Asianet Suvarna News Asianet Suvarna News

NEET-PG : ಜನವರಿ 12 ರಿಂದ ಕೌನ್ಸೆಲಿಂಗ್ ಪ್ರಾರಂಭ, ಆರೋಗ್ಯ ಸಚಿವರ ಘೋಷಣೆ!

ಜನವರಿ 12 ರಿಂದ ನೀಟ್-ಪಿಜಿ ಕೌನ್ಸೆಲಿಂಗ್ ಆರಂಭ
ಕೇಂದ್ರ ಆರೋಗ್ಯ ಸಚಿವ ಮುನ್ಸುಖ್ ಮಾಂಡವಿಯಾ ಘೋಷಣೆ
ಕೆಲ ದಿನಗಳ ಹಿಂದೆ ಕೌನ್ಸೆಲಿಂಗ್ ಗೆ ಅನುಮತಿ ನೀಡಿದ್ದ ಸುಪ್ರೀಂ ಕೋರ್ಟ್

Counseling for NEET post graduate admission is all set to begin from January 12 says Union Health Minister Mansukh Mandaviya san
Author
Bengaluru, First Published Jan 9, 2022, 2:34 PM IST

ನವದೆಹಲಿ (ಜ. 9): ಸಾಕಷ್ಟು ವಿಳಂಬದ ಬಳಿಕ 2021-2022 ನೇ ಶೈಕ್ಷಣಿಕ ವರ್ಷದ ನೀಟ್​-ಪಿಜಿ (NEET-PG) ಕೌನ್ಸಿಲಿಂಗ್​ ಜನವರಿ 12ರಿಂದ ಪ್ರಾರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವಿಟರ್ ನಲ್ಲಿ ಘೋಷಣೆ ಮಾಡಿದ್ದಾರೆ. ನೀಟ್ ಪದವಿ ಹಾಗೂ ಸ್ನಾತಕೋತ್ತರ ವಿಭಾಗದ ಕೌನ್ಸೆಲಿಂಗ್ ವಿಳಂಬದ ಕುರಿತಾಗಿ ಶುಕ್ರವಾರ ತುರ್ತು ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಮೀಸಲಾತಿ ಗೊಂದಲಗಳನ್ನು ಬದಿಗಿಟ್ಟು ಈಗಾಗಲೇ ಘೋಷಣೆಯಾಗಿರುವ ಅಧಿಸೂಚನೆಯಂತೆಯೇ ಈ ಬಾರಿಯ ಕೌನ್ಸೆಲಿಂಗ್ ನಡೆಯಲಿದೆ ಎಂದು ತಿಳಿಸಿತ್ತು.

ರೆಸಿಡೆಂಟ್ ವೈದ್ಯರಿಗೆ ಆರೋಗ್ಯ ಇಲಾಖೆ ನೀಡಿರುವ ಆಶ್ವಾಸನೆಯಂತೆ ಸುಪ್ರೀಂ ಕೋರ್ಟ್ ಆದೇಶದ ಅನ್ವಯ 2022 ಜನವರಿ 12 ರಿಂದ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ ನೀಟ್-ಪಿಜಿ ಕೌನ್ಸೆಲಿಂಗ್ ಅನ್ನು ಆರಂಭಿಸಲಿದೆ. ಇದು ಕೋವಿಡ್-19 ವಿರುದ್ಧ ಹೋರಾಟಕ್ಕೆ ನಿಂತಿರುವ ದೇಶಕ್ಕೆ ಮತ್ತಷ್ಟು ಬಲ ತುಂಬಲಿದೆ. ಎಲ್ಲಾ ಅಭ್ಯರ್ಥಿಗಳು ಶುಭಾಶಯ" ಎಂದು ಮನ್ಸುಖ್ ಮಾಂಡವಿಯಾ (Mansukh Mandaviya )ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ರೆಸಿಡೆಂಟ್ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ನಿರಾಳತೆ ನೀಡಿದ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ,  ಅಖಿಲ ಭಾರತ ಕೋಟಾ ಸೀಟುಗಳಲ್ಲಿ ಅಸ್ತಿತ್ವದಲ್ಲಿರುವ 27% OBC ಮತ್ತು 10% EWS ಮೀಸಲಾತಿಗಳ ಅಡಿಯಲ್ಲಿಯೇ ಹಾಲಿ ವರ್ಷದ ನೀಟ್-ಪಿಜಿ ಕೌನ್ಸೆಲಿಂಗ್ ನಡೆಯಲಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿತ್ತು.

ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (Justice DY Chandrachud) ಮತ್ತು ನ್ಯಾಯಮೂರ್ತಿ ಎಎಸ್ ಬೋಪಣ್ಣ(Justice AS Bopanna ) ನೇತೃತ್ವದ ವಿಶೇಷ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಇದಕ್ಕೂ ಮುನ್ನ ನೀಟ್ ಪಿಜಿಗಾಗಿ ಕೌನ್ಸೆಲಿಂಗ್ ಸುತ್ತಿನಲ್ಲಿ ವಿಳಂಬದ ವಿರುದ್ಧ  ವೈದ್ಯರ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ವಿಷಯವನ್ನು ಆಲಿಸಲು ಕೇಂದ್ರದ ತುರ್ತು ಮನವಿಯ ನಂತರ ಸುಪ್ರೀಂ ಕೋರ್ಟ್ ಮನವಿಯನ್ನು ಆಲಿಸಲು ಒಪ್ಪಿಕೊಂಡಿತ್ತು. ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (Solicitor General of India Tushar Mehta) ಅವರು ತುರ್ತಾಗಿ ಅರ್ಜಿಯನ್ನು ವಿಚಾರಣೆ ಮಾಡುವಂತೆ ಕೋರಿದ್ದ ಮನವಿಗೆ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ( Chief Justice of India N V Ramana) ಅನುಮೋದನೆ ನೀಡಿದ್ದರು.
 


ಅಖಿಲ ಭಾರತ ಕೋಟಾದಲ್ಲಿ ಇಡಬ್ಲ್ಯೂಎಸ್ ಕೋಟಾವನ್ನು ನಿರ್ಧರಿಸುವ ಮಾನದಂಡವನ್ನು ಮರುಪರಿಶೀಲಿಸುವ ಕೇಂದ್ರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ ನಂತರ ನೀಟ್ ಪಿಜಿ ಕೌನ್ಸೆಲಿಂಗ್ ವಿಳಂಬವಾಗಿತ್ತು. ಈ ಕುರಿತಂತೆ ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ​​(ಫೋರ್ಡಾ) ಬ್ಯಾನರ್ ಅಡಿಯಲ್ಲಿ ವಿವಿಧ ಆಸ್ಪತ್ರೆಗಳ  ವೈದ್ಯರು ಕೌನ್ಸೆಲಿಂಗ್ ನಲ್ಲಿ ವಿಳಂಬವನ್ನು ವಿರೋಧಿಸಿದ್ದರು.

NEET PG, UG Counselling: ಡಾಕ್ಟರ್‌ ಗಳಿಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್!
ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಫೋರ್ಡಾ) ಪ್ರತಿ ವರ್ಷ ಸರಿಸುಮಾರು 45,000 ಅಭ್ಯರ್ಥಿಗಳು NEET-PG ಮೂಲಕ ಸ್ನಾತಕೋತ್ತರ (PG) ವೈದ್ಯರಾಗಿ ಆಯ್ಕೆಯಾಗುತ್ತಾರೆ ಮತ್ತು ಕೌನ್ಸೆಲಿಂಗ್‌ನಲ್ಲಿ ವಿಳಂಬ ಮಾಡುವುದರಿಂದ 2021ರಲ್ಲಿ ಯಾವುದೇ ಕಿರಿಯ ವೈದ್ಯರನ್ನು ಸೇರಿಸಿಕೊಳ್ಳಲಾಗದ ಸ್ಥಿತಿಗೆ ತಲುಪುತ್ತೇವೆ ಎಂದು ಹೇಳಿತ್ತು.

ಕೌನ್ಸೆಲಿಂಗ್ ಗೆ ಏನೆಲ್ಲಾ ಬೇಕಾಗುತ್ತೆ: ಪ್ರಸಕ್ತ ವರ್ಷ ನೀಟ್​ ಪಿಜಿ ಕೌನ್ಸಿಲಿಂಗ್, ಆನ್​ಲೈನ್ ವಿಧಾನದಲ್ಲಿ​ ನಾಲ್ಕು ಸುತ್ತುಗಳಲ್ಲಿ ನಡೆಯಲಿದೆ ಎಂದು ಈ ಹಿಂದೆಯೇ ವೈದ್ಯಕೀಯ ಕೌನ್ಸಿಲಿಂಗ್​ ಸಮಿತಿ (MCC) ಘೋಷಣೆ ಮಾಡಿದೆ.  ಕೌನ್ಸೆಲಿಂಗ್ ಗೆ ಹಾಜರಾಗುವ ವಿದ್ಯಾರ್ಥಿಗಳು ನೀಟ್ ಸ್ಕೋರ್ ಕಾರ್ಡ್ (ಶ್ರೇಯಾಂಕವಿರಬೇಕು), 2021 ನೀಟ್ ಅಡ್ಮಿಷನ್ ಕಾರ್ಡ್, ಜನ್ಮದಿನಾಂಕದ ದಾಖಲೆ (10ನೇ ತರಗತಿ ಮಾರ್ಕ್ಸ್ ಕಾರ್ಡ್ ಅಥವಾ ಜನ್ಮದಾಖಲೆ), 12ನೇ ತರಗತಿಯ ಮಾರ್ಕ್ಸ್ ಕಾರ್ಡ್, ಫೋಟೋ ಐಡಿ ದಾಖಲೆ (ಆಧಾರ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್), ಪಾಸ್ ಪೋರ್ಟ್ ಸೈಜ್ ಫೋಟೋ (8-10), ಜಾತಿ ಪ್ರಮಾಣಪತ್ರ ಹಾಗೂ ಅಂಗವಿಕಲ ಪ್ರಮಾಣಪತ್ರ (ಮೀಸಲಾತಿಗೆ ಅನುಗುಣವಾಗಿ). 

 

Follow Us:
Download App:
  • android
  • ios