ಮೈಸೂರಿನ ಕಲಾಮಂದಿರದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಪ್ರದಾನ ಮಾಡಿದರು.
ಮೈಸೂರು (ಸೆ.6) : ಪ್ರಶಸ್ತಿಗೆ ಶಿಫಾರಸು ಮಾಡುವಂತೆ ಎಲ್ಲೆಡೆ ಒತ್ತಡ ಬರುತ್ತದೆ. ಆದರೆ, ಮೈಸೂರಿನಲ್ಲಿ ಯಾವುದೇ ಶಿಕ್ಷಕ ಶಿಫಾರಸು ಕೇಳಿಕೊಂಡು ಬಂದಿಲ್ಲ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಡಳಿತ, ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು ನಗರದ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.
undefined
13 ವರ್ಷಗಳಿಂದ ಒಂದೇ ಒಂದು ರಜೆ ಪಡೆದಿಲ್ಲ ತಮಿಳುನಾಡಿನ ಸರ್ಕಾರಿ ಶಾಲೆಯ ಈ ಶಿಕ್ಷಕಿ
ಪ್ರಶಸ್ತಿ ಪಡೆದುಕೊಳ್ಳಲು ಹಲವಾರು ಜನರು ರಾಜಕೀಯ(Political) ಮುಖಂಡರಿಂದ ಶಿಫಾರಸು(recommendation) ಮಾಡಿಸಲು ಮುಗಿ ಬೀಳುತ್ತಾರೆ. ಆದರೆ, ಮೈಸೂರಿ()Mysuru(ನಲ್ಲಿ ಅಂತಹ ವಾತಾವರಣ ನೋಡಿಯೇ ಇಲ್ಲ. ಇಲ್ಲಿವರೆಗೂ ನನ್ನ ಬಳಿ ಶಿಫಾರಸಿಗಾಗಿ ಒಬ್ಬರು ಬಂದಿಲ್ಲ. ಪ್ರಶಸ್ತಿಗೆ ಎಲ್ಲರೂ ಅರ್ಹರಾಗಿದ್ದರೂ ಅದನ್ನು ಎಲ್ಲರಿಗೂ ನೀಡಲು ಆಗುವುದಿಲ್ಲ. ಅದಕ್ಕೆ ಒಂದು ವ್ಯವಸ್ಥೆ ಇದೆ. ಪ್ರಶಸ್ತಿಯನ್ನು ಪಡೆಯದವರಲ್ಲೂ ಅತ್ಯುತ್ತಮ ಶಿಕ್ಷಕರು ಇರುತ್ತಾರೆ ಎಂದು ಅವರು ತಿಳಿಸಿದರು.
ಶಿಕ್ಷಕರ(Teachers) ಸಂಘವು ಮಾಡಿರುವ ಮನವಿಯನ್ನು ಸರ್ಕಾರಕ್ಕೆ ತಲುಪಿಸುವ ಭರವಸೆ ನೀಡಿದ ಸಚಿವರು, ಸೆ.6 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ಮೈಸೂರಿಗೆ ಆಗಮಿಸಲಿದ್ದಾರೆ. ಅವರ ಬಳಿಗೆ ತಮ್ಮ ಸಂಘದವರನ್ನು ಕರೆದುಕೊಂಡು ಹೋಗುತ್ತೇನೆ. ಅವರ ಬಳಿಯೇ ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದು ಎಂದು ಭರವಸೆ ನೀಡಿದರು.
ನಾನು ಜಿಲ್ಲಾ ಉಸ್ತುವಾರಿ ಸಚಿವ ಆದ ಬಳಿಕ ಯಾವೊಬ್ಬ ಶಿಕ್ಷಕ ಕೂಡ ತಮ್ಮ ಬಳಿ ಬಂದು ಪ್ರಶಸ್ತಿಗೆ ಶಿಫಾರಸು ಕೇಳಿಲ್ಲ. ಶಿಕ್ಷಕರ ಮೇಲೆ ದೂರುಗಳು ಸಹ ಬಂದಿಲ್ಲ. ಉತ್ತಮ ಫಲಿತಾಂಶ ತರುವ ಮೂಲಕ ಜಿಲ್ಲೆಗೆ ಕೀರ್ತಿ ತರುವ ಕೆಲಸ ಶಿಕ್ಷಕರಿಂದ ಆಗುತ್ತಿದೆ. ಜಿಲ್ಲೆಯಲ್ಲಿ ಅತ್ಯುತ್ತಮ ಶಿಕ್ಷಕರಿದ್ದಾರೆ ಎಂದು ಅವರು ಶ್ಲಾಘಿಸಿದರು.
ರಾಷ್ಟ್ರಪತಿ ಆಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್(Dr.Sarvapalli Radhakrishnan) ಅವರು ಶಿಕ್ಷಕರ ಬಗ್ಗೆ ಅಪಾರ ಗೌರವ ಹೊಂದಿದ್ದರು. ಹೀಗಾಗಿ ಅವರ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಒಂದು ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಗ್ರಗಣ್ಯವಾದದ್ದು. ಮಕ್ಕಳಿಗೆ ಪಠ್ಯದಲ್ಲಿನ ವಿಚಾರಗಳನ್ನು ತಿಳಿಸಿಕೊಡುವುದರ ಜೊತೆಜೊತೆಗೆ ಜೀವನದ ಪಾಠವನ್ನು ಕಲಿಸುವುದು ಗುರು. ಕೋವಿಡ್ ಸಂಕಷ್ಟಸಮಯದಲ್ಲಿ ಶಿಕ್ಷಕರು ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅವರ ಪರಿಶ್ರಮ ಶ್ಲಾಘನಿಯ ಎಂದು ಅವರು ಹೇಳಿದರು.
ರಾಜ್ಯ ಮುಕ್ತ ವಿವಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಜ್ಯೋತಿ ಶಂಕರ್ ಪ್ರಧಾನ ಭಾಷಣ ಮಾಡಿದರು. ಶಾಸಕ ಎಲ್. ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಸುನಂದಾ ಪಾಲನೇತ್ರ, ಶಾಸಕರಾದ ಎಸ್.ಎ. ರಾಮದಾಸ್, ತನ್ವೀರ್ ಸೇಠ್, ವಿಧಾನಪರಿಷತ್ತು ಸದಸ್ಯರಾದ ಮರಿತಿಬ್ಬೇಗೌಡ, ಸಿ.ಎನ್. ಮಂಜೇಗೌಡ, ಮೈಲ್ಯಾಕ್ ಅಧ್ಯಕ್ಷ ಆರ್. ರಘು, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್, ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್. ಮಂಜುನಾಥಸ್ವಾಮಿ, ಪದನಿಮಿತ್ತ ಜಂಟಿ ನಿರ್ದೇಶಕಿ ಭಾರತಿ, ಡಯಟ್ ಪ್ರಾಂಶುಪಾಲ ರಘುನಂದನ್, ಡಿಡಿಪಿಐ ರಾಮಚಂದ್ರರಾಜೇ ಅರಸ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ. ಗೋವಿಂದರಾಜು ಮೊದಲಾದವರು ಇದ್ದರು.
ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರು:
ಕಿರಿಯ ಪ್ರಾಥಮಿಕ ಶಾಲಾ ವಿಭಾಗ- ಜೂಲಿಯಟ್ ವಿಲ್ಮಾಷಾ, ಚಾಕಹಳ್ಳಿ, ಎಚ್.ಡಿ.ಕೋಟೆ ತಾ., ಎಂ. ರವಿಚಂದ್ರನ್, ಬೆಜ್ಜಲಪುರ, ಸರಗೂರು ತಾ., ಜಿ.ಎಸ್. ಲಲಿತ, ಗಂಧನಹಳ್ಳಿ ,ಕೆ.ಆರ್.ನಗರ ತಾ., ಎ. ತಾಸೀನ್ ತಾಜ್, ಎನ್‌ಜಿಕೆ ಬ್ಲಾಕ್, ಶಾಂತಿನಗರ ಮೈಸೂರು ಉತ್ತರ, ಎಸ್. ಇಂದಿರಾ ನೆಲ್ಲೂರು ಶೆಡ್, ಅಶೋಕಪುರಂ, ಮೈಸೂರು ದಕ್ಷಿಣ, ಎಸ್. ರತ್ನಮ್ಮ, ಹಳೇ ಕಾಮನಕೊಪ್ಪಲು, ಮೈಸೂರು ತಾ., ಬಿ.ಎಸ್. ಮೋಹನ, ಕಂತೇಕೊಪ್ಪಲು, ಪಿರಿಯಾಪಟ್ಟಣ ತಾ., ಕೆ.ವಿ. ಮಂಜುಳಾ ಕಾಹಳ್ಳಿ, ನಂಜನಗೂಡು ತಾ., ಕೆಂಪರಾಜು, ಕೋಣಗಹಳ್ಳಿ ಟಿ. ನರಸೀಪುರ ತಾ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ- ಎಂ.ಎ. ಸವಿತಾ, ಬೆಟ್ಟದಬೀಡು, ಎಚ್.ಡಿ.ಕೋಟೆ ತಾ., ಎಚ್.ಎಂ. ಚಂದ್ರಶೇಖರ ಎಂ.ಸಿ.ತಳಲು ಸರಗೂರು ತಾ., ಜೆ.ಎಂ. ಗುರುಮೂರ್ತಿ, ಬೆಂಕಿಪುರ, ಎನ್.ಎಲ್ ರಾಮಪ್ರಸಾದ್, ಹಂಬರಹಳ್ಳಿ ಕೊಪ್ಪಲು, ಕೆ.ಆರ್.ನಗರ ತಾ., ಎಚ್.ಜೆ. ಲೋಕೇಶ್, ಗೌಸಿಯಾನಗರ, ಮೈಸೂರು ಉತ್ತರ., ಮಂಜುಪ್ರಭಾ, ಕರ್ನಾಟಕ ಪಬ್ಲಿಕ್ ಶಾಲೆ, ಕುವೆಂಪುನಗರ, ಮೈಸೂರು ದಕ್ಷಿಣ, ಎಚ್.ಟಿ. ಜಲಜಾಕ್ಷಿ, ದುದ್ದಗೆರೆ ಮೈಸೂರು ತಾ., ಕೆ.ಎಸ್. ಪ್ರದೀಪ್, ಕಿರನಲ್ಲಿ, ಪಿರಿಯಾಪಟ್ಟಣ ತಾ., ಎಂ.ಆರ್. ಶ್ರೀನಿವಾಸ ನಾಯಕ, ಶಿರಮಳ್ಳಿ, ನಂಜನಗೂಡು ತಾ., ಆರ್. ಭ್ರಮರಾಂಬ, ಕರ್ನಾಟಕ ಪಬ್ಲಿಕ್ ಶಾಲೆ, ಮೂಗೂರು, ಟಿ. ನರಸೀಪುರ ತಾ.
Best Teacher Award: ಕೊಪ್ಪಳದ ಇಬ್ಬರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
ಪ್ರೌಢಶಾಲಾ ವಿಭಾಗ- ಗೋಪಾಲ, ಸವ್ವೆ, ಎಚ್.ಡಿ. ಕೋಟೆ ತಾ., ಸಣ್ಣ ಸೋಮಯ್ಯ, ಸರಗೂರು., ಸಿ.ಎನ್. ಗೀತಾ, ಮನುಗನಹಳ್ಳಿ, ಹುಣಸೂರು ತಾ., ಬಿ.ಸಿ. ಸತೀಶ, ಸಾಲಿಗ್ರಾಮ, ಕೆ.ಆರ್.ನಗರ ತಾ., ಎಸ್. ಆನಂದ, ವಿನಾಯಕನಗರ, ಮೈಸೂರು ಉತ್ತರ., ಕೆ.ಎಂ. ಮಹೇಶ್, ರೈಲ್ವೆ ಕಾರ್ಯಾಗಾರ, ಮೈಸೂರು ದಕ್ಷಿಣ., ಎಚ್.ಕೆ. ಸಂಜಯಕುಮಾರ್, ಉದ್ಬೂರು, ಮೈಸೂರು ತಾ., ಪ್ರಭಾಕರ ಸಿಂಗ್, ಮುತ್ತೂರು, ಪಿರಿಯಾಪಟ್ಟಣ ತಾ., ನಂಜುಂಡಸ್ವಾಮಿ, ತಲಕಾಡು, ಟಿ. ನರಸೀಪುರ ತಾ., ಗೋವಿಂದ, ಕುಪ್ಪರವಳ್ಳಿ, ನಂಜನಗೂಡು ತಾ.