ಬೆಂಗಳೂರಲ್ಲೇ ಸಿಇಟಿ ಪರೀಕ್ಷೆ ಬರೆಯಬೇಕೆಂಬ ನಿಯಮಕ್ಕೆ ಕಿಡಿ

By Kannadaprabha NewsFirst Published Mar 20, 2024, 8:27 AM IST
Highlights

ಸಿಇಟಿ ಅಭ್ಯರ್ಥಿಗಳು ಬೆಂಗಳೂರಿಗೆ ಬಂದು ಪರೀಕ್ಷೆ ಬರೆಯುವುದರಿಂದ ಸಮಯ, ಹಣ ಪೋಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಲಕ್ಷಾಂತರ ಜನ ಏಕಕಾಲಕ್ಕೆ ಬೆಂಗಳೂರಿಗೆ ಬರುವುದಕ್ಕೆ ಸಮಸ್ಯೆಗಳಾಗುತ್ತಿದ್ದ ಎಂಬ ಕಾರಣಕ್ಕೆ ಸರ್ಕಾರ ಅನೇಕ ವರ್ಷಗಳಿಂದ ಜಿಲ್ಲಾ ಹಂತದಲ್ಲೇ ಸಿಇಟಿ ಪರೀಕ್ಷೆ ನಡೆಸಿಕೊಂಡು ಬರುತ್ತಿದೆ. ಇದರಿಂದ ಅಭ್ಯರ್ಥಿಗಳು ತಮ್ಮ ಜಿಲ್ಲೆಯಲ್ಲೇ ಪರೀಕ್ಷೆ ಬರೆಯಲು ಅನುಕೂಲವಾಗಿದೆ.

ಬೆಂಗಳೂರು(ಮಾ.20):  ಸಿಇಟಿ ನೋಂದಣಿಗೆ ಮಾ.18ರಿಂದ 20ರವ ರೆಗೆ ನೀಡಿರುವ ವಿಶೇಷ ಕಾಲಾವಕಾಶದವೇಳೆ ಅರ್ಜಿ ಸಲ್ಲಿಸಿದವರು ಪರೀಕ್ಷೆ ಬರೆಯಲು ಬೆಂಗಳೂರಿಗೇ ಬರಬೇಕೆಂಬ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಬಂಧನೆಗೆ ಅಭ್ಯರ್ಥಿಗಳಿಂದ ಆಕ್ಷೇಪ, ಆಕ್ರೋಶ ವ್ಯಕ್ತವಾಗುತ್ತಿದೆ. 

ಪ್ರಾಧಿಕಾರದ ಅಧಿಕಾರಿಗಳು ಏಕಾಏಕಿ ಕೈಗೊಂಡಿರುವ ಈ ನಿರ್ಧಾರದಿಂದ ಸಾವಿರಾರು ಮಂದಿ ಅಭ್ಯರ್ಥಿಗಳಿಗೆ ಅನಾನುಕೂಲವಾಗಲಿದೆ. ಬೆಂಗಳೂರಿನ ಸುತ್ತಮುತ್ತಲ ಅಭ್ಯರ್ಥಿಗಳಾದರೆ ಹೇಗೋ ಪರೀಕ್ಷೆಗೆ ಬರಬಹುದು. ದೂರದ ಬೆಳಗಾವಿ, ಬಾಗಲಕೋಟೆ, ಬೀದ‌ರ್ ಸೇರಿದಂತೆ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಒಂದೆರಡು ದಿನ ಮೊದಲೇ ಬೆಂಗಳೂರಿಗೆ ಬರಬೇಕಾಗುತ್ತದೆ. ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪ್ರಾಧಿಕಾರ ತನ್ನ ನಿರ್ಧಾರ ಹಿಂಪಡೆದು ಕೊನೆಯ ಹಂತದಲ್ಲಿ ನೋಂದಣಿ ಮಾಡಿದವ ರಿಗೂ ಆಯಾ ಜಿಲ್ಲೆಗಳಲ್ಲೇ ಪರೀಕ್ಷೆಗೆ ಅವಕಾಶ ನೀಡಬೇಕೆಂಬುದು ಕೊನೆಯಲ್ಲಿ ನೋಂದಾಯಿಸುತ್ತಿರುವ ಅಭ್ಯರ್ಥಿಗಳ ಆಗ್ರಹವಾಗಿದೆ. 

ಸಿಇಟಿಗೆ ಈ ಬಾರಿ ದಾಖಲೆಯ 3.75 ಲಕ್ಷ ಮಂದಿ ನೋಂದಣಿ

click me!