ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ಕ್ಲಾಸ್‌ಮೇಟ್‌ಗೆ ಅವಮಾನಿಸಿದ ಯುವತಿ: ವೀಡಿಯೋಗೆ ತೀವ್ರ ಆಕ್ರೋಶ

Published : Jan 29, 2026, 08:22 PM IST
Woman Mocks Former Schoolmate For Working As Pizza Delivery Boy

ಸಾರಾಂಶ

ತನ್ನ ಮಾಜಿ ಕ್ಲಾಸ್‌ಮೇಟ್ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವುದನ್ನು ನೋಡಿದ ಯುವತಿಯೊಬ್ಬಳು, ಆತನನ್ನು ಅವಮಾನಿಸಿ ವಿಡಿಯೋ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವತಿಯ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕ್ಲಾಸ್‌ಮೇಟ್‌ಗೆ ಅವಮಾನಿಸಿದ ಯುವತಿ:

ಬಾಲ್ಯದಲ್ಲಿ ಅನೇಕರು ಏನೇನೋ ಕನಸು ಕಂಡಿರ್ತಾರೆ. ಶಾಲೆಯಲ್ಲಿ ಓದುತ್ತಾ ಇಂಜಿನಿಯರ್ ಆಗ್ಬೇಕು ಡಾಕ್ಟರ್ ಆಗ್ಬೇಕು ವಿಜ್ಞಾನಿ ಆಗ್ಬೇಕು ಎಂದೆಲ್ಲಾ ಕನಸು ಕಾಣುವ ಮಕ್ಕಳು ದೊಡ್ಡವರಾಗುತ್ತಾ ಆಗುತ್ತಾ ತಮ್ಮ ಈ ಕನಸುಗಳನ್ನು ಮರೆಯುತ್ತಾರೆ ಅಥವಾ ಜೀವನದ ಕೆಲ ಅನಿವಾರ್ಯತೆಗಳಿಂದಾಗಿ ಕನಸುಗಳನ್ನು ಈಡೇರಿಸಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವೇ ಆಗುವುದಿಲ್ಲ. ಶಾಲೆಯಲ್ಲಿ ಅನೇಕರಿಗೆ ಸ್ಪೂರ್ತಿ ತುಂಬುತ್ತಿದ್ದವರು ಬದುಕಿ ಅನಿವಾರ್ಯತೆಯಲ್ಲಿ ಸ್ಪೂರ್ತಿಗಾಗಿ ಹುಡುಕಾಡುತ್ತಾರೆ. ಮತ್ತೊಂದೆಡೆ ಜೊತೆಗೆ ಕಲಿಯುತ್ತಿದ್ದವರೆಲ್ಲಾ ತಮ್ಮ ಅಧ್ಯಯನ ಮುಗಿಯುತ್ತಿದ್ದಂತೆ ಬೇರೆ ಬೇರೆ ದಾರಿ ಹಿಡಿದು ಬಿಡುತ್ತಾರೆ. ಕೆಲವರು ಸಂಪರ್ಕದಲ್ಲಿದ್ದರೆ ಇನ್ನೂ ಕೆಲವರು ಸಂಪರ್ಕದಲ್ಲಿ ಇರುವುದಿಲ್ಲ, ಆದರೆ ಅಚಾನಕ್ ಆಗಿ ದಾರಿಯಲ್ಲೋ ಸಮಾರಂಭದಲ್ಲೋ ಸಿಕ್ಕಿ ಬಿಡುತ್ತಾರೆ.

ಹಾಗೆಯೇ ಇಲ್ಲೊಬ್ಬಳು ಯುವತಿಗೆ ಕ್ಲಾಸ್‌ಮೇಟ್ ಹುಡುಗನೋರ್ವ ಸಿಕ್ಕಿದ್ದು, ಅವರಿಬ್ಬರ ನಡುವಿನ ಮಾತುಕತೆಯನ್ನು ಅ ಯುವತಿ ವೀಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾಳೆ. ಈ ವೀಡಿಯೋವನ್ನು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಆ ಯುವತಿಯ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಆ ವೀಡಿಯೋದಲ್ಲಿ ಏನಿದೆ.

ಇದನ್ನೂ ಓದಿ:  ಗಂಡನಿಂದಲೇ ಸ್ವಾಟ್ ಕಮಾಂಡೋ ಆಗಿದ್ದ 24 ವರ್ಷದ ಗರ್ಭಿಣಿ ಪತ್ನಿಯ ಭೀಕರ ಹತ್ಯೆ: ಒಂದೂವರೆ ವರ್ಷದ ಮಗು ಅನಾಥ

ಅಂದಹಾಗೆ ಆ ಯುವತಿಗೆ ತನ್ನ ಮಾಜಿ ಕ್ಲಾಸ್‌ಮೇಟ್ ಹುಡುಗನೋರ್ವ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವಾಗಲೇ ದಾರಿ ಮಧ್ಯೆ ಸಿಕ್ಕಿದ್ದಾನೆ. ಆಕೆ ಆತನನ್ನು ನಗುನಗುತ್ತಾ ಮಾತನಾಡುತ್ತಲೇ ಅವಮಾನಿಸಿದ್ದಾಳೆ. ತನ್ನ ಕ್ಲಾಸ್‌ಮೇಟ್ ಪಿಜ್ಜಾ ಡೆಲಿವರಿ ಮಾಡುತ್ತಿರುವುದನ್ನು ನೋಡಿ ಆಕೆ ಆತನನ್ನು ಅವಮಾನಿಸಿದ್ದಾಳೆ. ಇವನು ನನ್ನ ಗೆಳೆಯ. ಇವತ್ತು ಅವನು ನಮಗೆ ಸಿಕ್ಕಿದ್ದಾನೆ. ಓದುವ ಸಮಯದಲ್ಲಿ ಅವನು ನಮಗೆ ಬಹಳ ಪ್ರೇರಣೆ ನೀಡ್ತಾ ಇದ್ದ. ಇದಾಗಿ 3 ವರ್ಷ ಆಯ್ತು, ಆದರೆ ಅವನು ಈಗ ಡೊಮಿನೋಸ್ ಪಿಜ್ಜಾ ಮಾರುವವನು ಆಗಿದ್ದಾನೆ ಎಂದು ಹೇಳುತ್ತಾಳೆ. ಜೊತೆಗೆ ಡೊಮಿನೋಸ್ ಪಿಜ್ಜಾ ಡೆಲಿವರಿ ಬಾಯ್ ಆಗಿದ್ದಕ್ಕೆ ಹೇಗೆ ಅನಿಸ್ತಿದೆ ತುಂಬಾ ಖುಷಿ ಆಗ್ತಿದ್ಯಾ ಎಂದು ಅವಮಾನಿಸುತ್ತಾಳೆ. ಆಕೆಯ ಮಾತು ಕೇಳಿ ಬೇಸರ ಹಾಗೂ ನಾಚಿಕೆಯಿಂದ ಒಂದು ಮಾತನ್ನು ಆಡದೇ ಆ ಹುಡುಗ ಬೇರೆಡೆ ತಿರುಗುತ್ತಾನೆ. ನಂತರ ಆಕೆ ಶಾಲಾ ದಿನಗಳು ನೆನಪಾಗುತ್ತಿದ್ಯಾ ಎಂದು ಆತನ ಬಳಿ ಕೇಳುತ್ತಾಳೆ. ಹಾ ಬಹಳ ನೆನಪಾಗುತ್ತಿದೆ ಎಂದು ಆತ ಹೇಳುತ್ತಾನೆ.

ಇದನ್ನೂ ಓದಿ: ಕೆಳಗಿಳಿದು ಬರಲು ಒಪ್ಪದ ಕಸ್ಟಮರ್ ಆರ್ಡರ್ ಕ್ಯಾನ್ಸಲ್ ಮಾಡಿದ ಝೋಮ್ಯಾಟೋ ಡೆಲಿವರಿ ಬಾಯ್ ಮಾಡಿದ್ದೇನು?

ಈ ಸಂವಹನದ ವೀಡಿಯೋ ಈಗ ಭಾರಿ ವೈರಲ್ ಆಗಿದ್ದು, ಅನೇಕರು ವೀಡಿಯೋ ನೋಡಿ ಬಹಳ ಬೇಸರ ವ್ಯಕ್ತಪಡಿಸಿದ್ದಾರೆ.. ಹುಡುಗರ ಜೀವನ ಸುಲಭವಲ್ಲ, ಕೆಲವೊಮ್ಮೆ ವಯಸ್ಸಿಗೂ ಮೊದಲೇ ಜವಾಬ್ದಾರಿ ಬಂದು ಬಿಡುತ್ತದೆ. ಕನಸುಗಳು ಸಮಾಧಿಯಾಗುತ್ತವೆ. ಸ್ವಾಭಿಮಾನವನ್ನು ಪರೀಕ್ಷಿಸಲಾಗುತ್ತದೆ. ಪಿಜ್ಜಾ ಡೆಲಿವರಿ ಮಾಡುವುದು ನಾಚಿಕೆಗೇಡಿನ ಸಂಗತಿಯಲ್ಲ. ಯಾರದ್ದೋ ಹೋರಾಟವನ್ನು ಅಣಕಿಸುವುದು ಸರಿಯಲ್ಲ ಎಂದು ಒಬ್ಬರು ಬರೆದುಕೊಂಡಿದ್ದಾರೆ. ನೀನು ನಿಜವಾಗಿಯೂ ಹೀರೋ, ನೀನು ಕಷ್ಟಪಟ್ಟು ದುಡಿಯುತ್ತಿದ್ದಿಯಾ ಸ್ವಾಭಿಮಾನದಿಂದ ದುಡಿಯುತ್ತಿದ್ದೀಯಾ? ನೀವು ಯಾರಿಗೂ ಭಾರವಾಗಿ ಬದುಕುತ್ತಿಲ್ಲ, ಯಾವುದೇ ಕೆಲಸ ಹೆಚ್ಚು ಅಥವಾ ಕಡಿಮೆ ಅಲ್ಲ, ನೀನೊಬ್ಬ ನಿಜವಾದ ಹೀರೋ ನಿನ್ನ ಬಗ್ಗೆ ನನಗೆ ಗೌರವವಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರಾಮಾಣಿಕತೆಯಿಂದ ಮಾಡುವ ಯಾವ ಕೆಲಸವೂ ಕೆಟ್ಟದಲ್ಲ, ಆದರೆ ಸಾರ್ವಜನಿಕವಾಗಿ ಒಬ್ಬರನ್ನು ಅವಮಾನಿಸುವುದು ಕೆಟ್ಟದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

 

 

PREV
Read more Articles on
click me!

Recommended Stories

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೀಸೆ ಚಿಗುರದ ಮಕ್ಕಳ ಧಮ್ ಮಾರೋ ಧಮ್: ವಿಡಿಯೋ ವೈರಲ್
ಬಾಗಲಕೋಟೆ: ಬಿಸಿಯೂಟದ ಬಳಿಕ ಕೊಳಚೆ ನೀರಲ್ಲೇ ಪ್ಲೇಟ್ ತೊಳೆಯುವ ದುಸ್ಥಿತಿಯಲ್ಲಿ ಶಾಲಾ ಮಕ್ಕಳು!