ಕುವೆಂಪು ವಿವಿ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜವೇ? ಚಾನ್ಸಲರ್ ಸ್ಪಷ್ಟನೆ

Published : Mar 23, 2021, 04:10 PM IST
ಕುವೆಂಪು ವಿವಿ ಬಗ್ಗೆ  ಹರಿದಾಡುತ್ತಿರುವ ಸುದ್ದಿ ನಿಜವೇ? ಚಾನ್ಸಲರ್ ಸ್ಪಷ್ಟನೆ

ಸಾರಾಂಶ

ಕುವೆಂಪು ವಿವಿ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ  ಬಿತ್ತರವಾಗಿರುವುದು ಠಾಣೆಯಲ್ಲಿ ದೂರು ದಾಖಲಾಗಿರುವುದು ಸತ್ಯಕ್ಕೆ ದೂರವಾದದ್ದು/ ಕೆಲ ಪಟ್ಟಭದ್ರ ಹಿತಾಸಕ್ತಿ ಸಂಘಟನೆಗಳು ವಿವಿ ಹೆಸರು ಹಾಳುಮಾಡಲು ಯತ್ನಿಸುತ್ತಿವೆ ಕುವೆಂಪು ವಿವಿ ಕುಲಪತಿ ಪ್ರೊ.ವೀರಭದ್ರಪ್ಪ ಹೇಳಿಕೆ/  ಮಾಧ್ಯಮಗಳಲ್ಲಿ ಡಿಜಿಟಲೈಜೇಷನ್ ಮತ್ತು ಲಾಗಿಸಿಸ್ ನಲ್ಲಿ, ಗೌಪ್ಯತೆ ಕಾಪಾಡುವಲ್ಲಿ ಕೆಲ ಪ್ರಾಧ್ಯಾಪಕರು ವಿಫಲ, ವಂಚನೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪ

ಶಿವಮೊಗ್ಗ(ಮಾ. 23)  ಕುವೆಂಪು ವಿವಿ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ  ಬಿತ್ತರವಾಗಿರುವ ವಿಚಾರಗಳು, ಠಾಣೆಯಲ್ಲಿ ದೂರು ದಾಖಲಾಗಿರುವುದು ಸತ್ಯಕ್ಕೆ ದೂರವಾದದ್ದು. ಕೆಲ ಪಟ್ಟಭದ್ರ ಹಿತಾಸಕ್ತಿ ಸಂಘಟನೆಗಳು ವಿವಿ ಹೆಸರು ಹಾಳುಮಾಡಲು ಯತ್ನಿಸುತ್ತಿವೆ ಎಂದು  ಕುವೆಂಪು ಚಾನ್ಸಲರ್ ಪ್ರೊ.ವೀರಭದ್ರಪ್ಪ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮಗಳಲ್ಲಿ ಡಿಜಿಟಲೈಜೇಷನ್ ಮತ್ತು ಲಾಗಿಸಿಸ್ ನಲ್ಲಿ, ಗೌಪ್ಯತೆ ಕಾಪಾಡುವಲ್ಲಿ ಕೆಲ ಪ್ರಾಧ್ಯಾಪಕರು ವಿಫಲ, ವಂಚನೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪ ಬಂದಿದೆ ವಿವಿ 35 ಉಪನ್ಯಾಸಕರ ವಿರುದ್ಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂಬುದು ಸತ್ಯಕ್ಕೆ ದೂರವಾಗಿದೆ. ಪರೀಕ್ಷಾಂಗ ಮೌಲ್ಯಮಾಪನದ ರಿಜಿಸ್ಟ್ರಾರ್ ಭೋಜ್ಯನಾಯ್ಕ, ಹಣಕಾಸು ಅಧಿಕಾರಿಯಾಗಿದ್ದ ಕೇಶವಯ್ಯ, ಶಿವಣ್ಣ, ಪರೀಕ್ಷಾಂಗ ಉಪರಿಜಿಸ್ಟ್ರಾರ್ ಯೋಗೇಂದ್ರ ಇವರ ವಿರುದ್ಧ ದೂರು ದಾಖಲಾಗಿದೆ ಎನ್ನುವುದಕ್ಕೂ ಆಧಾರ ಇಲ್ಲ ಎಂದು ತಿಳಿಸಿದ್ದಾರೆ.

ದೇಶದಲ್ಲಿಯೇ ಅತ್ಯುತ್ತಮ ಶ್ರೇಯಾಂಕ  ಪಡೆದುಕೊಂಡ ಕುವೆಂಪು ವಿವಿ

ನ್ಯಾಯಾಲಯದ ಮೂಲಕ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪಿಸಿಆರ್ ದೂರು ದಾಖಲಾಗಿದೆ. ಡಾಟಾ ಗಣೀಕೀಕೃತ , ಇ-ವೆರಿಫಿಕೇಷನ್ ಗುತ್ತಿಗೆಯನ್ನ ಮೈಸೂರಿನ ಲಾಜಿಸ್ಟಿಕ್ ರಾಮನ್ ಕಂಪ್ಯೂಟರ್ ಸೆಲ್ಯೂಷನ್ ಸಂಸ್ಥೆಗೆ ನೀಡಲಾಗಿತ್ತು. ಸರಿಯಾಗಿ ಗಣಕೀಕರಣ ಮಾಡದೆ 1 ಕೋಟಿ 27 ಲಕ್ಷ ದ 77 ಸಾವಿರ ರೂ.ನ ವಂಚನೆ  ಎಂದು ಪಿಸಿಆರ್ ಕೇಸ್  ದಾಖಲಾಗಿದೆ ಎಂಬ ಆರೋಪ ದೊಡ್ಡ ಮಟ್ಟದ ಸುದ್ದಿಯಾಗಿತ್ತು.

 

 

PREV
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ