ಪತ್ರ ಬರೆದು, ಚಿನ್ನದ ಪದಕ ಗೆದ್ದು, ಸ್ವಿಜರ್ಲೆಂಡ್‌ಗೆ ಹೋಗಿ!

By Suvarna News  |  First Published Mar 24, 2021, 4:12 PM IST

ಯುನಿವರ್ಸಲ್ ಪೋಸ್ಟಲ್ ರೈಟಿಂಗ್ ಯೂನಿಯನ್ ಆಯೋಜಿಸಿರುವ ಅಂತಾರಾಷ್ಟ್ರೀಯ ಪತ್ರ ಬರವಣಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಶಾಲಾ ವಿದ್ಯಾರ್ಥಿಗಳನ್ನ ಆಹ್ವಾನಿಸಲಾಗಿದೆ. 15 ವರ್ಷದೊಳಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಮತ್ತು  ಮಕ್ಕಳು ಕೋವಿಡ್ 19 ಅನುಭವದ ಕುರಿತು ಪತ್ರ ಬರೆಯಬೇಕಾಗುತ್ತದೆ.


ಕಳೆದೊಂದು ವರ್ಷದಿಂದ ಮಕ್ಕಳು ಮನೆಗಳಲ್ಲೇ ಇದ್ದು ಮಂಕಾಗಿರಬಹುದು. ಕೊರೊನಾದಿಂದಾಗಿ ಈ ವರ್ಷ ಎಲ್ಲಾ ಸ್ಪರ್ಧೆಗಳಿಂದ ವಂಚಿತರಾಗಿದ್ದಾರೆ. ತಮ್ಮ ಪ್ರತಿಭೆಯನ್ನು ಒರೆ ಹಚ್ಚಲು ಆಗದೇ ಅದೆಷ್ಟೋ ವಿದ್ಯಾರ್ಥಿಗಳಿಗೆ ಬೇಸರವಾಗಿರಬಹುದು. ಆ ಕಾಂಪಿಟೇಷನ್, ಈ ಕಾಂಪಿಟೇಷನ್ ಅಂತ ಯಾವಾಗಲೂ ಚಟುವಟಿಕೆಯಿಂದ ಇರುತ್ತಿದ್ದ ಪ್ರತಿಭಾವಂತ ಮಕ್ಕಳಿಗೆ ಕೊರೊನಾ ನಿಜಕ್ಕೂ ಮಾರಿಯಾಗೇ ಕಾಡಿದೆ.

BSF ಕಾನ್ಸ್‌ಟೇಬಲ್ ಹುದ್ದೆಗಳಿಗೆ 10ನೇ ತರಗತಿ ಪಾಸಾದವರಿಗೆ ಅವಕಾಶ

Tap to resize

Latest Videos

undefined

ಸದ್ಯ ಶಾಲೆಗಳು ಆರಂಭವಾಗಿದ್ರೂ ಮೊದಲಿನಷ್ಟು ಲವಲವಿಕೆಯ ವಾತಾವರಣವಿಲ್ಲ. ಹಾಗಿದ್ರೂ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಪ್ರೋತ್ಸಾಹಿಸಲು ಭಾರತೀಯ ಅಂಚೆ ಇಲಾಖೆ ಮುಂದಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಪತ್ರ ಬರೆಯುವ ಸ್ಪರ್ಧೆಯನ್ನು ಪ್ರಕಟಿಸಿದೆ. ಅದು ತಮ್ಮ ಜೀವಮಾನವಿಡೀ ಮರೆಯಲಾಗಷ್ಟು ಕಹಿ ನೆನಪುಗಳನ್ನ ಕೊಟ್ಟಿರೋ ಕೊರೊನಾ ಬಗ್ಗೆಯೇ ಮಕ್ಕಳು ಪತ್ರ ಬರೆಯಬೇಕಾಗಿದೆ.   

ಯುನಿವರ್ಸಲ್ ಪೋಸ್ಟಲ್ ರೈಟಿಂಗ್ ಯೂನಿಯನ್ ಆಯೋಜಿಸಿರುವ ಅಂತಾರಾಷ್ಟ್ರೀಯ ಪತ್ರ ಬರವಣಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಶಾಲಾ ವಿದ್ಯಾರ್ಥಿಗಳನ್ನ ಆಹ್ವಾನಿಸಲಾಗಿದೆ. ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪ್ರವೇಶ ಪಡೆದವರನ್ನು ಭಾರತದಿಂದ ಅಧಿಕೃತವಾಗಿ ಅಂತರರಾಷ್ಟ್ರೀಯ ಸ್ಪರ್ಧೆಗೆ ಕಳುಹಿಸಲಾಗುವುದು. ವಿಜೇತರಿಗೆ ಪದಕ ಮತ್ತು ಪ್ರಮಾಣಪತ್ರಗಳು ಸಿಗಲಿವೆ. ಅಷ್ಟೇ ಅಲ್ಲ, ಚಿನ್ನದ ಪದಕ ವಿಜೇತರಿಗೆ ಸ್ವಿಟ್ಜರ್‌ಲ್ಯಾಂಡ್‌ನ ಬರ್ನ್‌ನಲ್ಲಿರುವ ಯುನಿವರ್ಸಲ್ ಪೋಸ್ಟಲ್ ಯೂನಿಯನ್ ಪ್ರಧಾನ ಕಚೇರಿಗೆ ಭೇಟಿ ನೀಡಬಹುದು.

ಪತ್ರ ಬರೆಯುವ ಸಂಬಂಧ ಇಂಡಿಯಾ ಪೋಸ್ಟ್ ಹೊರಡಿಸಿರುವ ಸರ್ಕೂಲರ್ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಸ್ಪರ್ಧಿಗಳು ಕೋವಿಡ್19 ಕುರಿತ ಅನುಭವದ ಬಗ್ಗೆ ಕುಟುಂಬದ ಸದಸ್ಯರಿಗೆ ಪತ್ರ ಬರೆಯಬೇಕಾಗುತ್ತದೆ. ಪತ್ರದಲ್ಲಿ ಅಕ್ಷರಗಳ ಮಿತಿ 800 ಪದಗಳಿರಬೇಕು,. ಈ ಸ್ಪರ್ಧಾ ಕಾರ್ಯಕ್ರಮದಲ್ಲಿ 15 ವರ್ಷ ವಯಸ್ಸಿನವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು. ಏಪ್ರಿಲ್ 5 ರೊಳಗೆ ವಿದ್ಯಾರ್ಥಿಗಳು ಪತ್ರವನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಬಿಇಸಿಐಎಲ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಂದಹಾಗೆ ಈ ಸ್ಪರ್ಧೆಯು ಎರಡು ಹಂತಗಳಲ್ಲಿ ನಡೆಯಲಿದೆ. ಸರ್ಕಲ್ ಲೆವೆಲ್‌ನಲ್ಲಿ ಮೂರು ಬಹುಮಾನಗಳಿರುತ್ತವೆ- ಮೊದಲ ಬಹುಮಾನ 25 ಸಾವಿರ ರೂಪಾಯಿ ಜೊತೆಗೆ ಪ್ರಮಾಣ ಪತ್ರ. ದ್ವಿತೀಯ ಬಹುಮಾನ 10 ಸಾವಿರ ರೂ, ಜೊತೆಗೆ ಸರ್ಟಿಫಿಕೇಟ್ ಹಾಗೂ ಮೂರನೇ ಬಹುಮಾನ 5 ಸಾವಿರ ರೂಪಾಯಿ ಜೊತೆಗೆ ಪ್ರಮಾಣ ಪತ್ರ ನೀಡಲಾಗುವುದು.

ನ್ಯಾಷನಲ್ ಲೆವೆಲ್‌ನಲ್ಲಿ ವಿಜೇತರು 50 ಸಾವಿರ ರೂಪಾಯಿ ಬಹುಮಾನ ಹಾಗೂ ಸರ್ಟಿಫಿಕೇಟ್ ಪಡೆಯಲಿದ್ದಾರೆ. ಮೊದಲ ರನ್ನರ್ ಅಪ್‌ಗೆ 25 ಸಾವಿರ ರೂ. ಜೊತೆಗೆ ಪ್ರಮಾಣಪತ್ರ ಹಾಗೂ ಎರಡನೇ ರನ್ನರ್‌ಅಪ್‌ಗೆ 10 ಸಾವಿರ ರೂಪಾಯಿ ಜೊತೆಗೆ ಸರ್ಟಿಫಿಕೇಟ್ ಸಿಗಲಿದೆ.

ಸ್ಪರ್ಧಾರ್ಥಿಗಳು ಅವರ ಹೆಸರು, ಜನ್ಮ ದಿನಾಂಕ ವಿಳಾಸ ಹಾಗೂ ಪೂರ್ಣ  ಅಂಚೆ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು.ಜೊತೆಗೆ ತಮ್ಮ ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಭಾವಚಿತ್ರವನ್ನು ಲಗತ್ತಿಸಬೇಕು, ಗುರುತಿನ ಸಾಕ್ಷಿಗಾಗಿ ಆಧಾರ್ ಕಾರ್ಡ್, ಬರ್ತ್ ಸರ್ಟಿಫಿಕೇಟ್ ಹಾಗೂ ಶಾಲಾ ಸರ್ಟಿಫಿಕೇಟ್ ಅನ್ನು ಒದಗಿಸಬೇಕು.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಎಂಟ್ರಿಗಳನ್ನು ಸ್ಪೀಡ್ ಫೋಸ್ಟ್‌ ಮೂಲಕ ಸಂಬಂಧಿಸಿದ ಪೋಸ್ಟಲ್ ಸರ್ಕಲ್ ಆಫೀಸ್‌ನ ನೋಡಲ್ ಅಧಿಕಾರಿಗೆ ಕಳುಹಿಸಬೇಕು. ಸಹಿ ಮಾಡಿದ ಅಪ್ಲಿಕೇಷನ್ ಫಾರ್ಮ್ ಅನ್ನು ಏಪ್ರಿಲ್ 5ಕ್ಕಿಂತ ಮುಂಚೆಯೇ ಕಳುಹಿಸಬೇಕು.

ಎಂಜಿನಿಯರಿಂಗ್ ಪದವೀಧರರಿಗೆ ಸೇನೆಯಲ್ಲಿ ಅವಕಾಶ, ಆಸಕ್ತಿ ಇದ್ದೋರು ಅಪ್ಲೈ ಮಾಡಿ

ಪತ್ರವು ಇಂಗ್ಲೀಷ್ ಅಥವಾ ಸಂವಿಧಾನದ ಎಂಟನೇ ಶೆಡ್ಯೂಲ್ನಲ್ಲಿ ಪಟ್ಟಿ ಮಾಡಲಾದ ಯಾವುದೇ ಭಾಷೆಯಲ್ಲಿ 800 ಪದಗಳನ್ನು ಮೀರಬಾರದು.

ಯಾವುದೇ ಗೊಂದಲಗಳಿದ್ದಲ್ಲಿ ಅವರು ತಮ್ಮ ಮುಖ್ಯ ಪೋಸ್ಟ್ ಮಾಸ್ಟರ್ ಅಥವಾ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ www.indiapost.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.

click me!