ಶಿಕ್ಷಣ ನೀತಿ ಬದಲಾಗದೆ ದೇಶ ಬದಲಾಗದು: ಡಾ. ಬಿಳಿಮಲೆ | ಚುನಾವಣೆ ವ್ಯವಸ್ಥೆ ಬಗ್ಗೆಯೂ ಕಳವಳ

Kannadaprabha News   | Kannada Prabha
Published : Sep 24, 2026, 07:43 AM IST
Dr Purushottama Bilimale Speaks on Education System

ಸಾರಾಂಶ

ಶಿಕ್ಷಣ ನೀತಿ ಬದಲಾಗದೆ ದೇಶದ ಸಾಮಾಜಿಕ ವ್ಯವಸ್ಥೆ ಬದಲಾಗುವುದಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದ್ದಾರೆ. ಶಾಲಾ ಶಿಕ್ಷಣ ವ್ಯವಸ್ಥೆ ಊಳಿಗಮಾನ್ಯ ಪದ್ಧತಿಯತ್ತ ಸಾಗುತ್ತಿದ್ದು, ದಾರ್ಶನಿಕರ ವಿಚಾರಗಳು ಮೂಲೆಗುಂಪಾಗುತ್ತಿವೆ ಎಂದು ಅಭಿಪ್ರಾಯ.

ಬೆಂಗಳೂರು (ಸೆ.24): ಶಿಕ್ಷಣ ನೀತಿ ಬದಲಾಗದೆ ರಾಜ್ಯ ಮತ್ತು ದೇಶದ ಸಾಮಾಜಿಕ ವ್ಯವಸ್ಥೆ ಬದಲಾಗುವುದಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ನಗರದ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ, ಸಂಸ್ಕೃತಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಭಾರತೀಯ ಶಿಕ್ಷಣ ವ್ಯವಸ್ಥೆ ಊಳಿಗಮಾನ್ಯ ಪದ್ಧತಿಯತ್ತ

ಭಾರತೀಯ ಸಮಾಜ ಇಂದು ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಊಳಿಗಮಾನ್ಯ ಪದ್ಧತಿಯ ಕಡೆಗೆ ಕೊಂಡೊಯ್ಯುತ್ತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಶಿಕ್ಷಣ, ಉದ್ಯೋಗ ಕ್ರಾಂತಿ ನಡೆಯುತ್ತಿದ್ದರೂ ಭಾರತ ಈ ವಿಷಯದಲ್ಲಿ ಕೈಕಟ್ಟಿ ಕುಳಿತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಚುನಾವಣೆ ಶ್ರೀಮಂತರ, ಬಂಡವಾಳಶಾಹಿಗಳ ಆಡೊಂಬೊಲವಾಗಿದೆ

ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಲೋಹಿಯಾ ನಾಡಿನಲ್ಲಿ ಮೌಢ್ಯದ ಜಾಡು ಬಿತ್ತರವಾಗುತ್ತಿದೆ. ಗಾಂಧಿ, ಅಂಬೇಡ್ಕರ್ ಎಂಬ ದಾರ್ಶನಿಕರು ಬೇಡವಾಗುತ್ತಿದ್ದಾರೆ. ಚುನಾವಣೆ ಎನ್ನುವುದು ಇವತ್ತು ಶ್ರೀಸಾಮಾನ್ಯರ ಕೈಗೆಟುಕದೆ ಶ್ರೀಮಂತರ, ಬಂಡವಾಳಶಾಹಿಗಳ ಆಡೊಂಬೊಲವಾಗಿದೆ ಎಂದರು. ಇದೇ ವೇಳೆ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಡಾ.ರಾಮಲಿಂಗೇಶ್ವರ್(ಸಿಸಿರಾ), ಬಿ.ಶೃಂಗೇಶ್ವರ್, ಶಾಂತಿ ವಾಸು ಸಂಪಾದಿಸಿರುವ ನೂರಾರು ಲೇಖಕರು ಬರೆದಿರುವ ರೇವಣ್ಣ ಅವರ ‘ಆನು ಒಲಿದಂತೆ ಹಾಡುವೆ’ ಅಭಿನಂದನೆ ಗ್ರಂಥ ಲೋಕಾರ್ಪಣೆ ಮಾಡಿದರು.

ಗಾಂಧಿ ಭವನದ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ. ಕೃಷ್ಣ ಅವರು ಕುವೆಂಪು ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಬೇಲಿಮಠದ ಶಿವರುದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸುಮಂಗಲಿ ಸೇವಾಶ್ರಮದ ಪದ್ಮಶ್ರೀ ಡಾ.ಎಸ್.ಜಿ.ಸುಶೀಲಮ್ಮ ಸಮಾರಂಭದ ಸರ್ವಾಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಸಿಸಿರಾ, ಕಾರ್ಯದರ್ಶಿ ಸಿ.ಹೇಮಾವತಿ, ಸಂಚಾಲಕರಾದ ಡಾ.ಕೃಷ್ಣ ಹಾನ್ ಬಾಳ್, ಅರಬಗಟ್ಟ ನಾಗರಾಜ್, ಎಲ್.ಬಸವಲಿಂಗ ಇದ್ದರು.

PREV
Read more Articles on
click me!

Recommended Stories

ChatGPT ಬಳಸಿ ಪರೀಕ್ಷೆಯಲ್ಲಿ ಕಾಪಿ? ಸಿಕ್ಕಿಬಿದ್ದ ವಿದ್ಯಾರ್ಥಿ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್​: ಜಾತಿ ನಿಂದನೆ ಕೇಸ್​
Most Educated Cricketer: ಧೋನಿ, ಕೊಹ್ಲಿ ಅಲ್ಲ, ಟೀಂ ಇಂಡಿಯಾದ ಅತಿ ಹೆಚ್ಚು ಓದಿದ ಆಟಗಾರ ಆರ್‌ಸಿಬಿಯ ಈ ಸ್ಟಾರ್ ಕ್ರಿಕೆಟಿಗ!