ಪ್ಲೀಸ್ ಇನ್ನೊಮ್ಮೆ ಹೀಗೆ ಮಾಡಲ್ಲ... ಟೀಚರ್ ಜೊತೆ ಮುದ್ದಾಗಿ ಕ್ಷಮೆ ಕೇಳಿದ ಕ್ಯೂಟ್ ಬಾಯ್

By Anusha Kb  |  First Published Sep 14, 2022, 10:15 AM IST

ಬ್ಬ ಪುಟ್ಟ ಬಾಲಕ ತರಲೆ ಮಾಡಿ ಟೀಚರ್ ಅನ್ನು ಗೋಳು ಹೊಯ್ದುಕೊಂಡಿದ್ದು, ಇದರಿಂದ ಟೀಚರ್ ಸಿಟ್ಟುಗೊಂಡಿದ್ದಾರೆ. ಸಿಟ್ಟುಗೊಂಡ ಟೀಚರ್ ಬಳಿ ಪುಟ್ಟ ಬಾಲಕ ಮುದ್ದಾಗಿ ಕ್ಷಮೆ ಯಾಚಿಸುತ್ತಿದ್ದಾನೆ. ಇದರ ವಿಡಿಯೋ ಸಾಕಷ್ಟು ವೈರಲ್ ಆಗಿದೆ.


ಮಕ್ಕಳು ದೇವರ ಸಮಾನ ಎಂದು ಹೇಳುತ್ತಾರೆ. ಮಕ್ಕಳ ಮುಗ್ಧತೆ, ಚಿಂತೆ ಇಲ್ಲದೆ ಯಾವುದೇ ಪೂರ್ವಾಗ್ರಹವಿಲ್ಲದ ನಡತೆ ಇದಕ್ಕೆ ಕಾರಣ. ಅದರಲ್ಲೂ ಶಾಲೆಗಳಲ್ಲಿ ಪುಟ್ಟ ಮಕ್ಕಳ ತುಂಟತನಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಶಿಕ್ಷಕರನ್ನು ತಮ್ಮ ತರಲೆ, ಹಠಮಾರಿ ವರ್ತನೆಗಳು, ತುಂಟತನಗಳಿಂದಲೇ ಪುಟಾಣಿಗಳು ಗೋಳು ಹೊಯ್ದುಕೊಳ್ಳುತ್ತಾರೆ. ಇತ್ತ ಶಿಕ್ಷಕಿಗೆ ಈ ಪುಟಾಣಿಗಳನ್ನು ಶಿಕ್ಷಿಸಲು ಆಗದೇ ಸುಮ್ಮನಿರಲೂ ಆಗದೇ ಟೀಚರ್‌ಗಳು ಧರ್ಮಸಂಕಟದಲ್ಲಿ ಸಿಲುಕುತ್ತಾರೆ. ಇಷ್ಟೆಲ್ಲಾ ಪುರಾಣ ಏಕೆ ಅಂತ ಕೇಳ್ತಾ ಇದ್ದೀರಾ? ಇಲ್ಲೊಬ್ಬ ಪುಟ್ಟ ಬಾಲಕ ತರಲೆ ಮಾಡಿ ಟೀಚರ್ ಅನ್ನು ಗೋಳು ಹೊಯ್ದುಕೊಂಡಿದ್ದು, ಇದರಿಂದ ಟೀಚರ್ ಸಿಟ್ಟುಗೊಂಡಿದ್ದಾರೆ. ಸಿಟ್ಟುಗೊಂಡ ಟೀಚರ್ ಬಳಿ ಪುಟ್ಟ ಬಾಲಕ ಮುದ್ದಾಗಿ ಕ್ಷಮೆ ಯಾಚಿಸುತ್ತಿದ್ದಾನೆ. ಇದರ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಬಾಲಕನ ಈ ಕ್ಯೂಟ್‌ನೆಸ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ತರಗತಿಯಲ್ಲಿ ಅವಿಧೇಯನಂತೆ (disobedient) ವರ್ತಿಸಿದ್ದಕ್ಕೆ ಬಾಲಕ ಶಿಕ್ಷಕಿ ಬಳಿ ಕ್ಷಮೆ ಕೇಳುತ್ತಿದ್ದಾನೆ. ವಿಡಿಯೋದಲ್ಲಿ ಟೀಚರ್ ಕೋಪಗೊಂಡಂತೆ ತೋರುತ್ತಾರೆ. ಕೋಪಗೊಂಡ ಟೀಚರ್‌ಗೆ (Teacher) ಬಾಲಕ ತನ್ನದೇ ರೀತಿಯಲ್ಲಿ ಕ್ಷಮೆಯಾಚಿಸುತ್ತಾನೆ. ನಿರಂತರವಾಗಿ ಶಿಕ್ಷಕಿ ಬಳಿ ಕ್ಷಮೆ ಕೇಳುವ ಪುಟಾಣಿ, ಇನ್ನು ಮುಂದೆ ತನ್ನ ಈ ರೀತಿ ತಪ್ಪು ಮಾಡುವುದಿಲ್ಲ ಎಂದು ಹೇಳುತ್ತಾನೆ. ಅಲ್ಲದೇ ಕ್ಷಮಿಸುವಂತೆ ಕೇಳಿ ಟೀಚರ್ ಕೆನ್ನೆಗೆ ಮುತ್ತಿಕ್ಕುತ್ತಾನೆ. 

ऐसा स्कूल मेरे बचपन में क्यों नहीं था 😏😌 pic.twitter.com/uHkAhq0tNN

— ज़िन्दगी गुलज़ार है ! (@Gulzar_sahab)

Tap to resize

Latest Videos

 

ವಿಡಿಯೋದಲ್ಲಿ ಶಿಕ್ಷಕಿ ಹೇಳುತ್ತಾರೆ, ಇಲ್ಲ, ನೀನು ಈ ರೀತಿ ಮಾಡುತ್ತಲೇ ಇರುತ್ತಿಯಾ, ಮತ್ತೆ ಮತ್ತೆ ಮಾಡುತ್ತಲೇ ಇರುತ್ತಿಯಾ, ನಂತರ ಮತ್ತೆ ಮತ್ತೆ ಇನ್ನೊಮ್ಮೆ ಹೀಗೆ ಮಾಡುವುದಿಲ್ಲ ಎಂದು ಹೇಳುತ್ತೀಯಾ ಮತ್ತೆ ಅದನ್ನೇ ಮಾಡುತ್ತೀಯಾ ಎಂದು ಶಿಕ್ಷಕಿ ಬಾಲಕನ ಬಳಿ ಕೋಪದಿಂದ ಹೇಳುತ್ತಾರೆ. ಈ ವೇಳೆ ಬಾಲಕ ಇಲ್ಲ, ಇನ್ನೊಮ್ಮೆ ಹೀಗೆ ಮಾಡುವುದಿಲ್ಲ ಮಿಸ್ ಎಂದು ಹೇಳುತ್ತಾನೆ. 

9ನೇ ವರ್ಷಕ್ಕೆ ಟೀಚರ್‌, 16 ವರ್ಷಕ್ಕೆ ಹೆಡ್‌ಮಾಸ್ಟರ್! ಪ್ರಪಂಚದ ಅತೀ ಕಿರಿಯ ಶಿಕ್ಷಕ ಇವರೇ

ವಿಡಿಯೋದಲ್ಲಿ ಕೊನೆಗೆ ಶಿಕ್ಷಕಿಯನ್ನು (Teacher) ಸಮಾಧಾನಪಡಿಸುವಲ್ಲಿ ಬಾಲಕ ಯಶಸ್ವಿಯಾಗಿದ್ದು, ಈ ವೇಳೆ ಬಾಲಕ ಟೀಚರ್ ಕೆನ್ನೆಗೆ ಮುತ್ತಿಡುತ್ತಾನೆ. ಈ ವೇಳೆ ಶಿಕ್ಷಕಿಯೂ ಕೂಡ ಆತನಿಗೆ ಮುತ್ತಿಕ್ಕುತ್ತಾರೆ. ಆದರೆ ಈ ಮುದ್ದಾದ ಬಾಲಕ ಹಾಗೂ ಟೀಚರ್ ಯಾರು ಎಂಬುದು ಮಾತ್ರ ಗೊತ್ತಿಲ್ಲ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 282,000 ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, 16,000 ಕ್ಕೂ ಹೆಚ್ಚು ಜನ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಟ್ವಿಟ್ಟರ್‌ನಲ್ಲಿ ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ. ಇದು ಕ್ಯೂಟ್ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. 

ಅಲ್ಲಿ ಮಸಾಜ್, ಇಲ್ಲಿ ಬಿಟ್ಟಿ ಚಾಕರಿ: ಇಬ್ಬರು ಟೀಚರ್‌ಗಳ ವಿಡಿಯೋ ವೈರಲ್

ಕೆಲ ದಿನಗಳ ಹಿಂದೆ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಶಾಲೆಯ ಮಕ್ಕಳ ಜೊತೆಗೂಡಿ ಡಾನ್ಸ್ (Dance) ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ(Social Media) ಸಾಕಷ್ಟುವ ವೈರಲ್ ಆಗಿತ್ತು. ದೆಹಲಿಯ (Delhi) ಶಾಲೆಯೊಂದರ ಶಿಕ್ಷಕರೊಬ್ಬರು ತಮ್ಮ ವಿದ್ಯಾರ್ಥಿನಿಯರ ಜೊತೆ ಸಮ್ಮರ್ ಕ್ಯಾಂಪ್‌ನಲ್ಲಿ ಡಾನ್ಸ್ ಮಾಡುತ್ತಿರುವ ದೃಶ್ಯ ಇದಾಗಿತ್ತು. ಕಿಸ್ಮತ್ (Kismath) ಸಿನಿಮಾದ ಕಜ್ರಾ ಮೊಹಬತ್ ವಾಲಾ ಎಂಬ ಹಾಡಿಗೆ ಶಿಕ್ಷಕಿಯರು ನರ್ತಿಸಿದ್ದರು. ಶಿಕ್ಷಕಿ ಮನು ಗುಲಟಿ ಸ್ವತಃ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಮನು ಗುಲಟಿ (Manu gulati) ದೆಹಲಿ ಸರ್ಕಾರಿ ಶಾಲೆಯೊಂದರ ಶಿಕ್ಷಕಿಯಾಗಿದ್ದು, ಮೆಂಟರ್ ಆಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.
 

click me!