NCERT 9ನೇ ತರಗತಿ ಪಠ್ಯದಲ್ಲಿ ಸೇರಿದ ಕರಾವಳಿಯ ಆ ವೀರರಾಣಿ ಯಾರು?

Kannadaprabha News   | Kannada Prabha
Published : Sep 30, 2026, 07:32 AM IST
Rani Abbakka history in NCERT syllabus

ಸಾರಾಂಶ

Rani Abbakka history in NCERT ಹೊರತಂದಿರುವ 9ನೇ ತರಗತಿಯ ನೂತನ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕಳ ವೀರಗಾಥೆಯನ್ನು ಸೇರ್ಪಡೆಗೊಳಿಸಲಾಗಿದೆ. ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದ ಅಬ್ಬಕ್ಕಳ ಸಾಹಸ ಹಾಗೂ ವಿಜಯನಗರದ ಕುಮಾರ ಕಂಪಣನ ಐತಿಹ್ಯವನ್ನು ಇದರಲ್ಲಿ ವಿವರಿಸಲಾಗಿದೆ.

ನವದೆಹಲಿ (ಸೆ.30): ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಹೊರತಂದಿರುವ 9ನೇ ತರಗತಿಯ ನೂತನ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಕರ್ನಾಟಕದ ರಾಣಿ ಅಬ್ಬಕ್ಕಳ ವೀರಗಾಥೆಯನ್ನು ಸೇರ್ಪಡೆಗೊಳಿಸಲಾಗಿದೆ.

ಪೋರ್ಚುಗೀಸ್ ನೌಕಾಪಡೆಯನ್ನೇ ಹಿಮ್ಮೆಟ್ಟಿಸಿದ್ದ ರಾಣಿ ಅಬ್ಬಕ್ಕ

ಕ್ರಿ.ಶ.1525ರಿಂದ 1570ರ ವರೆಗೆ ಇಂದಿನ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲವನ್ನು ಆಳಿದ ರಾಣಿ ಅಬ್ಬಕ್ಕ ಚೌಟ, ಪ್ರಬಲ ಪೋರ್ಚುಗೀಸ್ ನೌಕಾಪಡೆಯನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸಿದ ಐತಿಹಾಸಿಕ ಸಾಹಸವನ್ನು ಪಠ್ಯದಲ್ಲಿ ದಾಖಲಿಸಲಾಗಿದೆ. ಇದೇ ವೇಳೆ, ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ಯುವರಾಜ ಕುಮಾರ ಕಂಪಣ ತಮಿಳುನಾಡಿನ ಮದುರೈ ಸುಲ್ತಾನರ ವಿರುದ್ಧದ ಯುದ್ಧದಲ್ಲಿ ದೇವಿ ದಯಪಾಲಿಸಿದ ದಿವ್ಯ ಖಡ್ಗವನ್ನು ಬಳಸಿ ವಿಜಯ ಸಾಧಿಸಿದ್ದರು ಎಂಬ ಐತಿಹ್ಯವನ್ನು ಎನ್‌ಸಿಇಆರ್‌ಟಿ ತನ್ನ ನೂತನ 9ನೇ ತರಗತಿ ಪಠ್ಯಪುಸ್ತಕದಲ್ಲಿ ಸೇರಿಸಿದೆ.

ವಿದೇಶಿ ವಸಾಹತುಶಾಹಿ ಪಡೆಗಳ ಆಕ್ರಮಣವನ್ನು ವಿಫಲಗೊಳಿಸಿ, ತಮ್ಮ ಸಾರ್ವಭೌಮತ್ವ ಮತ್ತು ಜಲಮಾರ್ಗದ ವ್ಯಾಪಾರ ಹಕ್ಕುಗಳನ್ನು ರಕ್ಷಿಸಿಕೊಂಡ ಅಬ್ಬಕ್ಕಳ ಜಲಸಮರದ ಪ್ರತಿರೋಧವನ್ನು ಭಾರತೀಯ ಇತಿಹಾಸದ ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಲಾಗಿದೆ.

ಅಂಡರ್‌ಸ್ಟ್ಯಾಂಡಿಂಗ್ ಸೊಸೈಟಿ: ಇಂಡಿಯಾ ಆ್ಯಂಡ್ ಬಿಯಾಂಡ್ - ಪಾರ್ಟ್ 2

ಹೊಸ ಶೈಕ್ಷಣಿಕ ವರ್ಷಕ್ಕೆ ಬಿಡುಗಡೆ ಮಾಡಲಾಗಿರುವ ‘ಅಂಡರ್‌ಸ್ಟ್ಯಾಂಡಿಂಗ್ ಸೊಸೈಟಿ: ಇಂಡಿಯಾ ಆ್ಯಂಡ್ ಬಿಯಾಂಡ್ - ಪಾರ್ಟ್ 2’ ಎಂಬ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಈ ಯುದ್ಧ ಪರಂಪರೆಯನ್ನು ವಿವರಿಸಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಶ್ರೀ ತುಳಜಾ ಭವಾನಿಯಿಂದ ಖಡ್ಗವನ್ನು ಆಶೀರ್ವಾದವಾಗಿ ಪಡೆದಿದ್ದರು. ಬಸ್ತರ್‌ ಸಂಸ್ಥಾನದ ದೊರೆ ಅನ್ನಮರಾಜ ಮಾಣಿಕೇಶ್ವರಿ (ದಂತೇಶ್ವರಿ) ದೇವಿಯಿಂದ ಖಡ್ಗ ಸ್ವೀಕರಿಸಿ ಯುದ್ಧ ಎದುರಿಸಿದ್ದ ಎಂಬ ವಿವರಗಳನ್ನೂ ಏರಿಸಲಾಗಿದೆ.

PREV
Read more Articles on
click me!

Recommended Stories

ಬಾಲಿವುಡ್​ ನಟರ, ಭಾರತದ ಸಿರಿವಂತರ ಮಕ್ಕಳು ಓದುವ ಶಾಲೆಗಳು ಇವೇ ನೋಡಿ, ಫೀಸ್​ ಎಷ್ಟಿದೆ ಗೊತ್ತಾ
12 ಚಿನ್ನದ ಪದಕ ಮುಡಿಗೇರಿಸಿಕೊಂಡ ಕ್ಯಾಬ್ ಡ್ರೈವರ್ ಮಗ; ಬದುಕುವುದೇ ಇಲ್ಲವೆಂದುಕೊಂಡಿದ್ದ ಮಗನ ಸಾಧನೆ!