ಪಿಯು-2 ಪರೀಕ್ಷೆ ಪೂರ್ಣಕ್ಕೆ ಮೊದಲೇ ಮಾದರಿ ಉತ್ತರ ಪ್ರಕಟ..!

By Kannadaprabha News  |  First Published Mar 21, 2024, 9:44 AM IST

ಮಂಡಳಿಯ ಈ ಕ್ರಮಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರ ವಲಯದಲ್ಲಿ ಆಕ್ಷೇಪಣೆಗಳು ವ್ಯಕ್ತವಾಗುತ್ತಿವೆ. ದ್ವಿತೀಯ ಪಿಯುಸಿ ಪರೀಕ್ಷೆಗಳು ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಳ್ಳುವುದು ಮಾ.22ಕ್ಕೆ. ಸಮಾಜ ಶಾಸ್ತ್ರ, ಹಿಂದಿ ಸೇರಿದಂತೆ ವಿವಿಧ ಭಾಷಾ ವಿಷಯಗಳ ಪರೀಕ್ಷೆಗಳು ಇನ್ನೂ ಬಾಕಿ ಇವೆ. ಹೀಗಿರುವಾಗ ಮಂಡಳಿಯು ಮುಕ್ತಾಯವಾಗಿರುವ ಪರೀಕ್ಷೆಗಳಿಗೆ ಮಾದರಿ ಉತ್ತರ ಪ್ರಕಟಿಸಿದೆ.


ಬೆಂಗಳೂರು(ಮಾ.21): ಪ್ರಸ್ತುತ ನಡೆಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳು ವಿಷಯವಾರು ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಳ್ಳುವ ಮೊದಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಇದುವರೆಗೆ ನಡೆದಿರುವ 21 ವಿಷಯಗಳ ಪರೀಕ್ಷೆಗಳಿಗೆ ಮಾದರಿ ಉತ್ತರಗಳನ್ನು ಪ್ರಕಟಿಸಿದೆ.

ಮಂಡಳಿಯ ಈ ಕ್ರಮಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರ ವಲಯದಲ್ಲಿ ಆಕ್ಷೇಪಣೆಗಳು ವ್ಯಕ್ತವಾಗುತ್ತಿವೆ. ದ್ವಿತೀಯ ಪಿಯುಸಿ ಪರೀಕ್ಷೆಗಳು ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಳ್ಳುವುದು ಮಾ.22ಕ್ಕೆ. ಸಮಾಜ ಶಾಸ್ತ್ರ, ಹಿಂದಿ ಸೇರಿದಂತೆ ವಿವಿಧ ಭಾಷಾ ವಿಷಯಗಳ ಪರೀಕ್ಷೆಗಳು ಇನ್ನೂ ಬಾಕಿ ಇವೆ. ಹೀಗಿರುವಾಗ ಮಂಡಳಿಯು ಮುಕ್ತಾಯವಾಗಿರುವ ಪರೀಕ್ಷೆಗಳಿಗೆ ತನ್ನ ವೆಬ್‌ಸೈಟ್‌ https://kseab.karnataka.gov.in/ ನಲ್ಲಿ ಮಾದರಿ ಉತ್ತರ ಪ್ರಕಟಿಸಿ ಆಕ್ಷೇಪಣೆಗೆ ಮಾ.21 ಕೊನೆಯ ದಿನ ಎಂದು ಹೇಳಿದೆ. ವಿದ್ಯಾರ್ಥಿಗಳು ಬಾಕಿ ವಿಷಯಗಳಿಗೆ ತಯಾರಿ ಮಾಡಿಕೊಳ್ಳಬೇಕೋ ಇಲ್ಲ ಮಾದರಿ ಉತ್ತರಗಳನ್ನು ನೋಡಿಕೊಂಡು ಆಕ್ಷೇಪಣೆಗಳನ್ನು ಸಿದ್ಧಪಡಿಸಬೇಕೇ? ಅಧಿಕಾರಿಗಳಿಗೆ ಇಷ್ಟು ಆತುರವೇನಿತ್ತು? ಬೇಗ ಪರೀಕ್ಷೆ ಮುಗಿಸಿ ಫಲಿತಾಂಶ ನೀಡುವ ಸಂಬಂಧ ತಮ್ಮ ಮೇಲಿರುವ ಒತ್ತಡಕ್ಕೆ ವಿದ್ಯಾರ್ಥಿಗಳನ್ನು ಸಿಲುಕಿಸಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

Tap to resize

Latest Videos

undefined

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಬಗ್ಗೆ ಬಿಗ್‌ ಅಪ್ಡೇಟ್ ಕೊಟ್ಟ ಸಚಿವ ಮಧುಬಂಗಾರಪ್ಪ

ಇನ್ನು, ಬಾಕಿ ವಿಷಯಗಳಿಗೆ ಮಾ.20ರಿಂದ 22ರವರೆಗೆ ಪರೀಕ್ಷೆಗಳು ನಡೆಯಲಿದ್ದು ಅವುಗಳ ಪರೀಕ್ಷೆ ಮುಕ್ತಾಯದ ನಂತರ ಉಳಿದ ವಿಷಯಗಳಿಗೂ ಮಾದರಿ ಉತ್ತರಗಳನ್ನು ಪ್ರಕಟಿಸಲಾಗುವುದು ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

click me!