ಕಾರಿನ ಹೆಡ್‌ಲೈಟ್‌ ಅಡಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು... ಬಿಹಾರದಲ್ಲಿ ಆಗಿದ್ದೇನು...?

By Contributor Asianet  |  First Published Feb 3, 2022, 3:59 PM IST
  • ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡದ ಕಾಲೇಜು
  • ಮಧ್ಯಾಹ್ನ 1.45ಕ್ಕೆ ಆರಂಭವಾಗಬೇಕಾಗಿದ್ದ ಪರೀಕ್ಷೆ ಸಂಜೆ 4 ಗಂಟೆಗೆ ಆರಂಭ
  • ವಿದ್ಯುತ್‌ ವ್ಯವಸ್ಥೆಯೂ ಇಲ್ಲದೇ ಕಾರು ಹೆಡ್‌ಲೈಟ್‌ ಅಡಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

ಪಾಟ್ನಾ(ಜ.3): ದ್ವಿತೀಯ ಪಿಯು ಬೋರ್ಡ್‌ನ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರಿನ ಹೆಡ್‌ಲೈಟ್‌ ಬೆಳಕಿನಲ್ಲಿ ಪರೀಕ್ಷೆ ಬರೆದ ಘಟನೆ ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ನಡೆದಿದ್ದು, ಅಷ್ಟಕ್ಕೂ ಅಲ್ಲಿ ನಡೆದಿದ್ದೇನು...? ಡಿಟೇಲ್ಡ್‌ ಸ್ಟೋರಿ ಇಲ್ಲಿದೆ. 

ಬಿಹಾರದ (Bihar) ಮೋತಿಹಾರಿ ಜಿಲ್ಲೆಯಲ್ಲಿ ಮಂಗಳವಾರ ದ್ವಿತೀಯ ಪಿಯುಸಿಯ ಬೋರ್ಡ್‌ ಸಪ್ಲಿಮೆಂಟರಿ ಪರೀಕ್ಷೆ ಇತ್ತು. ಹಿಂದಿ ವಿಷಯದ ಪರೀಕ್ಷೆ ಇದ್ದು,  ಮಧ್ಯಾಹ್ನ 1.45 ರಿಂದ 5 ಗಂಟೆಯವರೆಗೆ ಪರೀಕ್ಷಾ ಅವಧಿ ಇತ್ತು. ಆದರೆ ಮಹಾರಾಜ ಹರೇಂದ್ರ ಕಿಶೋರ್ ಸಿಂಗ್ (Maharaja Harendra Kishore Singh) ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳುವುದಕ್ಕೆ ಅಲ್ಲಿ ಮುಂದಾಗಿ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. 

Tap to resize

Latest Videos

ಹೀಗಾಗಿ ಮಧ್ಯಾಹ್ನ 1.45 ರಿಂದ ಆರಂಭವಾಗಬೇಕಾದ ಪರೀಕ್ಷೆ ಸಂಜೆ 4 ಗಂಟೆಗೆ  ಆರಂಭವಾಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಸಿಟ್ಟಿಗೆದ್ದಿದ್ದಾರೆ. ಪರೀಕ್ಷೆಗೆ ಸರಿಯಾದ ವ್ಯವಸ್ಥೆ ಮಾಡದ ಶಾಲೆ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಲು ಶುರು ಮಾಡಿದ್ದಾರೆ. ನಂತರ ಮೋತಿಹಾರಿ (Motihari) (ನಗರ) ಎಸ್‌ಡಿಒ ಸೌರಭ್ ಸುಮನ್ ಯಾದವ್ (Saurabh Suman Yadav) ಮತ್ತು ಡಿಎಸ್‌ಪಿ ಅರುಣ್ ಕುಮಾರ್ ಯಾದವ್ (Arun Kumar Yadav) ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

Exams under car headlights pic.twitter.com/aBW2YelzD9

— Vijay Swaroop (@swaroop_vijay)

 

ಅಂತಿಮವಾಗಿ ಸಂಜೆ 4 ಗಂಟೆಗೆ ಆರಂಭವಾದ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಮನವೊಲಿಸಲಾಯಿತು. ಹೀಗಾಗಿ ಪರೀಕ್ಷೆ ಸಂಜೆ 4 ಗಂಟೆಗೆ ಆರಂಭವಾಗಿ 7 ಗಂಟೆಯವರೆಗೆ ಮುಂದುವರೆಯಿತು. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯುವಷ್ಟರಲ್ಲಿ ಕತ್ತಲಾಗಿತ್ತು. ಕಾಲೇಜಿನಲ್ಲಿ ವಿದ್ಯುತ್‌ ಪೂರೈಕೆ ಇಲ್ಲದ ಕಾರಣ ಆಡಳಿತ ಮಂಡಳಿ ಜನರೇಟರ್‌ ವ್ಯವಸ್ಥೆ ಮಾಡಿದರೂ ಎಲ್ಲ ಕಡೆ ವಿದ್ಯುತ್‌ ಪೂರೈಕೆಯಾಗುತ್ತಿರಲಿಲ್ಲ. ಅಂತಿಮವಾಗಿ, ನಾಲ್ಕು ಚಕ್ರದ ವಾಹನಗಳಲ್ಲಿ ಬಂದ ಪೋಷಕರು ಪರೀಕ್ಷೆಯನ್ನು ಪೂರ್ಣಗೊಳಿಸಲು ತಮ್ಮ ವಾಹನಗಳ ಹೆಡ್‌ಲೈಟ್‌ಗಳನ್ನು ಆನ್ ಮಾಡಿದರು.

GATE Examination 2022: GATE ಪರೀಕ್ಷೆ ಮುಂದೂಡಲು ನಿರಾಕರಿಸಿದ ಸುಪ್ರೀಂ

ಅಂತಿಮವಾಗಿ ಸಂಜೆ 4 ಗಂಟೆಗೆ ಆರಂಭವಾದ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಮನವೊಲಿಸಿದೆವು. ಮತ್ತು 7 ಗಂಟೆಯವರೆಗೆ ಪರೀಕ್ಷೆ ಮುಂದುವರೆಯಿತು ಎಂದು ಮೋತಿಹಾರಿ (ನಗರ) ಎಸ್‌ಡಿಒ ಸೌರಭ್ ಸುಮನ್ ಯಾದವ್ ಹೇಳಿದರು. 

Gangavati: ನೀಟ್‌ ಪರೀಕ್ಷೆಯಲ್ಲಿ ತೇರ್ಗಡೆಯಾದ್ರೂ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಆರ್ಥಿಕ ಬಿಕ್ಕಟ್ಟು

ಈ ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ಅಧೀಕ್ಷಕ ನವೀನ್‌ಕುಮಾರ್‌ ಝಾ (Naveen Kumar Jha) ಅವರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದ್ದು, ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಏತನ್ಮಧ್ಯೆ, ಬಿಹಾರ ಶಿಕ್ಷಣ ಸಚಿವ ವಿಜಯ್ ಕುಮಾರ್ ಚೌಧರಿ ( Vijay Kumar Choudhary) ಅವರು ಘಟನೆಯ ಬಗ್ಗೆ ವರದಿ ಕೇಳಿದ್ದಾರೆ.

click me!