
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಇಂದು NEET UG 2025ರ ಅಂತಿಮ ಉತ್ತರ ಕೀ ಹಾಗೂ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಈ ವರ್ಷ NEET ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ – neet.nta.nic.in ನಲ್ಲಿ ಲಾಗಿನ್ ಮೂಲಕ ವೀಕ್ಷಿಸಬಹುದು. ಈ ಬಾರಿ ರಾಜಸ್ಥಾನದ ಮಹೇಶ್ ಕುಮಾರ್ ಅವರು ರಾಷ್ಟ್ರಮಟ್ಟದಲ್ಲಿ ಮೊದಲ ರ‍್ಯಾಂಕ್ ಪಡೆದು 99.9999547% ಶೇಕಡಾ ಅಂಕಗಳನ್ನು ಗಳಿಸಿ ಉನ್ನತ ಸಾಧನೆ ದಾಖಲಿಸಿದ್ದಾರೆ. ದೇಶದಾದ್ಯಂತ 12.36 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಅರ್ಹತೆ ಪಡೆದಿದ್ದಾರೆ.
ನೀಟ್ ಯುಜಿ 2025 ಗೆ ನೋಂದಾಯಿಸಿಕೊಂಡಿದ್ದ 22,76,069 ಅಭ್ಯರ್ಥಿಗಳಲ್ಲಿ 22,09,318 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಹಾಜರಾದವರಲ್ಲಿ 9,37,411 ಪುರುಷರು, 12,71,896 ಮಹಿಳೆಯರು ಮತ್ತು 11 ತೃತೀಯ ಲಿಂಗಿಗಳು. ಇದರಲ್ಲಿ 12,36,531 ಅಭ್ಯರ್ಥಿಗಳು ಪಾಸಾಗಿದ್ದಾರೆ. ಇದರಲ್ಲಿ 5,14,063 ಪುರುಷರು, 7,22,462 ಮಹಿಳೆಯರು ಮತ್ತು 6 ತೃತೀಯ ಲಿಂಗಿಗಳಾಗಿದ್ದಾರೆ.
ವಿಧಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ neet.nta.nic.in ನಲ್ಲಿ ಅರ್ಜಿ ಸಂಖ್ಯೆ ಹಾಗೂ ಜನ್ಮ ದಿನಾಂಕ ಬಳಸಿ ಪರಿಶೀಲಿಸಬಹುದು.
NEET UG 2025 ಟಾಪ್ 10 ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿ
1: ಮಹೇಶ್ ಕುಮಾರ್
2: ಉತ್ಕರ್ಷ್ ಅವಧಿಯಾ
3: ಕೃಶಾಂಗ್ ಜೋಶಿ
4: ಮೃಣಾಲ್ ಕಿಶೋರ್ ಝಾ
5: ಅವಿಕಾ ಅಗ್ಗರ್ವಾಲ್
6: ಜೆನಿಲ್ ವಿನೋದ್‌ಭಾಯಿ ಭಾಯಾನಿ
7: ಕೇಶವ್ ಮಿತ್ತಲ್
8: ಝಾ ಭಾವ್ಯ ಚಿರಾಗ್
9: ಹರ್ಷ್ ಕೆಡವತ್
10: ಆರವ್ ಅಗ್ರವಾಲ್
ಕರ್ನಾಟಕದ ವೈದ್ಯಕೀಯ ಸ್ಪರ್ಧೆಯಲ್ಲಿನ ಶ್ರೇಷ್ಟತೆ ಈ ವರ್ಷವೂ ಮುಂದುವರಿದಿದೆ. ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು.