10-12ನೇ ತರಗತಿ ಪಾಸಾದವರಿಗೆ ಎಲ್​ಐಸಿ ಸ್ಕಾಲರ್‌ಶಿಪ್ ಸ್ಕೀಮ್: ಅರ್ಜಿ ಸಲ್ಲಿಕೆಗೆ ಕೆಲವೇ ದಿನ ಬಾಕಿ

By Suchethana D  |  First Published Dec 17, 2024, 12:36 PM IST

10-12ನೇ ತರಗತಿ ಪಾಸಾದವರಿಗೆ ಎಲ್​ಐಸಿ ಸ್ಕಾಲರ್‌ಶಿಪ್ ಸ್ಕೀಮ್ ಆರಂಭಿಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಕೆಲವೇ ದಿನ ಬಾಕಿ ಇವೆ. ಸಂಪೂರ್ಣ ಮಾಹಿತಿ ಇಲ್ಲಿದೆ... 
 


10 ಮತ್ತು 12ನೇ ತರಗತಿ ಪಾಸಾದವರಿಗೆ ಎಲ್​ಐಸಿಯಿಂದ ಸ್ಕಾಲರ್​ಶಿಪ್​ ಯೋಜನೆಯನ್ನು ಜಾರಿಗೊಳಿಸಲಾಗಿದೆ.   10 ನೇ ತರಗತಿ, 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡುವ ಯೋಜನೆ ಇದಾಗಿದೆ.  ಆರ್ಥಿಕವಾಗಿ ದುರ್ಬಲ ಕುಟುಂಬಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಗಲಿದ್ದು, ಇದನ್ನು  ಗೋಲ್ಡನ್ ಜುಬಿಲಿ ಸ್ಕಾಲರ್‌ಶಿಪ್ ಸ್ಕೀಮ್ 2024 ಎಂದು ಪರಿಚಯಿಸಲಾಗಿದೆ.  ಈ ವಿದ್ಯಾರ್ಥಿವೇತನ ಯೋಜನೆಯು ಸರ್ಕಾರಿ ಅಥವಾ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ದಾಖಲಾದ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ.

ಎಲ್‌ಐಸಿಯ ಗೋಲ್ಡನ್ ಜುಬಿಲಿ ಸ್ಕಾಲರ್‌ಶಿಪ್ ಸ್ಕೀಮ್-2024 ಆರ್ಥಿಕವಾಗಿ ದುರ್ಬಲ ಕುಟುಂಬಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ, ಉತ್ತಮ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಅವಕಾಶಗಳನ್ನು ನೀಡುತ್ತದೆ ಎಂದು ಎಲ್​ಐಸಿ ಹೇಳಿದೆ. ಈ ವಿದ್ಯಾರ್ಥಿ ವೇತನದ ಅಡಿಯಲ್ಲಿ ಎರಡು ರೀತಿಯ ವಿದ್ಯಾರ್ಥಿವೇತನಗಳನ್ನು ನೀಡಲಾಗುವುದು. ಮೊದಲನೆಯದ್ದು, ಸಾಮಾನ್ಯ ವಿದ್ಯಾರ್ಥಿವೇತನ ಮತ್ತು ಮತ್ತೊಂದು ಹೆಣ್ಣು ಮಕ್ಕಳಿಗೆ ವಿಶೇಷ ವಿದ್ಯಾರ್ಥಿವೇತನ.  ಇದೇ ಡಿಸೆಂಬರ್​ 8ರಿಂದ ಅರ್ಜಿ ಆಹ್ವಾನ ಆರಂಭವಾಗಿದ್ದು, ಡಿಸೆಂಬರ್​ 22ಕ್ಕೆ ಕೊನೆಗೊಳ್ಳಲಿದೆ.  ಹೆಚ್ಚಿನ ಮಾಹಿತಿಗೆ LIC ಯ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಸಲ್ಲಿಕೆಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. 

Tap to resize

Latest Videos

undefined

ನಿವೃತ್ತಿ ಬಳಿಕ 12 ಸಾವಿರ ಪೆನ್ಷನ್‌ ನೀಡುತ್ತೆ ಎಲ್‌ಐಸಿಯ ಈ ಯೋಜನೆ: ಮಾಡಬೇಕಿರುವುದು ಇಷ್ಟೇ...

ಯಾರು ಅರ್ಹರು?
ಸಾಮಾನ್ಯ ವಿದ್ಯಾರ್ಥಿವೇತನ


* 2021 ರಿಂದ 2024ರ ಶೈಕ್ಷಣಿಕ ವರ್ಷಗಳಲ್ಲಿ ಶೇಕಡಾ 60ರಷ್ಟು ಅಂಕಗಳೊಂದಿಗೆ 10ನೇ ಮತ್ತು 12ನೇ ತರಗತಿ (ಅಥವಾ ಸಮಾನ ವೃತ್ತಿಪರ/ಡಿಪ್ಲೊಮಾ) ತೇರ್ಗಡೆಯಾಗಿರಬೇಕು. 
* ಕುಟುಂಬದ ಆದಾಯ ವಾರ್ಷಿಕ ರೂ.2.50 ಲಕ್ಷ ರೂಪಾಯಿ  ಮೀರಿರಬಾರದು. ವೈದ್ಯಕೀಯ, ಇಂಜಿನಿಯರಿಂಗ್ ಅಥವಾ ವೃತ್ತಿಪರ ಕೋರ್ಸ್‌ಗಳಂತಹ ಕ್ಷೇತ್ರಗಳಿಗೆ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಬೇಕು.

ಬಾಲಕಿಯರಿಗೆ ವಿಶೇಷ ವಿದ್ಯಾರ್ಥಿವೇತನ
* ಇನ್ನು, ಬಾಲಕಿಯರಿಗೆ ಜಾರಿಗೊಳಿಸಿರುವ ಸ್ಕಾರಲ್​ಶಿಪ್​ ಅಡಿ: LIC ಸ್ಕಾಲರ್‌ಶಿಪ್ 2024-25 ಮಧ್ಯಂತರ/10+2 ಮಾದರಿ, ವೃತ್ತಿಪರ ಅಥವಾ ಡಿಪ್ಲೊಮಾ ಕೋರ್ಸ್‌ಗಳಿಗೆ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಹತ್ತನೇ ತರಗತಿಯ ನಂತರ ಉನ್ನತ ವ್ಯಾಸಂಗ ಮಾಡುವ ಬಾಲಕಿಯರಿಗೆ ವಾರ್ಷಿಕ ರೂ 15 ಸಾವಿರ ರೂಪಾಯಿ ನೀಡಲಾಗುತ್ತದೆ. ಆದಾಗ್ಯೂ, ವಿದ್ಯಾರ್ಥಿವೇತನವನ್ನು ಎರಡು ವಾರ್ಷಿಕ ಕಂತುಗಳಲ್ಲಿ ತಲಾ 7,500 ರೂ ನೀಡಲಾಗುವುದು. 
* ಈ ವಿದ್ಯಾರ್ಥಿ ವೇತನಕ್ಕೆ ಶೇಕಡಾ 60 ಅಂಕಗಳೊಂದಿಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು (ಅಥವಾ ಸಮಾನ CGPA).
* 2024-25ರ ಶೈಕ್ಷಣಿಕ ವರ್ಷಕ್ಕೆ ಉನ್ನತ ವ್ಯಾಸಂಗದ ಮೊದಲ ವರ್ಷಕ್ಕೆ ದಾಖಲಾಗಿರಬೇಕು. 
* ವಾರ್ಷಿಕ ಕುಟುಂಬದ ಆದಾಯ ರೂ 2.50 ಲಕ್ಷ  ಮೀರಬಾರದು. 

ಅಧಿಕೃತ LIC ವೆಬ್‌ಸೈಟ್ ಮೂಲಕ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು ಮತ್ತು ಸಲ್ಲಿಸಿದ ನಂತರ ಅರ್ಜಿದಾರರು ಸ್ವೀಕೃತಿ ಇಮೇಲ್ ಅನ್ನು ಸ್ವೀಕರಿಸುತ್ತಾರೆ. ವಿದ್ಯಾರ್ಥಿಗಳು ತಮ್ಮ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬೇಕು, ಸಂವಹನಕ್ಕಾಗಿ ಮಾನ್ಯವಾದ ಇ-ಮೇಲ್ ಐಡಿ ಮತ್ತು ಸಂಪರ್ಕ ಸಂಖ್ಯೆಯನ್ನು ಒದಗಿಸಬೇಕು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.  

ಸಿವಿ ಮತ್ತು ರೆಸ್ಯೂಮ್​ ನಡುವಿನ ವ್ಯತ್ಯಾಸವೇನು? ಯಾವ ಸಮಯದಲ್ಲಿ ಯಾವುದು ಸೂಕ್ತ? ಇಲ್ಲಿದೆ ಡಿಟೇಲ್ಸ್​

click me!