ದೇಶದಲ್ಲೇ ಮೊದಲ ಬಾರಿಗೆ ಹಿಂದಿಯಲ್ಲೂ ಎಂಬಿಬಿಎಸ್ ಪಾಠ ಆರಂಭವಾಗಲಿದೆ. ಕೆಂದ್ರ ಗೃಹ ಅಚಿವ ಅಮಿತ್ ಶಾ ಇಂದು ಚಾಲನೆ ನೀಡಲಿದ್ದಾರೆ. ಹಾಗೂ, ಶೀಘ್ರ ಇತರ ಭಾಷೆಗಳಲ್ಲೂ ವೈದ್ಯಶಿಕ್ಷಣ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ಭೋಪಾಲ್: ದೇಶದಲ್ಲಿ ಇದೇ ಮೊದಲ ಬಾರಿಗೆ ಹಿಂದಿಯಲ್ಲೂ (Hindi) ಎಂಬಿಬಿಎಸ್ (MBBS) (ವೈದ್ಯಕೀಯ ಪದವಿ) (Medical Degree) ಕಲಿಕೆಯನ್ನು ಭಾನುವಾರದಿಂದ ಆರಂಭಿಸಲಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಮಧ್ಯಪ್ರದೇಶದಲ್ಲಿ (Madhya Pradesh) ಹಿಂದಿ ಭಾಷಾ ಎಂಬಿಬಿಎಸ್‌ಗೆ ಹಿಂದಿ ಭಾಷೆಯಲ್ಲಿ ವೈದ್ಯಕೀಯ ಪಠ್ಯ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಹಾಗೆಯೇ ತಮಿಳು (Tamil) ಸೇರಿ ಇತರ ಪ್ರಾದೇಶಿಕ ಭಾಷೆಗಳಿಗೂ ಶೀಘ್ರ ಎಂಬಿಬಿಎಸ್ ವಿಸ್ತರಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ವೈದ್ಯಕೀಯ ಪದಗಳಿಗೆ ತಮಿಳು ರೂಪ ನೀಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಮೂಲಗಳು ಹೇಳಿವೆ.
ಮಧ್ಯ ಪ್ರದೇಶದಲ್ಲಿ ಹಿಂದಿ ಎಂಬಿಬಿಎಸ್:
ಮಧ್ಯಪ್ರದೇಶದ ಎಲ್ಲ 13 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಹಿಂದಿ ಭಾಷೆಯಲ್ಲೂ ಎಂಬಿಬಿಎಸ್ (ವೈದ್ಯಕೀಯ ಪದವಿ)ಯನ್ನು ಪಾಠ ಮಾಡಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chauhan) ಹೇಳಿದ್ದಾರೆ. ಈ ಮೂಲಕ ಮಧ್ಯಪ್ರದೇಶ ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ಒದಗಿಸುವ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ.
ಇದನ್ನು ಓದಿ: English ಬಿಡಿ ಹಿಂದಿ, ಪ್ರಾದೇಶಿಕ ಭಾಷೆಯ ಮಾಧ್ಯಮಗಳಿಗೆ ಆದ್ಯತೆ ಕೊಡಿ: Amit Shah ಸಮಿತಿ ಶಿಫಾರಸು
ಎಂಬಿಬಿಎಸ್‌ನಲ್ಲಿ ಅಂಗರಚನಾ ಶಾಸ್ತ್ರ, ಶರೀರ ಶಾಸ್ತ್ರ ಹಾಗೂ ಜೀವ ರಸಾಯನ ಶಾಸ್ತ್ರ- ಈ ಮೂರು ವಿಷಯಗಳನ್ನು ಕಲಿಸಲಾಗುವುದು. ಈ ಮೂಲಕ ಹಿಂದಿಯಲ್ಲಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಶಿಕ್ಷಣ ಕಲಿಯಲು ಸಾಧ್ಯವಾಗುವುದಿಲ್ಲ ಎಂಬ ಗ್ರಹಿಕೆಯನ್ನು ಬದಲಾಯಿಸಲಾಗುವುದು ಎಂದು ಚೌಹಾಣ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಮಾತೃಭಾಷೆಯಲ್ಲೇ (Mother Language) ಕಲಿಕೆಗೆ ಒತ್ತು ನೀಡಬೇಕು ಎಂದು ಹೇಳಿದ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹಿಂದಿ ಮಾಧ್ಯಮದಲ್ಲಿ ಕಲಿಯುವ ಮೂಲಕವೂ ಜೀವನದಲ್ಲಿ ಮುಂದುವರೆಯಬಹುದು ಎಂಬ ಸಂದೇಶ ಇದು ಸಾರಲಿದೆ ಎಂದಿದ್ದಾರೆ.
ಇದನ್ನೂ ಓದಿ: ಬ್ಯಾಂಕ್‌ಗಳು ಸ್ಥಳೀಯ ಭಾಷೆ ಮಾತನಾಡುವವರನ್ನು ನೇಮಿಸಬೇಕು: Nirmala Sitharaman
ಫೆಬ್ರವರಿ ತಿಂಗಳಲ್ಲಿ ಭೋಪಾಲ್‌ನಲ್ಲಿರುವ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಹಿಂದಿ ಘಟಕ ಸ್ಥಾಪಿಸಿ ಪುಸ್ತಕದ ಹಿಂದಿ ಅನುವಾದ ಪ್ರಕ್ರಿಯೆ ಆರಂಭಿಸಲಾಗಿತ್ತು. ಈ ಅನುವಾದಕ್ಕಾಗಿ 97 ವೈದ್ಯಕೀಯ ಕಾಲೇಜಿನ ಶಿಕ್ಷಕರು, ತಜ್ಞರು 5,568 ಗಂಟೆಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ್ದಾರೆ. ಹಿಂದಿಯೊಂದಿಗೆ ಇಂಗ್ಲೀಷ್ ಪುಸ್ತಕಗಳೂ ಲಭ್ಯವಿರಲಿದ್ದು, ತಾಂತ್ರಿಕ ಪದಗಳನ್ನು ಇಂಗ್ಲೀಷ್‌ನಲ್ಲೇ ಇರಿಸಲಾಗಿದೆ ಎಂದು ಶಿಕ್ಷಣ ಸಚಿವ ವಿಶ್ವಾಸ ಸಾರಂಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Hindi Diwas: ''ಅಧಿಕೃತ ಭಾಷೆ ಹಿಂದಿ ದೇಶವನ್ನು ಒಗ್ಗೂಡಿಸುತ್ತದೆ'' ಎಂದ ಅಮಿತ್ ಶಾ
ಪ್ರಿಸ್ಕ್ರಿಪ್ಷನ್ ಮೇಲೆ ‘ಶ್ರೀಹರಿ’ ಎಂದು ಬರೆಯಿರಿ: ಮಧ್ಯ ಪ್ರದೇಶ ಸಿಎಂ
ವೈದ್ಯರು ಬರೆಯುವ ಪ್ರಿಸ್ಕ್ರಿಪ್ಷನ್‌ಗಳನ್ನು (Prescription) ಹಿಂದಿಯಲ್ಲಿ ಬರೆಯುವಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶನಿವಾರ ಹೇಳಿದ್ದಾರೆ. ಪ್ರಿಸ್ಕ್ರಿಪನ್ ಬರೆಯುವ ಮೊದಲು ಮೇಲ್ಭಾಗದಲ್ಲಿ ‘ಶ್ರೀಹರಿ’ ಎಂದು ಬರೆಯಿರಿ. ಅದರ ಕೆಳಗೆ ಔಷಧಗಳ ಹೆಸರನ್ನು ಹಿಂದಿಯಲ್ಲಿ ಬರೆಯಿರಿ ಎಂದು ಕರೆ ನೀಡಿದ್ದಾರೆ.
ಭೋಪಾಲ್‌ನ ಭಾರತ ಭವನದಲ್ಲಿ ನಡೆದ ಹಿಂದಿ ವ್ಯಾಕರಣ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ಇಂಗ್ಲಿಷ್‌ನಲ್ಲಿ ಮಾತ್ರ ಪ್ರಿಸ್ಕಿ್ರಪ್ಷನ್‌ಗಳನ್ನು ಬರೆಯುವುದನ್ನು ಖಂಡಿಸಿದರು. ‘ನೀವು ಕ್ರೋಸಿನ್ ಮಾತ್ರೆಯನ್ನು ಸೂಚಿಸುತ್ತಿದ್ದೀರಾ ಎಂದರೆ ಅದನ್ನು ಹಿಂದಿಯಲ್ಲಿ ಬರೆಯುವುದಕ್ಕೆ ಏನು ಸಮಸ್ಯೆ?’ ಎಂದು ಪ್ರಶ್ನಿಸಿದರು. ‘ಇದರ ಕುರಿತಾಗಿ ನಾವು ಹೆಚ್ಚು ಚರ್ಚೆ ನಡೆಸುವ ಬದಲು ಇದನ್ನು ಜಾರಿಗೆ ತರಬೇಕಿದೆ. ಸರ್ಕಾರ ಇಂಗ್ಲಿಷಿನ ವಿರೋಧಿಯಲ್ಲ. ಆದರೆ ರಾಷ್ಟ್ರಭಾಷೆಯಾದ ಹಿಂದಿಯ ಬಗ್ಗೆ ಎಲ್ಲೆಡೆ ಅರಿವು ಮೂಡಿಸುವುದು ಅಗತ್ಯವಾಗಿದೆ’ ಎಂದು ಹೇಳಿದರು.