Latest Videos

ಬೀದರ್‌ ಎಂಜಿನಿಯರಿಂಗ್‌ ಕಾಲೇಜು ಪ್ರವೇಶ ಆರಂಭ: ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳಿಗೆ ಶೇ. 80ರಷ್ಟು ಮೀಸಲು

By Kannadaprabha NewsFirst Published Oct 15, 2022, 2:00 PM IST
Highlights

ಆರಂಭದ ಪ್ರಸಕ್ತ ಸಾಲಿನಲ್ಲಿ ಎರಡು ಕೋರ್ಸ್‌ಗಳಿಗೆ ಪ್ರವೇಶ, ಖಾಸಗಿ ಕಾಲೇಜಲ್ಲಿ ಲಕ್ಷಾಂತರ ರು ಫೀಸು, ಇಲ್ಲಿ ಕೆಲವೇ ಸಾವಿರ, ಆಪ್ಶನ್‌ ಎಂಟ್ರಿ, ಬೀದರ್‌ ಕಾಲೇಜು ಮೊದಲ ಆಯ್ಕೆಯಾಗಿರಲಿ

ಬೀದರ್‌(ಅ.15):  2022-23ನೇ ಶೈಕ್ಷಣಿಕ ವರ್ಷದಿಂದ ಎಂಜಿನಿಯರಿಂಗ್‌ ಕಾಲೇಜು ಪ್ರಾರಂಭವಾಗಲಿದ್ದು, ಸಿಇಟಿ ಆಪ್ಶನ್‌ ಎಂಟ್ರಿ ಆರಂಭಾಗಿದೆ. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಶೇ.80ರಷ್ಟು ಮೀಸಲಾತಿ ಇದ್ದು ಖಾಸಗಿ ಕಾಲೇಜುಗಳಲ್ಲಿ ಲಕ್ಷಾಂತರ ರುಪಾಯಿ ಶುಲ್ಕವಿರುವ ಕೋರ್ಸ್‌ಗಳಿಗೆಲ್ಲ ಬೀದರ್‌ ಎಂಜಿನಿಯರಿಂಗ್‌ ಕಾಲೇಜಲ್ಲಿ ಕೆಲವೇ ಸಾವಿರ ರು. ಶುಲ್ಕ, ಆದ್ದರಿಂದ ಇದೇ ಮೊದಲ ಆಯ್ಕೆಯಾಗಿರಲಿ. ಈ ಕುರಿತಂತೆ ಕಾಲೇಜಿನ ವಿಶೇಷಾಧಿಕಾರಿ ದೇವೇಂದ್ರ ಹಂಚೆ ಅವರು ಮಾಹಿತಿ ನೀಡಿದ್ದು, ಸಿಇಟಿ ಮೂಲಕ ಕೋರ್ಸ್‌ಗಳಿಗೆ ಕಾಲೇಜು ಆಯ್ಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಕಾಲೇಜಿನ ಪ್ರವೇಶದಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಶೇ. 80ರಷ್ಟುಮೀಸಲಾತಿ ಇದೆ ಇದರ ಸದುಪಯೋಗ ಪಡೆದುಕೊಳ್ಳಲಿ ಎಂದು ಹೇಳಿದರು.

ಜಿಲ್ಲೆಯ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸಧ್ಯ ಆರಂಭವಾಗಲಿರುವ ಕೋರ್ಸ್‌ಗಳ ಪ್ರಯೋಜನ ಪಡೆಯಬೇಕು. ಬರುವ ದಿನಗಳಲ್ಲಿ ಕಾಲೇಜಿನಲ್ಲಿ ಮೆಕ್ಯಾನಿಕಲ್‌, ಸಿವಿಲ್‌, ಎಲೆಕ್ಟ್ರಿಕಲ್ಸ್‌ ಅಂಡ್‌ ಎಲೆಕ್ಟ್ರಾನಿಕ್ಸ್‌, ಕಮರ್ಷಿಯಲ್‌ ಪ್ರಾಕ್ಟಿಸ್‌ ಸೇರಿದಂತೆ ವಿವಿಧ ಕೋರ್ಸ್‌ಗಳನ್ನು ಆರಂಭಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.

5, 8ನೇ ತರಗತಿ ಮಕ್ಕಳಿಗೆ ಈ ವರ್ಷ ಹೊಸ ಪರೀಕ್ಷೆ: ಬಿ.ಸಿ.ನಾಗೇಶ್‌

165 ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ವ್ಯವಸ್ಥೆಯೂ ಪ್ರಾರಂಭವಾಗಿದೆ:

ಈಗಾಗಲೇ ಅನುಮೋದನೆ ದೊರೆತ ಕಾರಣ ಪ್ರಸಕ್ತ ಸಾಲಿನಲ್ಲಿ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ಹಾಗೂ ಆರ್ಟಿಫಿಷಿಯಲ್‌ ಇಂಟಲಜೆನ್ಸಿ ಹಾಗೂ ಡಾಟಾ ಸೈನ್ಸ್‌ ಕೋರ್ಸ್‌ಗಳಲ್ಲಿ ತಲಾ 60 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುವುದು. ನುರಿತ, ಅನುಭವಿ ಉಪನ್ಯಾಸಕರೊಂದಿಗೆ ತರಗತಿಗಳನ್ನು ಪ್ರಾರಂಭಿಸಲಾಗುವುದು. ಒಟ್ಟು 165 ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸಹ ಆರಂಭ ಮಾಡಲಾಗುವುದು ಹೆಚ್ಚಿನ ಮಾಹಿತಿಗೆ ಮೊ. 9611894797 ಇಲ್ಲಿಗೆ ಸಂಪರ್ಕಿಸಬಹುದು ಎಂದು ಕಾಲೇಜಿನ ವಿಶೇಷಾಧಿಕಾರಿ ದೇವೇಂದ್ರ ಹಂಚೆ ತಿಳಿಸಿದ್ದಾರೆ.

ಈಗಾಗಲೇ ಸಿಇಟಿ ಆಪ್ಶನ್‌ ಆಂಟ್ರಿ ಆರಂಭವಾಗಿದ್ದು ಶೀಘ್ರದಲ್ಲಿ ಅದು ಅಂತ್ಯವಾಗುತ್ತದೆ, ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಅ. 18ರಿಂದ ಪ್ರವೇಶ ಪ್ರಕ್ರಿಯೆ ಆರಂಭ. ಇನ್ನು ಖಾಸಗಿ ಕಾಲೇಜುಗಳಲ್ಲಿ ಸದರಿ ಕೋರ್ಸಗಳಿಗೆ ಲಕ್ಷಾಂತರ ರುಪಾಯಿ ಡೋನೆಶನ್‌ ಹಾಗೂ ಶುಲ್ಕವಿದೆಯಾದರೆ ನಮ್ಮ ಬೀದರ್‌ನ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಶುಲ್ಕ ವಾರ್ಷಿಕ ಕೇವಲ 38ಸಾವಿರ ರು. ಇದ್ದು ಇದೂ ಕೂಡ ಎಪಿಎಲ್‌ ಕಾರ್ಡುದಾರರಿಗೆ ಅಷ್ಟಕ್ಕೂ ಎಪಿಎಲ್‌ ಕಾರ್ಡ ಹೊಂದಿದ ಸರ್ಕಾರದ ಇತರ ಮೀಸಲಾತಿ, ರಿಯಾಯಿತಿಗಳನ್ನು ಪಡೆಯಲು ಅರ್ಹರಾಗಿರುವವರಿಗೆ ಶುಲ್ಕವು ಸ್ಕಾಲರ್ಷಿಪ್‌ ಮೂಲಕ (ವಿಶ್ವವಿದ್ಯಾಲಯದ ಶುಲ್ಕ ಹೊರತುಪಡಿಸಿ) ಮರುಪಾವತಿಯಾಗುತ್ತದೆ ಅಂತ ಬೀದರ್‌ ಎಂಜಿನಿಯರಿಂಗ್‌ ಕಾಲೇಜಿನ ವಿಶೇಷಾಧಿಕಾರಿ ದೇವೇಂದ್ರ ಹಂಚೆ ಹೇಳಿದ್ದಾರೆ.  

2016ರಲ್ಲಿ ಬೀದರ್‌ಗೆ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಮಂಜೂರು ಮಾಡಲಾಗಿತ್ತು. ಆದರೆ, ಕಾರಣಾಂತರದಿಂದ ಕಾಲೇಜು ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿತ್ತು. ಬಳಿಕ ಎಬಿವಿಪಿ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಆಡಳಿತದ ಗಮನವನ್ನು ಎಬಿವಿಪಿ ಸೆಳೆದಿತ್ತು. ಇದೀಗ ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಪಕ್ಕದಲ್ಲಿ 5 ಎಕರೆ ಪ್ರದೇಶದಲ್ಲಿ ಕಾಲೇಜು ಹಾಗೂ ಕೆಕೆಆರ್‌ಡಿಬಿ ಅನುದಾನದಲ್ಲಿ ಹಾಸ್ಟೆಲ್‌ ಕಟ್ಟಡ ನಿರ್ಮಾಣಗೊಂಡು ವಿದ್ಯಾರ್ಜನೆಗೆ ಸಜ್ಜಾಗಿರುವದು ಸಂತಸ ತಂದಿದೆ ಅಂತ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ್‌ ತಿಳಿಸಿದ್ದಾರೆ. 
 

click me!