NEET PG Counselling: ವೈದ್ಯಕೀಯ ಕೌನ್ಸೆಲಿಂಗ್ ಪುನರಾರಂಭಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ

By Suvarna News  |  First Published Jan 7, 2022, 2:03 PM IST

2021-22 ನೇ ಸಾಲಿಗೆ NEET-PG ಪ್ರವೇಶಕ್ಕಾಗಿ ವೈದ್ಯಕೀಯ ಕೌನ್ಸೆಲಿಂಗ್ ಅನ್ನು ಪುನರಾರಂಭಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಮಾತ್ರವಲ್ಲ ಒಬಿಸಿಮತ್ತು ಇಡಬ್ಲ್ಯೂಸಿಗೆ ಕೇಂದ್ರ ಸರಕಾರ ನಿಗದಿಪಡಿಸಿರುವ ಮೀಸಲಾತಿ ಸಿಂಧುತ್ವವನ್ನು ಎತ್ತಿಹಿಡಿದಿದೆ.


ನವದೆಹಲಿ(ಜ.7): 2021-22 ನೇ ಸಾಲಿಗೆ NEET-PG ಪ್ರವೇಶಕ್ಕಾಗಿ ವೈದ್ಯಕೀಯ ಕೌನ್ಸೆಲಿಂಗ್ ಅನ್ನು ಪುನರಾರಂಭಿಸಲು ಜನವರಿ.7ರಂದು ಸುಪ್ರೀಂ ಕೋರ್ಟ್ (Supreme Court) ಅನುಮತಿ ನೀಡಿದೆ. ಮಾತ್ರವಲ್ಲ ಒಬಿಸಿ (Other Backward Class) ಮತ್ತು ಇಡಬ್ಲ್ಯೂಸಿಗೆ ಕೇಂದ್ರ ಸರಕಾರ ನಿಗದಿಪಡಿಸಿರುವ ಮೀಸಲಾತಿ ಸಿಂಧುತ್ವವನ್ನು ಎತ್ತಿಹಿಡಿದು ಮಧ್ಯಂತರ ಆದೇಶ ಹೊರಡಿಸಿದೆ. ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಎಎಸ್ ಬೋಪಣ್ಣ ಅವರಿದ್ದ ನ್ಯಾಯ ಪೀಠವು ಮಧ್ಯಂತರ ಆದೇಶಕ್ಕೆ ವಿವರವಾದ ಕಾರಣಗಳನ್ನು ನೀಡಿ 2021-22 ನೇ ಶೈಕ್ಷಣಿಕ ವರ್ಷದ ನೀಟ್-ಪಿಜಿಗೆ ಕೌನ್ಸೆಲಿಂಗ್ ಈಗಾಗಲೇ ಸೂಚಿಸಿದ ಮಾನದಂಡಗಳ ಪ್ರಕಾರ ಮುಂದುವರಿಯುತ್ತದೆ. ಮಾರ್ಚ್ 3, 2022 ರಂದು ವಿಚಾರಣೆ ನಡೆಯಲಿದ್ದು ಆ ನಂತರ EWS (Economically Weaker Section) ಕೋಟಾದ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದೆ.

NEET PG 2021 ಗಾಗಿ ವಿವರವಾದ EWS ಮಾನದಂಡಗಳ ಮೇಲೆ ವಿವರವಾದ ಮಧ್ಯಂತರ ಆದೇಶದ ಅಗತ್ಯವಿದೆ. ಆದೇಶದ ಕಾರಣಗಳನ್ನು ರೂಪಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ". ರಾಷ್ಟ್ರೀಯ ಹಿತಾಸಕ್ತಿಯಿಂದ ಕೌನ್ಸೆಲಿಂಗ್ ಅನ್ನು ಪ್ರಾರಂಭಿಸಬೇಕಾದ ಪರಿಸ್ಥಿತಿ ಇದೆ ಎಂದು ವಿಶೇಷ  ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

Tap to resize

Latest Videos

undefined

ಕೇಂದ್ರವನ್ನು ಪ್ರತಿನಿಧಿಸುವ ನ್ಯಾಯವಾದಿ ಜನರಲ್ ತುಷಾರ್ ಮೆಹ್ತಾ, ಪ್ರಸ್ತುತ ಮಾನದಂಡಗಳ ಪ್ರಕಾರ ಇಡಬ್ಲ್ಯೂಎಸ್ ಕೋಟಾಕ್ಕೆ ಅರ್ಹರಾಗಿರುವ ಎಲ್ಲಾ ಅಭ್ಯರ್ಥಿಗಳು ನೋಂದಣಿಗಾಗಿ ತಮ್ಮ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ ಮತ್ತು ಇಡಬ್ಲ್ಯೂಎಸ್ ಕೋಟಾವನ್ನು ಸರಿಹೊಂದಿಸಲು ಎಲ್ಲಾ ಸರ್ಕಾರಿ ಕಾಲೇಜುಗಳಲ್ಲಿ ಸೀಟುಗಳನ್ನು ಹೆಚ್ಚಿಸಲಾಗಿದೆ ಆದ್ದರಿಂದ, ಇದು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಅವಕಾಶಗಳಿಗೆ ಹಾನಿಯಾಗುವುದಿಲ್ಲ ಎಂದು  ನ್ಯಾಯಪೀಠದ ಮುಂದೆ ಮನವಿ ಮಾಡಿಕೊಂಡರು. 

CSIR UGC NET 2021 Correction Window: ಜನವರಿ 9 ರವರೆಗೆ ಅರ್ಜಿ ತಿದ್ದುಪಡಿಗೆ ಅವಕಾಶ

ಸೂಪರ್-ಸ್ಪೆಷಾಲಿಟಿ ಕೋರ್ಸ್‌ಗಳಿಗೆ ಯಾವುದೇ ಮೀಸಲಾತಿ ಇಲ್ಲ ಮತ್ತು ಪಿಜಿ ಕೋರ್ಸ್‌ಗಳಲ್ಲಿ ಮೀಸಲಾತಿ ಇರಬಾರದು ಎಂದು ಯಾವುದೇ ತೀರ್ಪು ಸೂಚಿಸುವುದಿಲ್ಲ ಎಂದು ಮೆಹ್ತಾ ಸ್ಪಷ್ಟಪಡಿಸಿದರು. ಇಡಬ್ಲ್ಯೂಎಸ್ ಕೋಟಾದ ಅಂಶದಲ್ಲಿ, 8 ಲಕ್ಷ ಆದಾಯ ಮಿತಿಯನ್ನು ನಿಗದಿಪಡಿಸಲು ಸರ್ಕಾರ ನಿರ್ಧರಿಸಿದಾಗ ಅಧ್ಯಯನ, ಮನಸ್ಸಿನ ಅನ್ವಯ ಮತ್ತು ವ್ಯಾಪಕ ಸಮಾಲೋಚನೆ ಇತ್ತು ಎಂದು ಅವರು ಪೀಠಕ್ಕೆ ಅರಿವು ಮಾಡಿಕೊಟ್ಟರು.

ಸುಪ್ರೀಂ ಕೋರ್ಟ್ ನ ಈ ಮಧ್ಯಂತರ ಆದೇಶದ ತೀರ್ಪನ್ನು ವೈದ್ಯರ ಸಂಘ, ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ​​(FORDA)ಸ್ವಾಗತಿಸಿದೆ. ಪ್ರತಿಭಟನಾ ನಿರತ ವೈದ್ಯರ ಬೇಡಿಕೆ ಕೂಡ ಇದೇ ಆಗಿತ್ತು.

ಕೇಂದ್ರ ಸರಕಾರ  ಎಂಡಿಎಸ್‌ ಗೆ ಸೀಟ್ ಗೆ  (Master of Dental Surgery)  ಒಬಿಸಿಗೆ ಶೇ. 27ರಷ್ಟು ಮೀಸಲಾತಿ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (EWS) ಶೇ. 10ರಷ್ಟು ಮೀಸಲಾತಿ ನೀಡುವುದಾಗಿ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.  EWS ಕೋಟಾ ಸೀಟು ಪಡೆಯಲು ಕೇಂದ್ರ ಸರ್ಕಾರದಿಂದ ಆದಾಯ ಮಿತಿ ನಿಗದಿ ಮಾಡಲಾಗಿದ್ದು, ವಾರ್ಷಿಕ 8 ಲಕ್ಷ ರೂ. ಆದಾಯ ಮಿತಿ ನಿಗದಿಯಾಗಿದೆ. ಈ 8 ಲಕ್ಷ ಆದಾಯ ಮಿತಿ ನಿಗದಿಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ಹೀಗಾಗಿ, ಆಲ್ ಇಂಡಿಯಾ ಕೋಟಾದಡಿ ಒಬಿಸಿ ಹಾಗೂ ಇಡಬ್ಲುಸಿ ಮೀಸಲಾತಿ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಸಿಂಧುತ್ವದ ಬಗ್ಗೆ ನಿರ್ಧಾರವಾಗುವವರೆಗೂ ನೀಟ್-ಪಿಜಿ ಕೌನ್ಸೆಲಿಂಗ್ ನಡೆಸದಂತೆ ಸುಪ್ರೀಂ ಕೋರ್ಟ್​ ಆದೇಶಿತ್ತು.

BCWD NEET JEE Pre Examination Coaching 2022: ಉಚಿತ ನೀಟ್‌, ಜೆಇಇ ಪರೀಕ್ಷಾ ತರಬೇತಿ

ನೀಟ್ ಪಿಜಿ ಫಲಿತಾಂಶವನ್ನು ಈ ಮೊದಲು ಸೆಪ್ಟೆಂಬರ್ 28ರಂದು ಘೋಷಿಸಲಾಯಿತು. ಅಕ್ಟೋಬರ್ 9ರಂದು ನೀಟ್ ಪರೀಕ್ಷೆಯ ಸ್ಕೋರ್ ಕಾರ್ಡ್ ಬಿಡುಗಡೆ ಮಾಡಲಾಗಿತ್ತು. ನೀಟ್ ಪರೀಕ್ಷೆಯನ್ನು ಈ ಬಾರಿ ಇಂಗ್ಲಿಷ್ ಸೇರಿದಂತೆ 10 ಇತರ ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗಿದೆ. ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮರಾಠಿ, ಒಡಿಯಾ, ತಮಿಳು, ತೆಲುಗು ಮತ್ತು ಉರ್ದು ಭಾಷೆಯಲ್ಲಿ ಪರೀಕ್ಷೆ ನಡೆಸಲಾಗಿದೆ.

click me!