ನೂತನ ಶಿಕ್ಷಣ ನೀತಿ​ಯಿಂದ ಸ್ವಾಭಿ​ಮಾ​ನದ ಮನಃ​ಸ್ಥಿ​ತಿ: ಬಿ.ಸಿ.​ನಾ​ಗೇ​ಶ್‌

By Kannadaprabha News  |  First Published Jan 18, 2023, 9:56 AM IST

ಬ್ರಿಟಿಷರು ಮೆಕಾಲೆ ಶಿಕ್ಷಣ ಪದ್ಧತಿ ಮೂಲಕ ಸ್ವಾವಲಂಬಿಗಳಾಗಿದ್ದ ನಮ್ಮ ದೇಶದ ಜನರ ಜೀವನ ಪದ್ಧತಿ ಹಾಳು ಮಾಡಿದ್ದು, ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿ ಮೂಲಕ ಸ್ವಾವಲಂಬಿ ಹಾಗೂ ಸ್ವಾಭಿಮಾನಿಯಾದ ಮನಃಸ್ಥಿತಿ ಬೆಳೆಸುವ ಪ್ರಯತ್ನ ಮತ್ತೆ ನಡೆಯುತ್ತಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದಾರೆ.


ಮೂಲ್ಕಿ (ಜ.18) : ಬ್ರಿಟಿಷರು ಮೆಕಾಲೆ ಶಿಕ್ಷಣ ಪದ್ಧತಿ ಮೂಲಕ ಸ್ವಾವಲಂಬಿಗಳಾಗಿದ್ದ ನಮ್ಮ ದೇಶದ ಜನರ ಜೀವನ ಪದ್ಧತಿ ಹಾಳು ಮಾಡಿದ್ದು, ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿ ಮೂಲಕ ಸ್ವಾವಲಂಬಿ ಹಾಗೂ ಸ್ವಾಭಿಮಾನಿಯಾದ ಮನಃಸ್ಥಿತಿ ಬೆಳೆಸುವ ಪ್ರಯತ್ನ ಮತ್ತೆ ನಡೆಯುತ್ತಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದಾರೆ.

ಸುವರ್ಣ ಸಂಭ್ರಮದಲ್ಲಿರುವ ಮೂಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಯಲು ರಂಗ ಮಂದಿರದಲ್ಲಿ ಮಂಗ​ಳ​ವಾರ, ಕಾಲೇಜಿನ ಸುವರ್ಣ ಮಹೋತ್ಸವ ಸಂಭ್ರಮ ಆಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾ​ಟಿಸಿ ಅವರು ಮಾತ​ನಾ​ಡಿ​ದ​ರು.

Tap to resize

Latest Videos

 

Pariksha Pe Charcha: ಕಾರ್ಯಕ್ರಮ ವೀಕ್ಷಣೆಗೆ ಶಾಲೆಗಳಲ್ಲಿ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ

ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸರ್ಕಾರಿ ಶಾಲೆ​ಗ​ಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಕರ ನೇಮಕ ನಡೆಯುತ್ತಿದೆ. ಸರ್ಕಾರಿ ಶಾಲೆಗಳಲ್ಲಿನ ಕೊಠಡಿ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರ 10 ಸಾವಿರ ಕೊಠಡಿ ನಿರ್ಮಾಣ ಮಾಡುತ್ತಿದ್ದು ಶಾಲೆಗಳಲ್ಲಿ ಶೌಚಾಲಯ ಹಾಗೂ ಕೊಠಡಿಗಳ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ ಎಂದರು. ಮೂಲ್ಕಿ ನಗರ ಪಂಚಾ​ಯಿತಿ ಅಧ್ಯಕ್ಷ ಸುಭಾಷ್‌ ಶೆಟ್ಟಿಅಧ್ಯ​ಕ್ಷತೆ ವಹಿ​ಸಿ​ದ್ದರು. ಶಾಲೆಯ ಸ್ಮರಣ ಸಂಚಿಕೆ ‘ಹೊನ್ನ ಸಂಭ್ರಮ’ವನ್ನು ಶಾಸಕ ಉಮಾನಾಥ ಕೋಟ್ಯಾನ್‌ ಬಿಡುಗಡೆ ಮಾಡಿದರು. ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.

ಮಾಜಿ ಸಚಿವ ಕೆ.ಅಭಯ ಚಂದ್ರ ಜೈನ್‌(Abhay chandra jain), ಕರ್ಣಾ​ಟಕ ಬ್ಯಾಂಕ್‌ ನಾನ್‌ ಎಕ್ಸಿಕ್ಯೂಟಿವ್‌ ಚೇರ್‌ಮ್ಯಾನ್‌ ಪ್ರದೀಪ್‌ ಕುಮಾರ್‌, ಉದ್ಯಮಿ ಅಜಿತ್‌ ರೈ ಪಾದೆ ಮನೆ, ಮೂಲ್ಕಿ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎ​ಚ್‌.ಅರವಿಂದ ಪೂಂಜ, ಪ.ಪೂ. ಶಿಕ್ಷಣ ಇಲಾಖೆ ಉಪ​ನಿ​ರ್ದೇ​ಶಕ ಜಯಣ್ಣ ಸಿ.ಡಿ., ಉಪನಿರ್ದೇಶಕ ಗೊವಿಂದ ಮಡಿವಾಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಸುಧಾಕರ್‌ ಕೆ., ಉದ್ಯಮಿ ಜಾನ್‌ ಡಿಸೋಜ ಮೈಸೂರು, ಸಮಿತಿ ಗೌರ​ವಾ​ಧ್ಯಕ್ಷ ಯದು ನಾರಾಯಣ ಶೆಟ್ಟಿ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಶೋಕ್‌ ಕುಮಾರ್‌ ಶೆಟ್ಟಿ ಪ್ರೌಢಶಾಲಾ ಅಭಿವೃದ್ಧಿ ಸಮಿತಿಯ ಹರ್ಷರಾಜ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಮೀನಾ ಆಳ್ವ, ಉದ್ಯಮಿ ಎಂ. ಬಿ.ಖಾನ್‌ ಕಾರ್ನಾಡ್‌, ಗೋವಿಂದ ಮಡಿವಾಳ, ಕಾಲೇಜು ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ, ಪ್ರೌಢಶಾಲಾ ಹಿರಿಯ ಉಪನ್ಯಾಸಕಿ ಜಯಲಕ್ಷ್ಮಿ ನಾಯಕ್‌ ಮತ್ತಿತರರು ಉಪಸ್ತಿತರಿದ್ದರು. ಕಾಲೇಜಿನ ಪ್ರಾಚಾರ್ಯ ಡಾ.ವಾಸುದೇವ ಬೆಳ್ಳೆ ಸ್ವಾಗತಿಸಿದರು. ಕಾಲೇಜು ಉಪನ್ಯಾಸಕಿ ಡಾ. ರೇಖಾ ಬಿ.ಎಸ್‌., ಅಶೋಕ್‌ ಭಂಡಾರಿ ನಿರೂಪಿಸಿದರು.

ಮೌಲ್ಯಯುತ ಶಿಕ್ಷಣಕ್ಕೆ ಹೊಸ ಪದ್ದತಿ, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ: ಶಿಕ್ಷಣ ಸಚಿವ ಬಿ.ಸಿ ನಾಗೇಶ್

ರವೀಂದ್ರ ಪ್ರಭು ತಂಡದ ಸಂಗೀತ ರಸಮಂಜರಿ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಜಯಕುಮಾರ್‌ ಕೊಡಿಯಾಲ್‌ ಬೈಲ್‌ ನಿರ್ದೇಶನದ ‘ಶಿವದೂತೆ ಗುಳಿಗೆ’ ಪೌರಾಣಿಕ ನಾಟಕ ನಡೆಯಿತು.

click me!