NEET MDS Registration 2022: 2022ರ MDS ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ

By Suvarna News  |  First Published Jan 7, 2022, 4:07 PM IST

•    ಡೆಂಟಲ್ ಸರ್ಜರಿ ಮಾಸ್ಟರ್ಸ್ ಅಭ್ಯರ್ಥಿಗಳಿಗೆ ನೀಟ್ ಪರೀಕ್ಷೆ ನಮೂನೆ  ಬಿಡುಗಡೆ
•    ನೀಟ್‌ಗೆ ನಮೂನೆಯನ್ನು ಭರ್ತಿ ಮಾಡಲು ಜನವರಿ 24ರವರೆಗೆ ಅವಕಾಶ
•    NEET MDS 2022 ರ ನೋಂದಣಿ ಶುಲ್ಕವನ್ನು 4,425 ರಿಂದ 4,250 ಕ್ಕೆ ಇಳಿಕೆ


ನವದೆಹಲಿ(ಜ.7): ದಂತ ವೈದ್ಯಕೀಯ ವಿಭಾಗದಲ್ಲಿ ಪದವಿ ಮುಗಿಸಿ ದಂತ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ (Masters of Dental Surgery) ಮಾಡಲು ಕಾಯುತ್ತಿರುವವರಿಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (National Eligibility and Entrance Test-NEET)ಗೆ ದಿನಾಂಕ ಘೋಷಣೆಯಾಗಿದೆ. ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ (NBEMS) ದಂತ ಶಸ್ತ್ರಚಿಕಿತ್ಸೆಯ ಸ್ನಾತಕೋತ್ತರ ಪದವಿಗಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗಾಗಿ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ.  NEET MDS 2022 ರ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಆಕಾಂಕ್ಷಿಗಳು, ಎನ್‌ಬಿಇಎಂಎಸ್ (National Board Of Examinations In Medical Sciences) ಅಧಿಕೃತ ಪೋರ್ಟಲ್ nbe.edu.in ಗೆ ಭೇಟಿ ನೀಡಬೇಕು. NEET MDS 2022 ಗೆ ಅರ್ಜಿ ಸಲ್ಲಿಸಲು ಜನವರಿ 24ರ ರಾತ್ರಿ 11:55ರವರೆಗೂ ಕಾಲಾವಕಾಶವಿದೆ. ಜನವರಿ 4 ರಿಂದ ಒಪನ್ ಅಗಿರುವ ಅರ್ಜಿ ಸಲ್ಲಿಕೆಯ ಲೈವ್ ವಿಂಡೋ, ಜನವರಿ 24 ರವರೆಗೆ ತೆರೆದಿರುತ್ತದೆ. ಇನ್ನು ಎಡಿಟ್ ವಿಂಡೋ ಜನವರಿ 28 ರಿಂದ 31, 2022 ರವರೆಗೆ ತೆರೆದಿರುತ್ತದೆ. 

NEET MDS 2022 ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು NBEMS ಬಿಡುಗಡೆ ಮಾಡಿದೆ. ಅದು ಅರ್ಹತೆ, ನೋಂದಣಿ ಪ್ರಕ್ರಿಯೆ, ಪರೀಕ್ಷೆಯ ಪಠ್ಯಕ್ರಮ, ಪರೀಕ್ಷೆಯ ಪ್ಯಾಟರ್, ಪರೀಕ್ಷೆಯ ದಿನಾಂಕ ಮತ್ತು ಕೇಂದ್ರ ಮತ್ತು ಫಲಿತಾಂಶದ ದಿನಾಂಕದಂತಹ ಪ್ರಮುಖ ಮಾಹಿತಿಯನ್ನು ಪಟ್ಟಿ ಮಾಡಲಾಗಿದೆ. ಆದ್ರೆ ಹೊಸದಾಗಿ ಬಿಡುಗಡೆಯಾದ ಮಾಹಿತಿ ಕರಪತ್ರದಲ್ಲಿ ಪಟ್ಟಿ ಮಾಡಲಾದ ಮೂರು ಪ್ರಮುಖ ಬದಲಾವಣೆಗಳಾಗಿವೆ.

Tap to resize

Latest Videos

NEET MDS 2022 ರ ನೋಂದಣಿ ಶುಲ್ಕವನ್ನು 4,425 ರಿಂದ 4,250 ಕ್ಕೆ ಇಳಿಸಲಾಗಿದೆ. ಆದರೆ, ಅಂಗವಿಕಲರು, ಎಸ್‌ಸಿ ಮತ್ತು ಎಸ್‌ಟಿ ಪರೀಕ್ಷೆ ಬರೆಯುವವರ ನೋಂದಣಿ ಶುಲ್ಕವನ್ನು 3,245 ರಿಂದ 3,250 ರೂ.ಗೆ ಹೆಚ್ಚಿಸಲಾಗಿದೆ. ಪರೀಕ್ಷಾ ಸಮಯವನ್ನು ಮಧ್ಯಾಹ್ನ 2 ರಿಂದ ಸಂಜೆ 5 ಕ್ಕೆ ಬದಲಾಯಿಸಲಾಗಿದೆ. ಈಗ ಪರೀಕ್ಷೆಯು ಈ ವರ್ಷ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿದೆ.

NEET EXAM FREE COACHING: ನೀಟ್ ಆಕಾಂಕ್ಷಿ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡುವ ಆ್ಯಪ್‌

ಸಿಕರ್ ಮತ್ತು ರಾಜ್‌ಕೋಟ್ ಅನ್ನು ಪರೀಕ್ಷಾ ಕೇಂದ್ರದ ಪಟ್ಟಿಯಿಂದ ತೆಗೆದುಹಾಕಲಾಗಿದೆ ಮತ್ತು ಅವುಗಳ ಬದಲಿಗೆ ಭಿಲಾಯ್ ಮತ್ತು ರಾಯ್‌ಪುರವನ್ನು ಈ ವರ್ಷ ಹೊಸ ಪರೀಕ್ಷಾ ನಗರಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಮಾರ್ಚ್ 6, 2022 ರಂದು NEET MDS ಪರೀಕ್ಷೆಯನ್ನು ನಡೆಸಲಾಗುವುದು. ಕಂಪ್ಯೂಟರ್ ಆಧರಿತ ಪ್ಲಾಟ್‌ಫಾರ್ಮ್‌ನಲ್ಲಿ ಸುಮಾರು 6,500 MDS ಸೀಟುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳಿಗೆ ಪರೀಕ್ಷೆ ನೀಡಲಾಗುತ್ತದೆ.  ದೇಶಾದ್ಯಂತ ವಿವಿಧ ಅಧಿಕೃತ ಪರೀಕ್ಷಾ ಕೇಂದ್ರಗಳಲ್ಲಿ MDS ನೀಟ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷೆ ಬಳಿಕ NEET MDS 2022 ರ ಫಲಿತಾಂಶವನ್ನು 1, 2022 ರೊಳಗೆ ಅಂದ್ರೆ ಎರಡು ವಾರಗಳಲ್ಲಿ ಪ್ರಕಟಿಸಲಾಗುವುದು.

ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು nbe.edu.in ಇಲ್ಲಿ ಸಲ್ಲಿಸಬಹುದು. ಫೆಬ್ರವರಿ 21, 2022 ರಂದು ಡೆಮೊ ಪರೀಕ್ಷೆ ಲಭ್ಯವಿರುತ್ತದೆ. ಎಲ್ಲಾ ನೋಂದಾಯಿತ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ಕಾರ್ಡ್‌ಗಳು ಮಾರ್ಚ್ 1, 2022 ರಿಂದ ಲಭ್ಯವಿರುತ್ತವೆ. ಸದ್ಯಕ್ಕೆ, ಪರೀಕ್ಷೆಯು ಮಾರ್ಚ್ 6, 2022 ರಂದು ನಡೆಯುತ್ತದೆ ಮತ್ತು ಅದರ ಫಲಿತಾಂಶ ಮಾರ್ಚ್ 21, 2022 ರೊಳಗೆ ಘೋಷಿಸಲಾಗುವುದು.

NEET PG Counselling: ವೈದ್ಯಕೀಯ ಕೌನ್ಸೆಲಿಂಗ್ ಪುನರಾರಂಭಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ

NEET MDS 2022 ಗೆ ಅರ್ಜಿ ಸಲ್ಲಿಸಲು ಜನವರಿ 24 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಇನ್ನು ಸಾಕಷ್ಟು ಸಮಾಯಾವಕಾಶವಿದೆ. ಜನವರಿ 24 ರವರೆಗೆ ಅಧಿಕೃತ ಪೋರ್ಟಲ್ ತೆರೆದಿರುತ್ತದೆ. ಇನ್ನು ಎಡಿಟ್ ವಿಂಡೋ ಜನವರಿ 28 ರಿಂದ 31, 2022 ರವರೆಗೆ ತೆರೆದಿರುತ್ತದೆ.  ಇನ್ನು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆಗೆ (022 – 61087595) ಕರೆ ಮಾಡಬಹುದು ಅಥವಾ NEET MDS 2022 ಗಾಗಿ ಅಧಿಕೃತ ಹೆಲ್ಪ್‌ಡೆಸ್ಕ್ ಇಮೇಲ್ ಐಡಿ (helpdesknbeexam@natboard.edu.in) ಗೆ ಇಮೇಲ್ ಕಳುಹಿಸಬಹುದು.

click me!