ಆರ್ಥಿಕ ಕೊರತೆ, ಮೈಸೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಣೆ ಅಸಾಧ್ಯ: ಸರ್ಕಾರ

By Gowthami K  |  First Published Dec 27, 2022, 9:45 PM IST

 ಮೈಸೂರು ವಿಶ್ವವಿದ್ಯಾಲಯದ  ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಹೀಗಾಗಿ ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಣೆ ಅಸಾಧ್ಯ ಎಂದು   ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ಹೇಳಿದ್ದು,  ಸಚಿವರ ಹೇಳಿಕೆಗೆ ಮರಿತಿಬ್ಬೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ವಿಧಾನಪರಿಷತ್‌ (ಡಿ.27): ಮೈಸೂರು ವಿಶ್ವವಿದ್ಯಾಲಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲದ ಹಿನ್ನೆಲೆಯಲ್ಲಿ ವಿವಿಯಲ್ಲಿ ಕೆಲಸ ಮಾಡುತ್ತಿರುವ 900 ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಣೆ ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ಸ್ಪಷ್ಟಪಡಿಸಿದ್ದಾರೆ. ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸದ್ಯ ಮೈಸೂರು ವಿಶ್ವವಿದ್ಯಾಲಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಹೀಗಾಗಿ ವಿವಿಯ ಆರ್ಥಿಕ ಸಮಿತಿಯಲ್ಲಿರುವ ಆರ್ಥಿಕ ಇಲಾಖೆಯ ಅಧಿಕಾರಿಗಳು ವೇತನ ಹೆಚ್ಚಳ ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಸದ್ಯಕ್ಕೆ ವೇತನ ಪರಿಷ್ಕರಣೆ ಅಸಾಧ್ಯ ಎಂದು ಹೇಳಿದರು.

ಈ ಮಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮರಿತಿಬ್ಬೇಗೌಡ ಅವರು, ವೇತನ ನೀಡುವುದು ವಿಶ್ವವಿದ್ಯಾಲಯ, ವೇತನ ಹೆಚ್ಚಳ ಮಾಡಬಾರದೆಂದು ಹೇಳಲು ಆರ್ಥಿಕ ಇಲಾಖೆಗೆ ಏನು ಅಧಿಕಾರವಿದೆ? ಬೇರೆ ಬೇರೆ ವಿವಿಗಳಲ್ಲಿ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮಾಡಲಾಗಿದೆ. ಅದರೆ ಮೈಸೂರು ವಿವಿಯಲ್ಲಿ ಮಾತ್ರ ತಾರತಮ್ಯ ಮಾಡಲಾಗಿದೆ. ಶಿಕ್ಷಣ ವ್ಯವಸ್ಥೆಯನ್ನೇ ಸಚಿವರು ಹಾಳು ಮಾಡಿದ್ದಾರೆ ಎನ್ನುತ್ತಾ ಸಭಾಪತಿಗಳ ಪೀಠದ ಮುಂದೆ ಬಂದು ಧರಣಿ ಆರಂಭಿಸಿದರು.

Tap to resize

Latest Videos

CBSE BOARD EXAM 2023: CBSE ಪ್ರಾಯೋಗಿಕ ಪರೀಕ್ಷೆಯ ದಿನಾಂಕ ಬಿಡುಗಡೆ

ಮರಿತಿಬ್ಬೇಗೌಡ ಅವರ ಮಾತಿಗೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಗೃಹ ಸಚಿವ ಆರಗ ಜ್ಞಾನೇಂದ್ರ, ವೈ.ಎ. ನಾರಾಯಣಸ್ವಾಮಿ, ಎನ್‌. ರವಿಕುಮಾರ್‌ ಮುಂತಾದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

Teachers Transfer: ಡಿ.28 ರಿಂದ ಫೆ.28ರವರೆಗೆ ಶಿಕ್ಷಕರ ವರ್ಗಾವರ್ಗಿ

ಈ ಮಧ್ಯೆ ಕಾಂಗ್ರೆಸ್‌ ಸದಸ್ಯರು ಮರಿತಿಬ್ಬೇಗೌಡ ಅವರಿಗೆ ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಭಾಗಿಯಾದರು. ಸಭಾಪತಿ ಹೊರಟ್ಟಿಅವರು ಸರ್ಕಾರದಿಂದ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಉತ್ತರ ಕೊಡುವಂತೆ ನನಗೆ ಸೂಚಿಸಲು ಬರುವುದಿಲ್ಲ. ಈ ರೀತಿ ಧರಣಿ ಮಾಡುವುದು ಸರಿಯಲ್ಲ ಎಂದರು. ಇದಕ್ಕೆ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು ಗಂಭೀರವಾದ ವಿಷಯವನ್ನು ಮರಿತಿಬ್ಬೇಗೌಡ ಅವರು ಹೇಳಿದ್ದಾರೆ ಹಾಗಾಗಿ ಅವರಿಗೆ ಸರಿಯಾದ ಉತ್ತರ ಕೊಡಬೇಕು ಎಂದು ಉತ್ತರಿಸಿದರು.

click me!