ಮೈಸೂರು (ಸೆ.10): ಮೈಸೂರು ವಿವಿಗೆ ಎನ್‌ಐಆರ್‌ಎಫ್ 19ನೇ ರ‍್ಯಾಂಕ್ ನೀಡಿರುವುದಕ್ಕೆ ವಿವಿಯ ಸಿಂಡಿಕೇಟ್ ಸದಸ್ಯ ಡಾ.ಈ.ಸಿ. ನಿಂಗರಾಜ್‌ಗೌಡ ಅಭಿನಂದನೆ ಸಲ್ಲಿಸಿದ್ದಾರೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ರಾರಯಂಕಿಂಗ್ ಫ್ರೇಂವರ್ಕ್ ವತಿಯಿಂದ ವಿವಿಗಳ ಕಾರ್ಯಪ್ರದರ್ಶನ ಗುರುತಿಸಿ ನೀಡುವ ರ‍್ಯಾಂಕಿಂಗ್‌ನಲ್ಲಿ ಮೈಸೂರು ವಿವಿಗೆ 19ನೇ ರ‍್ಯಾಂಕ್ ಲಭಿಸಿದೆ.
ಕುವೆಂಪು ವಿವಿಗೆ ದೇಶದಲ್ಲಿ 83 ರಾಜ್ಯದಲ್ಲಿ 3ನೇ ಸ್ಥಾನ
ಮೈಸೂರು ವಿಶ್ವವಿದ್ಯಾಲಯವು ಈ ಹಿಂದಿನ ವರ್ಷವೂ (2020ರಲ್ಲಿ), 27ನೇ ರ‍್ಯಾಂಕ್ ಪಡೆದಿತ್ತು. ಈ ವರ್ಷ ಕಾಯಂ ಬೋಧಕರ ಸಂಖ್ಯೆಯಲ್ಲಿ ಇಳಿಕೆ ಹಾಗೂ ಇನ್ನಿತರೆ ವಿಷಯಗಳಲ್ಲಿ ಕೊರತೆ ಎದುರಾಗಿದ್ದರೂ ಮೈಸೂರು ವಿವಿಯೂ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.