
ಡೆಹ್ರಾಡೂನ್‌ನಲ್ಲಿ ಮಂಜು ಮುಸುಕಿದ ಸುಂದರ ಬೆಟ್ಟಗಳ ಮಧ್ಯೆ ಪ್ರಕೃತಿ ರಮಣೀಯವಾಗಿ ನೆಲೆಗೊಂಡಿರುವ ವಿಕ್ಟೋರಿಯನ್ ಯುಗದ ವಾಸ್ತುಶಿಲ್ಪ ಹಾಗೂ ಗೇಬಲ್ಡ್ ಮೇಲ್ಛಾವಣಿಗಳಿಂದ ಕಂಗೊಳಿಸುವ ಈ ಸಂಸ್ಥೆ, ಭಾರತದ ಪ್ರಸಿದ್ಧ ಬಾಲಕಿಯರ ಬೋರ್ಡಿಂಗ್ ಶಾಲೆಯಾಗಿದೆ. ರಾಜಕೀಯ ಪರಂಪರೆಯ ರಾಜಮನೆತನಗಳಿಂದ ಹಿಡಿದು ಬಾಲಿವುಡ್‌ನ ಸ್ಟಾರ್ ಕುಟುಂಬಗಳ ತನಕ ಅನೇಕ ಗಣ್ಯ ವ್ಯಕ್ತಿತ್ವಗಳಿಗೆ ಶಿಕ್ಷಣ ನೀಡಿರುವ ಈ ಶಾಲೆ, ದೇಶದ ಪ್ರಮುಖ ಸಂಸ್ಥೆಗಳ ಪೈಕಿ ಒಂದಾಗಿದೆ. ಅದುವೇ 1957ರಲ್ಲಿ ಸ್ಥಾಪಿತವಾಗಿರುವ ಪ್ರಸಿದ್ಧ ಮತ್ತು ಪ್ರತಿಷ್ಠಿತ ವೆಲ್ಹ್ಯಾಮ್ ಬಾಲಕಿಯರ ಶಾಲೆ .
ವೆಲ್ಹ್ಯಾಮ್ ಬಾಲಕಿಯರ ಶಾಲೆ ಖಾಸಗಿ ಬೋರ್ಡಿಂಗ್ ಶಾಲೆಯಾಗಿದ್ದು, ಮೊದಲು ವೆಲ್ಹ್ಯಾಮ್ ಬಾಲಕರ ಶಾಲೆಯನ್ನು ಸ್ಥಾಪಿಸಿದ್ದ ಹರ್ಸಿಲಿಯಾ ಸೂಸಿ ಒಲಿಫಾಂಟ್ ಅವರಿಂದ ಸ್ಥಾಪಿತವಾಯಿತು. ಈ ಶಾಲೆಗೆ ಹೆಸರು ಇಂಗ್ಲೆಂಡಿನ ನಾಟಿಂಗ್‌ಹ್ಯಾಮ್‌ಶೈರ್‌ನಲ್ಲಿರುವ ಒಲಿಫಾಂಟ್ ಅವರ ತವರು ಗ್ರಾಮ ವೆಲ್ಹ್ಯಾಮ್ ಅನ್ನು ಆಧರಿಸಿದೆ.
ಶಾಲೆಯ ಧ್ಯೇಯವಾಕ್ಯ ಸಂಸ್ಕೃತದಲ್ಲಿ “ಅರ್ಥ ಶಾಂತಿ ಫಲ ವಿದ್ಯಾ” ಎಂದು ಹೊಂದಿದ್ದು, ಇದನ್ನು ಇಂಗ್ಲಿಷ್‌ನಲ್ಲಿ “The aim of education is to bring peace” ಎಂದು ಅನುವಾದಿಸಬಹುದು. ಸುಮಾರು 12 ಎಕರೆ ವ್ಯಾಪ್ತಿಯಲ್ಲಿ ಹರಡಿರುವ ಈ ಶಾಲೆಗೆ ಪ್ರಸ್ತುತ ವಿಭಾ ಕಪೂರ್ ನೇತೃತ್ವ ವಹಿಸಿದ್ದಾರೆ. ಸಂಸ್ಥೆಯ ಸ್ಥಾಪನೆಯಾಗುವ ವೇಳೆಯಲ್ಲಿ ಕೇವಲ 10 ವಿದ್ಯಾರ್ಥಿಗಳಿದ್ದಾಗ, ಪ್ರಥಮ ಪ್ರಾಂಶುಪಾಲರಾಗಿದ್ದವರು ಗ್ರೇಸ್ ಮೇರಿ ಲಿನ್ನೆಲ್.
ವೆಲ್ಹ್ಯಾಮ್ ಬಾಲಕಿಯರ ಶಾಲೆ ಪೂರಕವಾಗಿ ನಾಯಕತ್ವ, ಸೃಜನಶೀಲತೆ ಮತ್ತು ಶಿಸ್ತಿಗೆ ತೊಟ್ಟಿಲಾಗಿದೆ. ಶಾಲೆಯ ಹಳೆಯ ವಿದ್ಯಾರ್ಥಿಗಳ ಪಟ್ಟಿ, ಆಧುನಿಕ ಭಾರತದ ಅನೇಕ ಗಣ್ಯ ವ್ಯಕ್ತಿತ್ವಗಳನ್ನು ಒಳಗೊಂಡಿದೆ. ಉದಾಹರಣೆಗೆ ಪ್ರಮುಖ ಕಾಂಗ್ರೆಸ್ ನಾಯಕಿ ಮತ್ತು ಭಾರತದ ರಾಜಕೀಯ ಕ್ಷೇತ್ರದ ಕುಟುಂಬದ ಸದಸ್ಯೆ ಪ್ರಿಯಾಂಕಾ ಗಾಂಧಿ ವಾದ್ರಾ, ಬಾಲಿವುಡ್‌ನ ಪ್ರಸಿದ್ಧ ನಟಿ ಮತ್ತು ಕಪೂರ್ ಸಿನಿಮಾ ಕುಟುಂಬದ ಸದಸ್ಯೆ ಕರೀನಾ ಕಪೂರ್ ಖಾನ್ ಸೇರಿದಂತೆ ಅನೇಕರು ತಮ್ಮ ಬಾಲ್ಯದ ದಶಕವನ್ನು ಈ ಶಾಲೆಯಲ್ಲಿ ಕಳೆದಿದ್ದಾರೆ.
ಕ್ಯಾಂಪಸ್ ಬ್ರಿಟಿಷ್ ಯುಗದ ವಿನ್ಯಾಸವನ್ನು ಕಾಯ್ದುಕೊಂಡಿದ್ದು, ಗೇಬಲ್ಡ್ ಛಾವಣಿಗಳು, ಕಮಾನಿನ ವರಾಂಡಾಗಳು ಮತ್ತು ವಿಸ್ತಾರವಾದ ಹಸಿರು ಲಾನ್‌ಗಳು ಕಣ್ಣು ಹಾಯಿಸುವಂತೆ ಹೊಳೆಯುತ್ತವೆ. ಆದರೆ, ಈ ಹಿಂದಿನ ಶೈಲಿ, 21ನೇ ಶತಮಾನದ ಶೈಕ್ಷಣಿಕ ಅಗತ್ಯಗಳಿಗೆ ತಕ್ಕಂತೆ ನವೀಕರಿಸಲಾಗಿದೆ. ವೆಲ್ಹ್ಯಾಮ್‌ನಲ್ಲಿ ವಿದ್ಯಾರ್ಥಿಗಳಿಗೆ ಸಂಪ್ರದಾಯ ಮತ್ತು ಆಧುನಿಕತೆಯ ಸಮನ್ವಯವನ್ನು ಕಲಿಸಲಾಗುತ್ತದೆ. ಪಾಠ್ಯಕ್ರಮ ಮಾತ್ರವಲ್ಲದೆ ರಂಗಭೂಮಿ, ಚರ್ಚೆ, ಸಂಗೀತ ಮತ್ತು ಕ್ರೀಡೆಯಲ್ಲಿಯೂ ಶ್ರೇಷ್ಠತೆಯನ್ನು ಸಾಧಿಸಲು ಪ್ರೋತ್ಸಾಹ ನೀಡಲಾಗುತ್ತದೆ.
ವೇಲ್ಹ್ಯಾಮ್ ಬಾಲಕಿಯರ ಶಾಲೆ 11ನೇ ಮತ್ತು 12ನೇ ತರಗತಿಯಲ್ಲಿ 30ಕ್ಕಿಂತ ಹೆಚ್ಚು ವಿಷಯ ಸಂಯೋಜನೆಗಳನ್ನು ನೀಡುತ್ತದೆ. ಜೊತೆಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿನಿಮಯ ಕಾರ್ಯಕ್ರಮಗಳು, ಶೈಕ್ಷಣಿಕ ಪ್ರವಾಸಗಳು, ಸಮುದಾಯ ಸೇವಾ ಯೋಜನೆಗಳು ಹಾಗೂ ಚಾರಣ ಕ್ಯಾಂಪುಗಳು ನಿರಂತರವಾಗಿ ನಡೆಯುತ್ತವೆ.
ಕಲೆ: ಮಧು ಜೈನ್ (ಜವಳಿ ವಿನ್ಯಾಸಕ), ಸ್ಮೃತಿ ಮೊರಾರ್ಕಾ (ಕೈನಿಯೋಜನೆಯ ಪುನರುಜ್ಜೀವನಕಾರ್ತಿ), ಮೃಣಾಲಿನಿ ಮುಖರ್ಜಿ (ಕಲಾವಿದೆ), ಲೈಲಾ ತ್ಯಾಬ್ಜಿ (ದಸ್ತಕರ್ ಸಹ-ಸಂಸ್ಥಾಪಕಿ)
ವ್ಯಾಪಾರ: ದೇವಿಕಾ ಬುಲ್ಚಂದಾನಿ (ಗ್ಲೋಬಲ್ ಸಿಇಒ, ಓಗಿಲ್ವಿ), ದೇವಯಾನಿ ರಾಣಾ (ಕೋಕಾ-ಕೋಲಾ ಇಂಡಿಯಾ ಉಪಾಧ್ಯಕ್ಷೆ)
ಚಲನಚಿತ್ರ: ಕರೀನಾ ಕಪೂರ್ (ನಟಿ), ನಿತ್ಯ ಮೆಹ್ರಾ (ನಿರ್ದೇಶಕಿ ಮತ್ತು ಚಿತ್ರಕಥೆಗಾರ್ತಿ), ದೀಪಾ ಮೆಹ್ತಾ (ನಿರ್ದೇಶಕಿ), ಶಿವಾನಿ ರಾವತ್ (ನಿರ್ಮಾಪಕಿ), ಸುಖಮಣಿ ಸದನಾ (ನಟಿ ಮತ್ತು ಚಿತ್ರಕಥೆಗಾರ್ತಿ), ಪ್ರಿಯಾ ಸೇಠ್ (ಛಾಯಾಗ್ರಾಹಕಿ), ಅಲಂಕೃತ ಶ್ರೀವಾಸ್ತವ (ಚಿತ್ರಕಥೆಗಾರ್ತಿ ಮತ್ತು ನಿರ್ದೇಶಕಿ)
ಭಾರತೀಯ ಆಡಳಿತ ಸೇವೆ: ನೀರಾ ಯಾದವ್ (ಐಎಎಸ್ ಅಧಿಕಾರಿ)
ಪತ್ರಿಕೋದ್ಯಮ: ರಾಧಿಕಾ ರಾಯ್ (NDTV ಸಹ-ಸಂಸ್ಥಾಪಕಿ), ತವ್ಲೀನ್ ಸಿಂಗ್ (ಪತ್ರಕರ್ತೆ, ಇಂಡಿಯನ್ ಎಕ್ಸ್‌ಪ್ರೆಸ್), ಮಧು ಟ್ರೆಹಾನ್ (ಪತ್ರಕರ್ತ್ತಿ, ನ್ಯೂಸ್ ಲಾಂಡ್ರಿ ಸಹ-ಸಂಸ್ಥಾಪಕಿ)
ಕಾನೂನು: ಮಾಳವಿಕಾ ರಾಜಕೋಟಿಯಾ (ವಕೀಲೆ ಮತ್ತು ಕಾರ್ಯಕರ್ತೆ)
ಸಾಹಿತ್ಯ: ಅದ್ವೈತ ಕಲಾ (ಕಾದಂಬರಿಕಾರ್ತಿ), ದೀಪ್ತಿ ಕಪೂರ್ (ಕಾದಂಬರಿಕಾರ್ತಿ)
ರಾಜಕೀಯ ಮತ್ತು ಕ್ರಿಯಾಶೀಲತೆ: ಸುಭಾಷಿಣಿ ಅಲಿ (AIDWA ಅಧ್ಯಕ್ಷೆ), ರೇಣುಕಾ ಚೌಧರಿ (ರಾಜ್ಯಸಭಾ ಸದಸ್ಯೆ), ಪ್ರಿಯಾಂಕಾ ಗಾಂಧಿ (ರಾಜಕಾರಣಿ), ಬೃಂದಾ ಕಾರಾಟ್ (ಸಂಸದೆ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್)), ಮೀರಾ ಕುಮಾರ್ (ಮಾಜಿ ರಾಷ್ಟ್ರಪತಿ ಅಭ್ಯರ್ಥಿ ಮತ್ತು ಲೋಕಸಭೆಯ ಪ್ರಥಮ ಮಹಿಳೆ ಸ್ಪೀಕರ್), ಮಾಲಾ ಸೇನ್ (ಲೇಖಕಿ ಮತ್ತು ಕಾರ್ಯಕರ್ತೆ), ಅಂಬಿಕಾ ಸೋನಿ (ರಾಜಕಾರಣಿ)
ಕ್ರೀಡೆ: ಜ್ಯೋತಿ ಆನ್ ಬರೆಟ್ (ಫುಟ್ಬಾಲ್ ಆಟಗಾರ್ತಿ)
ಇದೇ ವೆಲ್ಹ್ಯಾಮ್ ಬಾಲಕಿಯರ ಶಾಲೆಯ ಅದ್ಭುತ ಪರಂಪರೆ ಮತ್ತು ಯಶಸ್ವಿ ಹಳೆಯ ವಿದ್ಯಾರ್ಥಿಗಳ ಪಟ್ಟಿ, ಭಾರತದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಅಮೂಲ್ಯ ಕೊಡುಗೆಗೆ ಸಾಕ್ಷಿ!