ವಿದ್ಯಾರ್ಥಿನಿ ಜೊತೆ ಲವ್ವಿಡವ್ವಿ, ಉಪನ್ಯಾಸಕರನ್ನ ಅರೆಸ್ಟ್ ಮಾಡುವಂತೆ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ!

Published : Jun 15, 2023, 03:14 PM IST
ವಿದ್ಯಾರ್ಥಿನಿ ಜೊತೆ ಲವ್ವಿಡವ್ವಿ, ಉಪನ್ಯಾಸಕರನ್ನ ಅರೆಸ್ಟ್ ಮಾಡುವಂತೆ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ!

ಸಾರಾಂಶ

ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾದ ಉಪನ್ಯಾಸಕ ವಿದ್ಯಾರ್ಥಿನಿಯೊಂದಿಗೆ ಲವ್ವಿಡವ್ವಿ ನಡೆಸಿ ಸಿಕ್ಕಿಬಿದ್ದಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ಸರ್ಕಾರಿ ಪ್ರಥಮ ಕಾಲೇಜಿನಲ್ಲಿ ನಡೆದಿದೆ.

ತುಮಕೂರು (ಜೂ.14) : ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾದ ಉಪನ್ಯಾಸಕ ವಿದ್ಯಾರ್ಥಿನಿಯೊಂದಿಗೆ ಲವ್ವಿಡವ್ವಿ ನಡೆಸಿ ಸಿಕ್ಕಿಬಿದ್ದಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ಸರ್ಕಾರಿ ಪ್ರಥಮ ಕಾಲೇಜಿನಲ್ಲಿ ನಡೆದಿದೆ.

ವಾಣಿಜ್ಯ ವಿಭಾಗದ ಉಪನ್ಯಾಸಕ ರಂಗನಾಥ್ ಎಂಬಾತನ ವಿದ್ಯಾರ್ಥಿನಿಯೊಂದಿಗೆ ಲವ್ವುಡವ್ವಿ  ಶುರುಮಾಡಿದ್ದಾನೆ. ವಿದ್ಯಾರ್ಥಿನಿಯೊಂದಿಗೆ ಮೊಬೈಲ್ ಚಾಟಿಂಗ್ ಮಾಡಿದ್ದಾನೆ ಆ ವಿದ್ಯಾರ್ಥಿನಿಯೊಂದಿಗೆ ಕಾರಲ್ಲಿ ಸುತ್ತಾಟ ನಡೆಸಿರುವ ಉಪನ್ಯಾಸಕ ರಂಗನಾಥ.

ವಿದ್ಯಾರ್ಥಿನಿಯೊಂದಿಗೆ ಉಪನ್ಯಾಸಕನ ಚಕ್ಕಂದ ವಿಷಯ ತಿಳಿದ ಬಳಿಕ ಕಾಲೇಜು ವಿದ್ಯಾರ್ಥಿಗಳು ರೊಚ್ಚಿಗೆದ್ದು ಉಪನ್ಯಾಸಕನ ಅರೆಸ್ಟ್ ಮಾಡುವಂತೆ ಒತ್ತಾಯಿಸಿದ್ದಾರೆ. ನಮ್ಮ ಮುಂದೆಯೇ ಉಪನ್ಯಾಸಕನ ಬಂಧನವಾಗಬೇಕು ಅಲ್ಲಿಯವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು  ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. 

ಗಂಡನ ವಾಟ್ಸಾಪ್‌ ಬ್ಯಾಕಪ್‌ ಚೆಕ್ ಮಾಡಿದ ಪತ್ನಿ, ಬಯಲಾಯ್ತು ಅತ್ತಿಗೆ ಜೊತೆಗಿನ ಲವ್ವಿಡವ್ವಿ!

ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತನೆ ಉಪನ್ಯಾಸಕರನ್ನ ಕೊಠಡಿಯಲ್ಲಿ ಹಾಕಿರುವ ವಿದ್ಯಾರ್ಥಿಗಳು, ಗೌರವಾನ್ವಿತ ಸ್ಥಾನವಾದ  ಉಪನ್ಯಾಸಕ ಹುದ್ದೆಗೆ ಕಳಂಕ ತಂದಿದ್ದಾನೆ. ವಿದ್ಯಾರ್ಥಿನಿಯೊಂದಿಗೆ ಲವ್ವಿಡವ್ವಿ ಮಾಡುವ ಉಪನ್ಯಾಸಕ ಏನು ಸಂದೇಶ ನೀಡ್ತಿದ್ದಾನೆ. ಹೀಗಾಗಿ ಉಪನ್ಯಾಸಕನನ್ನು ನಮ್ಮ ಮುಂದೆಯೇ ಬಂಧಿಸಬೇಕು ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ತಿಪಟೂರು ಪೊಲೀಸರು ಕಾಲೇಜಿಗೆ ದೌಡಾಯಿಸಿದ್ದು ವಿಚಾರಣೆ ನಡೆಸಿದ್ದಾರೆ.  ತಿಪಟೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ