ಪರೀಕ್ಷೆಗೆ 700 ಕಿ. ಮೀ. ಪ್ರಯಾಣಿಸಿ ಬಂದ್ರೂ 10 ನಿಮಿಷ ಲೇಟ್, ವಿದ್ಯಾರ್ಥಿಯ 1 ವರ್ಷ ವೇಸ್ಟ್..

By Suvarna NewsFirst Published Sep 14, 2020, 8:43 PM IST
Highlights

ಸಮಯ ನಿರ್ವಹಣೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬಹಳ ಮುಖ್ಯ. ಆದ್ರೆ, ಟೈಮ್ ಮ್ಯಾನೇಜ್ಮೆಂಟ್ ಇಲ್ಲ ಅಂದ್ರೆ ಏನೆಲ್ಲಾ ಆಗುತ್ತೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ ಓದಿ....

ಪಾಟ್ನಾ, (ಸೆ.14): ಜೀವನದಲ್ಲಿ ಶಿಸ್ತು ಮತ್ತು ಸಮಯಕ್ಕೆ ತನ್ನದೆ ಆದಂತಹ ಪ್ರಾಮುಖ್ಯತೆ ಇದೆ. ಟೈಮ್ ಮ್ಯಾನೇಜ್ಮೆಂಟ್ ಇಲ್ಲ ಅಂದ್ರೆ ಏನು ಮಾಡಲು ಸಾಧ್ಯವಿಲ್ಲ. 

ಹೌದು... ಈ ಟೈಮ್ ಸೆನ್ಸ್ ಎಷ್ಟು ಇಂಪಾರ್ಟೆಂಟ್ ಅಂದ್ರೆ, ವಿದ್ಯಾರ್ಥಿಯೊಬ್ಬ ಪರೀಕ್ಷೆಗೆ ಕೇವಲ 10 ನಿಮಿಷ ತಡವಾಗಿ ಹೋಗಿದ್ದಕ್ಕೆ ತನ್ನ ಶೈಕ್ಷಣಿಕದ ಒಂದು ವರ್ಷವನ್ನು ಕಳೆದುಕೊಳ್ಳಬೇಕಾಗಿದೆ.

Sex Education: ಬೇಕಾ? ಯಾರಿಗೆ? ಯಾವಾಗ?

ಭಾನುವಾರ ನಡೆದ ನೀಟ್ ಪರೀಕ್ಷೆಗಾಗಿ  ಬಿಹಾರದ ದರ್ಭಾಂಗ ಜಿಲ್ಲೆಯ ವಿದ್ಯಾರ್ಥಿ ಸಂತೋಷ್ ಕುಮಾರ್ ಯಾದವ್ ಬರೋಬ್ಬರಿ 700 ಕಿ,ಮೀ ದೂರದಿಂದ ಪ್ರಯಾಣ ಮಾಡಿ ಪರೀಕ್ಷೆ ಕೇಂದ್ರಕ್ಕೆ ಆಗಮಿಸಿದ್ದಾನೆ. ಆದ್ರೆ, ಕೇವಲ 10 ನಿಮಿಷ ತಡವಾಗಿದ್ದಕ್ಕೆ ಪರೀಕ್ಷೆಯನ್ನು ಮಿಸ್ ಮಾಡಿಕೊಂಡಿದ್ದಾನೆ.

 ತಮ್ಮ ಊರಿನಿಂದ ಸುಮಾರು 700 ಕಿ.ಮೀ. ದೂರದ ಕೊಲ್ಕತ್ತಾದ ನೀಟ್ ಪರೀಕ್ಷೆ ಕೇಂದ್ರಕ್ಕೆ ಹಾಜರಾಗಲು 24 ಗಂಟೆಗೂ ಹೆಚ್ಚು ಸಮಯ ಪ್ರಯಾಣಿಸಿದ್ದಾನೆ. ಮಾರ್ಗ ಮಧ್ಯೆ 2 ಬಸ್‌ಗಳನ್ನ ಬದಲಾಯಿಸಿ ಕೊನೆಗೆ ತನ್ನ ಪರೀಕ್ಷಾ ಕೇಂದ್ರವನ್ನು ತಲುಪಿದ್ದಾನೆ. ಆದ್ರೆ, ಅದಾಗಲೇ 10 ನಿಮಿಷ ಲೇಟ್ ಆಗಿದ್ದರಿಂದ  ಸಂತೋಷ್ ಕುಮಾರ್‌ಗೆ  ನಿಯಮದಂತೆ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿಲ್ಲ.

IAS ಸಂದರ್ಶನದಲ್ಲಿ ಕೇಳುವ 'ರಕ್ತ ಕುದಿಯುವಂತ' ಪ್ರಶ್ನೆಗಳು, ಆದ್ರೆ #BeCool...

ಸಂತೋಷ್ ಕುಮಾರ್ ಯಾದವ್ ಪರಿಪರಿಯಾಗಿ ಬೇಡಿಕೊಂಡರು ಪರೀಕ್ಷೆ ಬರೆಯಲು ಅವಕಾಶ ಸಿಗಲೇ ಇಲ್ಲ. ಇದರಿಂದ ಸಂತೋಷ್ ಕುಮಾರ್ ತನ್ನ ಶೈಕ್ಷಣಿಕದ ಒಂದು ವರ್ಷವನ್ನು ಕಳೆದುಕೊಳ್ಳಬೇಕಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂತೋಷ್, ಪರೀಕ್ಷೆ 2 ಗಂಟೆಗೆ ಆರಂಭವಾಗುತ್ತಿದ್ದರೂ ಅಭ್ಯರ್ಥಿಗಳು 1.30ಕ್ಕೆ ಹಾಜರಿರಬೇಕಿತ್ತು. ಆದ್ರೆ, ನಾನು ಹೋಗುವಷ್ಟರಲ್ಲಿ 1.40 ಆಗಿತ್ತು. ಕೇವಲ 10 ನಿಮಿಷ ತಡವಾಗಿತ್ತು. ಎಷ್ಟು ಬೇಡಿಕೊಂಡರೂ ಪರೀಕ್ಷೆ ಬರೆಯಲು ಅನುಮತಿ ಕೊಡಲಿಲ್ಲ ಎಂದು ತನ್ನ ನೋವನ್ನು ಹೇಳಿಕೊಂಡಿದ್ದಾನೆ.

click me!