ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯದಂತೆ ಒಂದನೇ ತರಗತಿಗೆ ಸೇರಿಸಲು ಮಗುವಿಗೆ ಕಡ್ಡಾಯವಾಗಿ 6 ವರ್ಷ ವಯೋಮಿತಿ ನಿಗದಿ ಪಡಿಸಿ ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಈ ಆದೇಶ 2025-26 ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರಲಿದೆ.
ಬೆಂಗಳೂರು ( ನ.15): ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯದಂತೆ ಒಂದನೇ ತರಗತಿಗೆ ಸೇರಿಸಲು ಮಗುವಿಗೆ ಕಡ್ಡಾಯವಾಗಿ 6 ವರ್ಷ ವಯೋಮಿತಿ ನಿಗದಿ ಪಡಿಸಿ ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಈ ಆದೇಶ 2025-26 ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರಲಿದ್ದು, ಜೂನ್ 1 ಕ್ಕೆ ಕಡ್ಡಾಯವಾಗಿ ಮಗುವಿಗೆ 6 ವರ್ಷ ತುಂಬಿರಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಸಂಬಂಧ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿ ರಾಜ್ಯದ ಎಲ್ಲಾ ಡಿಡಿಪಿಐ,ಬಿಇಒ ಹಾಗೂ ಆಯುಕ್ತರಿಗೆ ಮಾಹಿತಿ ನೀಡಲಾಗಿದೆ. ಈ ಹಿಂದೆ ಮಕ್ಕಳನ್ನು 1ನೇ ತರಗತಿಗೆ ಸೇರಿಸಲು 5 ವರ್ಷ, 5 ತಿಂಗಳು ಹಾಗೂ 5 ವರ್ಷ 10 ತಿಂಗಳು ಆಗಿರಬೇಕು ಎಂಬ ನಿಯಮವಿತ್ತು. ಇದೀಗ ಆರ್‌ಟಿಇ ಶಿಕ್ಷಣ ಕಾಯ್ದೆ, ಕಡ್ಡಾಯ ಶಿಕ್ಷಣ ನಿಯಮ 2012 ಅನ್ವಯ ಹೊಸ ವಯೋಮಿತಿಯನ್ನು ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
6 ರಿಂದ 8ನೇ ತರಗತಿ ಮಕ್ಕಳಿಗೆ ಇನ್ಮುಂದೆ ಪ್ರಾಥಮಿಕ ಶಿಕ್ಷಕರಿಂದ ಭೋದನೆ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ಹಾಲಿ ಪ್ರಾಥಮಿಕ ಶಾಲಾ ಶಿಕ್ಷಕರನ್ನೇ 6 ರಿಂದ 8 ನೇ ತರಗತಿಯ ಪದವೀಧರ ಶಿಕ್ಷಕರ ನೇಮಕಾತಿಗೆ ಮುಂಬಡ್ತಿ ನೀಡಲು ರಾಜ್ಯ ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೇ.40 ರಷ್ಟು ಪ್ರಾಥಮಿಕ ಶಿಕ್ಷಕರು ಮುಂಬಡ್ತಿ ಪಡೆದು 6 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ.
6 ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಿಕ್ಷಕರ ವೃಂದದ ನೇಮಕಾತಿಯ ನಿಯಮದಲ್ಲಿ ಕೂಡ ಬದಲಾವಣೆ ಮಾಡಲು ಕೂಡ ಆರ್ಥಿಕ ಇಲಾಖೆ ಒಪ್ಪಿಕೊಂಡಿದೆ. ಹೀಗಾಗಿ 6 ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಿಕ್ಷಕರ ವೃಂದದ ನೇಮಕಾತಿ ಶೇ. 60ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಯೋಜನೆ ಹಾಕಿಕೊಂಡಿದೆ. ಉಳಿದ ಶೇ. 40ರಷ್ಟು ಹುದ್ದೆಗಳು ಸೇವಾನಿರತ ಪ್ರಾಥಮಿಕ ಶಿಕ್ಷಕರನ್ನು ಮುಂಬಡ್ತಿ ಮಾಡುವ ಮೂಲಕ ಭರ್ತಿಯಾಗಲಿದೆ. ಈ ಎಲ್ಲಾ ಯೋಜನೆಗಳಿಗೆ ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಲ್ಲಿ ರಾಜ್ಯ ಮುಂಚೂಣಿ
ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಉಜ್ವಲ ಭವಿಷ್ಯಕ್ಕೆ ಪೂರಕವಾಗಿದ್ದು, ಇದರ ಅನುಷ್ಠಾನದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.
ನಗರದ ಹೊರವಲಯದ ಕೂಳೂರು ಬಳಿ ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯದ ಘಟಕವಾದ ಯೆನೆಪೋಯ ಇನ್ಸಿಟಿಟ್ಯೂಟ್ ಆಫ್ ಆರ್ಚ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೆಜ್‌ಮೆಂಟ್‌ನ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯಾನಂತರ ರೂಪಿಸಲಾದ ಅತ್ಯುತ್ತಮ ಶಿಕ್ಷಣ ನೀತಿ ಇದಾಗಿದೆ. ಕೇವಲ ಶಿಕ್ಷಣ ಕ್ಷೇತ್ರದ ಉನ್ನತಿ ಮಾತ್ರವಲ್ಲ, ಜನರ ಜೀವನ ಸುಧಾರಣೆ, ದೇಶದ ಭವಿಷ್ಯದ ರೂಪಾಂತರವೂ ಇದರಲ್ಲಿ ಅಡಕವಾಗಿದೆ. ಈಗಾಗಲೇ ವಿಶ್ವಾದ್ಯಂತ ಭಾರತೀಯರು ತಮ್ಮ ಛಾಪು ಮೂಡಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಿಂದ ನಮ್ಮ ದೇಶವು ವಿಶ್ವವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಲಿದೆ ಎಂದರು.
MBBS ವಿದ್ಯಾರ್ಥಿಗಳಿಗೆ ದಿಲ್ಲಿ AIIMS ವಿದ್ಯಾರ್ಥಿವೇತನ, ಯಾರಿಗೆ ಸಿಗುತ್ತೆ ನೆರವು?
21ನೇ ಶತಮಾನ ಎಂದರೆ ಜ್ಞಾನಾಧಾರಿತ ಆರ್ಥಿಕತೆ. ಪ್ರಸ್ತುತ ಸಮಾಜದ ಅನೇಕ ಸಮಸ್ಯೆಗಳಿಗೆ ಜ್ಞಾನವೇ ಮೂಲ ಪರಿಹಾರ. ಹಾಗಾಗಿ ಗುಣಮಟ್ಟದ ಜ್ಞಾನಾರ್ಜನೆ ಪಡೆಯಬೇಕಾದ ಅಗತ್ಯವಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುವುದು, ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಆಯ್ಕೆ ಸವಾಲಿನ ವಿಷಯ. ಇಂತಹ ಸಂದರ್ಭದಲ್ಲಿ ಯೆನೆಪೋಯ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳನ್ನು ತೆರೆದಿಟ್ಟಿದೆ ಎಂದು ಡಾ.ಅಶ್ವತ್ಥ ನಾರಾಯಣ ಶ್ಲಾಘಿಸಿದರು.
Gadag: ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾತಿ ಗೊಂದಲ ಸೃಷ್ಟಿಸಿದ ಶಿಕ್ಷಣ ಇಲಾಖೆ!
ಶಾಸಕ ಯು.ಟಿ. ಖಾದರ್ ಮಾತನಾಡಿ, ಯುವ ಸಮೂಹಕ್ಕೆ ಉತ್ತಮ ಶಿಕ್ಷಣ ನೀಡಿ ಅವರನ್ನು ಬಲಿಷ್ಠರನ್ನಾಗಿ ಮಾಡುವುದೇ ನಿಜವಾದ ದೇಶಪ್ರೇಮ. ಮಾನವೀಯತೆ, ಪ್ರೀತಿ, ಕರುಣೆ, ಸಹಾಯ ಮಾಡುವ ಮನೋಭಾವವನ್ನು ಶಿಕ್ಷಣ ನೀಡಬೇಕಿದೆ. ಯೆನೆಪೋಯ ಸಂಸ್ಥೆ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.