ಸಿಎ ಪರೀಕ್ಷೆ: ಮಂಗಳೂರಿನ ರುಥ್‌ ಕ್ಲೇರ್‌ ದೇಶದಲ್ಲೇ ಪ್ರಥಮ

By Kannadaprabha News  |  First Published Sep 14, 2021, 9:26 AM IST
  • ಇನ್ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟ್ಸ್‌ ಆಫ್‌ ಇಂಡಿಯಾದ ಅಖಿಲ ಭಾರತ ಮಟ್ಟದ ಚಾರ್ಟರ್ಡ್‌ ಅಕೌಂಟ್ಸ್‌ (ಸಿಎ) ಪರೀಕ್ಷೆ 
  • ಮಂಗಳೂರಿನ ರುಥ್‌ ಕ್ಲೇರ್‌ ಡಿಸಿಲ್ವ ಅವರು ದೇಶಕ್ಕೇ ಪ್ರಥಮ ಸ್ಥಾನ 

 ಮಂಗಳೂರು (ಸೆ.14):  ಇನ್ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟ್ಸ್‌ ಆಫ್‌ ಇಂಡಿಯಾದ ಅಖಿಲ ಭಾರತ ಮಟ್ಟದ ಚಾರ್ಟರ್ಡ್‌ ಅಕೌಂಟ್ಸ್‌ (ಸಿಎ) ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಮಂಗಳೂರಿನ ರುಥ್‌ ಕ್ಲೇರ್‌ ಡಿಸಿಲ್ವ ಅವರು ದೇಶಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ.

ಸಿಎ ಪರೀಕ್ಷೆಯಲ್ಲಿ ದೇಶದಲ್ಲಿ ಅಗ್ರಸ್ಥಾನ ಪಡೆದ ಕರಾವಳಿಯ ಮೊದಲ ವಿದ್ಯಾರ್ಥಿ ಎನ್ನುವ ಹೆಗ್ಗಳಿಕೆಗೂ ರುಥ್‌ ಕ್ಲೇರ್‌ ಪಾತ್ರರಾಗಿದ್ದಾರೆ.

Tap to resize

Latest Videos

ಮಂಗಳೂರಿನ ರೋಸಿ ಮರಿಯ ಡಿಸಿಲ್ವ ಮತ್ತು ರಫೆರ್ಟ್‌ ಡಿಸಿಲ್ವ ಅವರ ಪುತ್ರಿಯಾಗಿರುವ ರುಥ್‌, ನಗರದ ಸಂತ ತೆರೆಸಾ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದ ಬಳಿಕ ಮಂಗಳೂರು ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣ ಮೂಲಕ ಪದವಿ ಪೂರ್ಣಗೊಳಿಸಿದ್ದಾರೆ. ನಗರದ ಬಲ್ಮಠದ ಸಿಎ ವಿವಿಯನ್‌ ಪಿಂಟೋ ಆ್ಯಂಡ್‌ ಕಂಪೆನಿಯಲ್ಲಿ ಆರ್ಟಿಕಲ್‌ಶಿಪ್‌ ಪೂರೈಸಿದ್ದರು.

ಸಿಇಟಿ ವಿದ್ಯಾರ್ಥಿಗಳಿಗೆ 8 ಕೃಪಾಂಕ?

ತನ್ನ ಸಾಧನೆ ಬಗ್ಗೆ ಪ್ರತಿಕ್ರಿಯಿಸಿದ ರುಥ್‌ ಕ್ಲೇರ್‌, ಪರೀಕ್ಷೆ ಕಠಿಣವಾಗಿತ್ತು. ಅತ್ಯುತ್ತಮ ರೀತಿಯಲ್ಲಿ ನಿಭಾಯಿಸಲು ಪ್ರಯತ್ನಿಸಿದ್ದೆ. ಆದರೆ ಪ್ರಥಮ ರಾರ‍ಯಂಕ್‌ ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ.

ರುಥ್‌ ತುಂಬಾ ಬುದ್ಧಿವಂತೆ. ತರಬೇತಿ ಅವಧಿಯಲ್ಲಿ ಆಕೆ ಸವಾಲಿನ ಕೆಲಸಗಳನ್ನು ಕೌಶಲ್ಯದಿಂದ ನಿಭಾಯಿಸುತ್ತಿದ್ದರು. ಆಕೆಯ ಸಾಧನೆಯ ಬಗ್ಗೆ ನಾವು ಕೂಡ ಪ್ರಭಾವಿತವಾಗಿದ್ದೇವೆ ಎಂದು ಸಿಎ ವಿವಿಯನ್‌ ಪ್ರತಿಕ್ರಿಯಿಸಿದ್ದಾರೆ.

click me!