ಕರ್ನಾಟಕ ಸರ್ಕಾರವು 2025-26ನೇ ಸಾಲಿನ ಶಾಲಾ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೇಸಿಗೆ ರಜೆ, ದಸರಾ ರಜೆ ಸೇರಿದಂತೆ ಪ್ರಮುಖ ರಜಾದಿನಗಳನ್ನು ಒಳಗೊಂಡಿದೆ. ಸ್ಥಳೀಯ ಹಬ್ಬಗಳ ಆಧಾರದ ಮೇಲೆ ಇಲಾಖೆ ಮಟ್ಟದಲ್ಲಿ ಹೆಚ್ಚುವರಿ ರಜೆಗಳನ್ನು ಘೋಷಿಸಬಹುದು.
ಕರ್ನಾಟಕ ಸರ್ಕಾರವು 2025-26ನೇ ಸಾಲಿನ ರಾಜ್ಯ ಶಾಲಾ ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದೆ. ಈಗಾಗಲೇ ಸರ್ಕಾರಿ ರಜೆಗಳ ಪಟ್ಟಿಯನ್ನು ಬಿಡುಗಡೆಯಾಗಿದ್ದು, ಮುಖ್ಯವಾಗಿ 2025 ಸಾಲಿನ ಶೈಕ್ಷಣಿಕ ವರ್ಷದ ರಜಾ ದಿನಗಳ ಪಟ್ಟಿ ನೀಡಲಾಗಿದೆ. ಬೇಸಿಗೆ ರಜೆ, ದಸರಾ ರಜೆಗಳು ಇದರಲ್ಲಿ ಸೇರಿದೆ.
ಪ್ರತಿ ವರ್ಷವೂ ಆಯಾ ಸರ್ಕಾರಿ ದಿನಗಳನ್ನು ಆಧರಿಸಿ ರಜೆಗಳನ್ನು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಘೋಷಿಸಲಿದೆ. ಇಷ್ಟು ಮಾತ್ರವಲ್ಲದೆ ಸ್ಥಳೀಯ ಹಬ್ಬ, ಕಾರ್ಯಕ್ರಮಗಳನ್ನು ಆಧರಿಸಿ ಇಲಾಖೆ ಮಟ್ಟದಲ್ಲಿ ಕೂಡ ತೀರ್ಮಾನ ತೆಗೆದುಕೊಳ್ಳಬಹುದಾಗಿದೆ.