SSLC ಪೂರಕ ಪರೀಕ್ಷೆ 2ರ ಫಲಿತಾಂಶ ಪ್ರಕಟ, ಹೀಗೆ ಚೆಕ್‌ ಮಾಡಿ

Published : Jun 13, 2025, 01:18 PM IST
SSLC exam begins in Karnataka from today

ಸಾರಾಂಶ

ಕರ್ನಾಟಕ SSLC ಪೂರಕ ಪರೀಕ್ಷೆ 2025ರ ಫಲಿತಾಂಶ ಪ್ರಕಟವಾಗಿದೆ. ವಿದ್ಯಾರ್ಥಿಗಳು karresults.nic.in ನಲ್ಲಿ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ಒಟ್ಟು 87,330 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (KSEAB) ಜೂನ್ 13, 2025ರಂದು SSLC ಪೂರಕ ಪರೀಕ್ಷೆ (ಪರೀಕ್ಷೆ-2) ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಪೂರಕ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಆಧಿಕೃತ ವೆಬ್‌ಸೈಟ್ karresults.nic.in ನಲ್ಲಿ ಪರಿಶೀಲಿಸಬಹುದು. ಈ ವರ್ಷ SSLC ಪೂರಕ ಪರೀಕ್ಷೆ 2025ರ ಮೇ 26ರಿಂದ ಜೂನ್ 2ರವರೆಗೆ ನಡೆಯಿತು. ಎಲ್ಲಾ ಪರೀಕ್ಷೆಗಳನ್ನು ಒಂದೇ ಪಾಳಿಯಲ್ಲಿ, ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:15ರವರೆಗೆ ನಡೆಸಲಾಯಿತು.

ಕರ್ನಾಟಕ SSLC 2 ಪರೀಕ್ಷೆಯಲ್ಲಿ ಒಟ್ಟು 87,330 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. SSLC ಪರೀಕ್ಷೆ 2 ರಲ್ಲಿ ಸರ್ಕಾರಿ ಶಾಲೆಗಳ ಉತ್ತೀರ್ಣ 36.65% ಬಂದಿದೆ.

SSLC ಪೂರಕ ಪರೀಕ್ಷೆಯ ಫಲಿತಾಂಶವನ್ನು ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

  • karresults.nic.in ಎಂಬ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ "KSEAB SSLC ಪೂರಕ ಪರೀಕ್ಷೆ ಫಲಿತಾಂಶ 2025" ಎಂಬ ಲಿಂಕ್ ಕ್ಲಿಕ್ ಮಾಡಿ.
  • ನಿಮ್ಮ ಮಾಹಿತಿಯನ್ನು (ರೋಲ್ ನಂಬರ್, ನೋಂದಣಿ ಸಂಖ್ಯೆ ಇತ್ಯಾದಿ) ನಮೂದಿಸಿ.
  • ಸಬ್‌ಮಿಟ್‌ ಕ್ಲಿಕ್ ಮಾಡಿದ ಬಳಿಕ, ನಿಮ್ಮ ಫಲಿತಾಂಶ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
  • ಅದನ್ನು ಪರಿಶೀಲಿಸಿ ಮತ್ತು ದಾಖಲೆ ಡೌನ್ಲೋಡ್‌ ಮಾಡಿ

ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (KSEAB) ಏಪ್ರಿಲ್ 30, 2025 ರಂದು SSLC (10ನೇ ತರಗತಿ) ಪರೀಕ್ಷೆ 1ನೇ ಹಂತದ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿತು. ಈ ಬಾರಿ ಒಟ್ಟು 8,42,173 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 5,24,984 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಒಟ್ಟಾರೆ ಉತ್ತೀರ್ಣ ಶೇಕಡಾ 62.34% ದಾಖಲಾಗಿತ್ತು. ಹುಡುಗರು 58.07% ಮತ್ತು ಹುಡುಗಿಯರು 74% ಫಲಿತಾಂಶ ದಾಖಲಿಸಿದ್ದರು.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ