PM-SHRI Scheme: 14500 ಮಾದರಿ ಶಾಲೆ ಅಭಿವೃದ್ಧಿಗೆ ಪಣ; ಏನಿದರ ವಿಶೇಷತೆ?

Published : Sep 06, 2022, 07:47 AM ISTUpdated : Sep 06, 2022, 07:53 AM IST
PM-SHRI Scheme: 14500 ಮಾದರಿ ಶಾಲೆ ಅಭಿವೃದ್ಧಿಗೆ ಪಣ; ಏನಿದರ ವಿಶೇಷತೆ?

ಸಾರಾಂಶ

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮೂಲಕ ದೇಶದ ಶಿಕ್ಷಣ ವಲಯಕ್ಕೆ ಹೊಸ ಸ್ಪರ್ಶ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ದೇಶದ 14500 ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಮೇಲ್ದರ್ಜೆಗೇರಿಸುವ ಪಿಎಂ-ಶ್ರೀ (ಪ್ರಧಾನ ಮಂತ್ರಿ ಸ್ಕೂಲ್ಸ್‌ ಫಾರ್‌ ರೈಸಿಂಗ್‌ ಇಂಡಿಯಾ) ಎಂಬ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಕಟಿಸಿದೆ. ಶಿಕ್ಷಕರ ದಿನಾಚರಣೆ ದಿನವಾದ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಈ ಘೋಷಣೆ ಮಾಡಿದ್ದಾರೆ.

ನವದೆಹಲಿ (ಸೆ.6) : ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮೂಲಕ ದೇಶದ ಶಿಕ್ಷಣ ವಲಯಕ್ಕೆ ಹೊಸ ಸ್ಪರ್ಶ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ದೇಶದ 14500 ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಮೇಲ್ದರ್ಜೆಗೇರಿಸುವ ಪಿಎಂ-ಶ್ರೀ (ಪ್ರಧಾನ ಮಂತ್ರಿ ಸ್ಕೂಲ್ಸ್‌ ಫಾರ್‌ ರೈಸಿಂಗ್‌ ಇಂಡಿಯಾ) ಎಂಬ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಕಟಿಸಿದೆ. ಶಿಕ್ಷಕರ ದಿನಾಚರಣೆ ದಿನವಾದ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಈ ಘೋಷಣೆ ಮಾಡಿದ್ದಾರೆ.

Redeveloped central vista ಸೆ.8ಕ್ಕೆ ಪ್ರಧಾನಿ ಮೋದಿ ಉದ್ಘಾಟನೆ, 20 ತಿಂಗಳ ಬಳಿಕ ಸಾರ್ವಜನಿಕರಿಗೆ ಮುಕ್ತ!

ಈ ಕುರಿತು ಸೋಮವಾರ ಸರಣಿ ಟ್ವೀಟ್‌(Tweet) ಮಾಡಿರುವ ಮೋದಿ(Narendra Modi), ‘ಶಿಕ್ಷಕರ ದಿನಾಚರಣೆ(Teachers Day)ಯಂದು ಪಿಎಂ-ಶ್ರೀ ಯೋಜನೆ(PM-SHRI scheme) ಅಡಿಯಲ್ಲಿ ದೇಶಾದ್ಯಂತ ಇರುವ 14500 ಶಾಲೆಗಳ ಅಭಿವೃದ್ಧಿ(School Development) ಹಾಗೂ ಅವುಗಳನ್ನು ಮೇಲ್ದರ್ಜೆಗೆ ಏರಿಸುವ ಹೊಸ ಉಪಕ್ರಮವನ್ನು ಘೋಷಿಸಲು ನನಗೆ ಸಂತೋಷವಾಗುತ್ತಿದೆ. ಪಿಎಂ-ಶ್ರೀ ಶಾಲೆಗಳು ಮಾದರಿ ಶಾಲೆಗಳಾಗಲಿದ್ದು, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲಿವೆ’ ಎಂದು ಹೇಳಿದ್ದಾರೆ.

ಏನಿದರ ವಿಶೇಷತೆ?

  • ಅತ್ಯಾಧುನಿಕ ಮೂಲಸೌಕರ‍್ಯ
  • ಸುಸಜ್ಜಿತ ಪ್ರಯೋಗಾಲಯಗಳು
  • ತಂತ್ರಜ್ಞಾನಾಧರಿತ ಸ್ಮಾರ್ಚ್‌ಕ್ಲಾಸ್‌
  • ವಿಶಾಲ ಗ್ರಂಥಾಲಯ ಸೌಲಭ್ಯ
  • ಎಲ್ಲಾ ಮಾದರಿ ಕ್ರೀಡೆಗೆ ಸೌಲಭ್ಯ
  • ಅನ್ವೇಷಣೆ ಕೇಂದ್ರಿತ ಕಲಿಕೆ
  • ಪರಿಸರ ಸ್ನೇಹಿ ವ್ಯವಸ್ಥೆ
  • ಇಂಧನಕ್ಷಮತೆ ಮೂಲಸೌಕರ‍್ಯ

‘ಪಿಎಂ-ಶ್ರೀ ಶಾಲೆಗಳು ಆಧುನಿಕ ಶಿಕ್ಷಣ(Modern education)ವನ್ನು ಒದಗಿಸುವ ಸಮಗ್ರ ವಿಧಾನಗಳನ್ನು ಒಳಗೊಂಡಿರುತ್ತವೆ. ಅನ್ವೇಷಣೆ ಕೇಂದ್ರಿತ ಕಲಿಕಾ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು. ಈ ಶಾಲೆಗಳಲ್ಲಿ ಆಧುನಿಕ ತಂತ್ರಜ್ಞಾನ, ಸ್ಮಾರ್ಚ್‌ ತರಗತಿಗಳು, ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಮೂಲಸೌಕರ್ಯಗಳಿರಲಿವೆ’ ಎಂದು ತಿಳಿಸಿದ್ದಾರೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(National Education Policy)ಯು() ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ವಲಯದಲ್ಲಿ ಬದಲಾವಣೆ ತಂದಿದ್ದು, ಪಿಎಂ-ಶ್ರೀ ಯೋಜನೆಯು ದೇಶಾದ್ಯಂತ ಇರುವ ವಿದ್ಯಾರ್ಥಿಗಳಿಗೆ ಇನ್ನಷ್ಟುಲಾಭ ತಂದುಕೊಡುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. 20 ಸಾವಿರ ಅಂಗನವಾಡಿಗಳಲ್ಲೂ ಎನ್‌ಇಪಿ ಜಾರಿ: ಸಚಿವ ನಾಗೇಶ್‌ ಘೋಷಣೆ

ಕೇಂದ್ರ ಸರ್ಕಾರದ ಅನುದಾನದಡಿ ಜಾರಿಗೊಳ್ಳಲಿರುವ ಈ ಯೋಜನೆಯು, ಕೇಂದ್ರ ಸರ್ಕಾರದಿಂದ ನಿರ್ವಹಿಸಲ್ಪಡುವ ಶಾಲೆ, ರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಸ್ಥಳೀಯ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಮೇಲ್ದರ್ಜೆಗೇರಿಸುವ ಗುರಿ ಹೊಂದಿದೆ. ಈ ಶಾಲೆಗಳು ತಾವು ಅಭಿವೃದ್ಧಿಗೊಳ್ಳುವ ಜೊತೆಗೆ ನೆರೆ ಹೊರೆಯ ಇತರೆ ಶಾಲೆಗಳಿಗೆ ಮಾದರಿಯಾಗಲಿವೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ