ. ಅಂತಹವರ ಬಗ್ಗೆ ಮಾಹಿತಿ ನೀಡಲು ಸಿದ್ಧರಿದ್ದೇವೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಕೂಡಲೇ ಈ ಬಗ್ಗೆ ಗಮನ ಹರಿಸಿ ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.

click me!