2024ನೇ ಸಾಲಿನ ವಿವಾದಿತ ನೀಟ್-ಯುಜಿ ಪರೀಕ್ಷೆ ಸುಪ್ರೀಂ ಕೋರ್ಟ್ ಮೆಟ್ಟಲೇರಿದ ಬೆನ್ನಲ್ಲೇ, ನೀಟ್–ಪಿಜಿ ಪರೀಕ್ಷೆ ದಿನಾಂಕ ಘೋಷಣೆಯಾಗಿದೆ. ಎರಡು ಪಾಳಿಗಳಲ್ಲಿ ನಡೆಯಲಿದೆ ಪಿಜಿ ಪರೀಕ್ಷೆ.
ನವದೆಹಲಿ (ಜು.5): 2024ನೇ ಸಾಲಿನ ವಿವಾದಿತ ನೀಟ್-ಯುಜಿ ಪರೀಕ್ಷೆ ಸುಪ್ರೀಂ ಕೋರ್ಟ್ ಮೆಟ್ಟಲೇರಿದ ಬೆನ್ನಲ್ಲೇ, ನೀಟ್–ಪಿಜಿ ಪರೀಕ್ಷೆ ದಿನಾಂಕ ಘೋಷಣೆಯಾಗಿದೆ. ವೈದ್ಯಕೀಯ ಕ್ಷೇತ್ರದ ಸ್ನಾತಕೋತ್ತರ ಕೋರ್ಸ್ ಪ್ರವೇಶಕ್ಕೆ ಅಗತ್ಯವಿರುವ ನೀಟ್–ಪಿಜಿ ಪರೀಕ್ಷೆಯನ್ನು ಆಗಸ್ಟ್ 11 ರಂದು ಎರಡು ಶೆಡ್ಯುಲ್‌ನಲ್ಲಿ ನಡೆಯಲಿದೆ. ಈ ಬಗ್ಗೆ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ (NBEMS) ಜುಲೈ 5ರ ಶುಕ್ರವಾರ ನೀಟ್ ಪಿಜಿ ಪರೀಕ್ಷೆ ನಡೆಸಲು ಹೊಸ ದಿನಾಂಕವನ್ನು ಘೋಷಿಸಿದೆ.
ಮೇ 5ರಂದು ನಡೆದಿದ್ದ ನೀಟ್-ಯುಜಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಬೆಳಕಿಗೆ ಬಂದಿತ್ತು. ಈ ವಿವಾದದ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ಜೂ,23ರಂದು ನಡೆಯಬೇಕಿದ್ದ ನೀಟ್-ಪಿಜಿ ಪರೀಕ್ಷೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಮುಂದೂಡಿತ್ತು. ಇದೀಗ ಪಿಜಿಗೆ ಹೊಸ ದಿನಾಂಕ ಘೋಷಿಸಿದ್ದು, ಆಗಸ್ಟ್ 11 ರಂದು ಎರಡು ಪಾಳಿಯಲ್ಲಿ ನಡೆಯಲಿದೆ.
undefined
ರಾಜ್ಯದ 384 ಕೆಎಎಸ್ ಹುದ್ದೆಗಳ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ
ಆಗಸ್ಟ್ 21ರಿಂದ ಯುಜಿಸಿ-ನೆಟ್ :
ನೀಟ್ ಪೇಪರ್ ಸೋರಿಕೆ ಹಗರಣದ ಬೆನ್ನಲ್ಲೇ UGC-NET ಪರೀಕ್ಷೆಗೆ ಹೊಸ ದಿನಾಂಕಗಳನ್ನು ಈಗಾಗಲೇ ಪ್ರಕಟಿಸಿದೆ. ಯುಜಿ ಪರೀಕ್ಷೆಯನ್ನು ಆಗಸ್ಟ್ 21 ರಿಂದ ಸೆಪ್ಟೆಂಬರ್ 4ರ ನಡುವೆ ಆಯೋಜಿಸಲಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಪ್ರಕಟಿಸಿದೆ. ಡಾರ್ಕ್‌ನೆಟ್‌ನಲ್ಲಿ ಪತ್ರಿಕೆ ಸೋರಿಕೆಯಾದ ನಂತರ ಪರೀಕ್ಷೆಯನ್ನು ರದ್ದುಗೊಳಿಸಿದ ಒಂದು ವಾರದ ನಂತರ ಈ ಘೋಷಣೆ ಮಾಡಲಾಗಿದೆ.
ಯುಜಿ ಪರೀಕ್ಷೆಯಲ್ಲಿ ಭಾರೀ ಅಕ್ರಮ:
ನೀಟ್, ನೆಟ್ ಪ್ರವೇಶ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿದ್ದು ಬೆಳಕಿಗೆ ಬಂದ ಬೆನ್ನಲ್ಲೇ ಜು.6ರಂದು ನಡೆಯಬೇಕಿರುವ ಫಾರಿನ್ ಮೆಡಿಕಲ್ ಗ್ರಾಜುಯೇಟ್ ಎಕ್ಸಾಮಿನೇಷನ್ (ಎಫ್‌ಎಂಜಿಇ) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕೂಡಾ ಸೋರಿಕೆಯಾಗಿರುವ ಕಳವಳ ವ್ಯಕ್ತವಾಗಿದೆ.
ಜು.6ರಂದು ನಡೆಯಬೇಕಿರುವ ಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತು ಅದರ ಉತ್ತರಗಳು ಮಾರಾಟಕ್ಕಿವೆ ಎಂದು ಕೆಲ ಅನಾಮಿಕ ವ್ಯಕ್ತಿಗಳು ಸಾಮಾಜಿಕ ಜಾಲತಾಣವಾದ ಟೆಲಿಗ್ರಾಂನಲ್ಲಿ ಜಾಹೀರಾತು ಪೋಸ್ಟ್ ಒಂದನ್ನು ಹಾಕಿದ್ದರು.
ಈ ಹಿನ್ನೆಲೆಯಲ್ಲಿ ತಿರುವನಂತಪುರದ ಸೈಬರ್ ಕ್ರೈಮ್ ಪೊಲೀಸರು ಜಾಹೀರಾತು ನೀಡಿದವರ ವಿರುದ್ಧ ಪ್ರಕರನ ದಾಖಲಿಸಿದ್ದಾರೆ. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆಯೇ? ಇಲ್ಲವೇ ಎಂಬುದರ ಕುರಿತು ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ.
9 ತಿಂಗಳಲ್ಲಿ 8-12ನೇ ಕ್ಲಾಸ್ ಮುಗಿಸಿ, 15 ವರ್ಷಕ್ಕೇ ಇಂಜಿನಿಯರ್ ಆದ ನಿರ್ಭಯ್; ಈಗೇನು ಮಾಡ್ತಿದಾನೆ?
ಯಾವ ಪರೀಕ್ಷೆ ಇದು?:
ವಿದೇಶಗಳಲ್ಲಿ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳು ಭಾರತದಲ್ಲಿ ಸೇವೆ ನೀಡುವುದಕ್ಕೂ ಮುನ್ನ ಭಾರತದಲ್ಲೂ ಒಂದು ಪರೀಕ್ಷೆ ಉತ್ತೀರ್ಣವಾಗಬೇಕಿರುತ್ತದೆ. ಅದೇ ಫಾರಿನ್ ಮೆಡಿಕಲ್ ಗ್ರಾಜುಯೇಟ್ ಎಕ್ಸಾಮಿನೇಷನ್ ಪರೀಕ್ಷೆ.
50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸುಪ್ರೀಂಗೆ ಅರ್ಜಿ:
ನೀಟ್-ಯುಜಿ ಪರೀಕ್ಷೆ ಬರೆದ ಗುಜರಾತ್ ಮೂಲದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಾದಿತ ಪರೀಕ್ಷೆಯನ್ನು ರದ್ದುಗೊಳಿಸದಂತೆ ಕೇಂದ್ರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ)ಗೆ ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಈ ವಿದ್ಯಾರ್ಥಿಗಳ ಪೈಕಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ ವಿದ್ಯಾರ್ಥಿಗಳು ಕೂಡಾ ಇದ್ದಾರೆ.
ಪರೀಕ್ಷೆಯಲ್ಲಿ ಅಕ್ರಮ ಎಸಗಿದವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್, ಕೇಂದ್ರ ಶಿಕ್ಷಣ ಇಲಾಖೆಗೆ ಸೂಚಿಸಬೇಕೆಂದು ವಿದ್ಯಾರ್ಥಿಗಳು ಕೋರಿದ್ದಾರೆ. ವಿವಾದಿತ ಪರೀಕ್ಷೆಯ ನಿರ್ವಹಣೆ, ಉನ್ನತ ಮಟ್ಟದ ತನಿಖೆಗೆ ಕೋರಿ 56 ವಿದ್ಯಾರ್ಥಿಗಳು ಈಗಾಗಲೇ ಸುಪ್ರೀಂಕೋರ್ಟ್‌ಗೆ ಒಟ್ಟು 26 ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲಾ ಅರ್ಜಿಗಳು ಜು.8ರಂದು ವಿಚಾರಣೆಗೆ ಬರಲಿದೆ.