ಕುವೆಂಪು ವಿವಿಗೆ ದೇಶದಲ್ಲಿ 83 ರಾಜ್ಯದಲ್ಲಿ 3ನೇ ಸ್ಥಾನ

By Suvarna News  |  First Published Sep 10, 2021, 10:32 AM IST
  • ದೇಶದಲ್ಲಿ ಕುವೆಂಪು ವಿವಿಗೆ 83 ನೇ ಸ್ಥಾನ ದೊರಕಿದೆ. ರಾಜ್ಯದಲ್ಲಿ 3 ನೇ ಸ್ಥಾನವನ್ನು ವಿಶ್ವವಿದ್ಯಾಲಯ ಪಡೆದುಕೊಂಡಿದೆ.
  • ಕೇಂದ್ರ ಸರ್ಕಾರ ನಿನ್ನೆ ಬಿಡುಗಡೆ ಮಾಡಿರುವ ನೂತನ ಎನ್‌ಐಆರ್‌ಎಫ್ ( ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು ) ರ‍್ಯಾಂಕಿಂಗ್

ಶಿವಮೊಗ್ಗ (ಸೆ.10):  ದೇಶದಲ್ಲಿ ಕುವೆಂಪು ವಿವಿಗೆ 83 ನೇ ಸ್ಥಾನ ದೊರಕಿದೆ. ರಾಜ್ಯದಲ್ಲಿ 3 ನೇ ಸ್ಥಾನವನ್ನು ವಿಶ್ವವಿದ್ಯಾಲಯ ಪಡೆದುಕೊಂಡಿದೆ. 

ಕೇಂದ್ರ ಸರ್ಕಾರ ನಿನ್ನೆ ಬಿಡುಗಡೆ ಮಾಡಿರುವ ನೂತನ ಎನ್‌ಐಆರ್‌ಎಫ್ ( ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು ) ರ‍್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ

Latest Videos

undefined

ದೇಶದ ನೂರು ವಿಶ್ವವಿದ್ಯಾಲಯಗಳಲ್ಲಿ ಕುವೆಂಪು ವಿವಿ 81 ಸ್ಥಾನ ಪಡೆದಿದೆ.   ಬೋಧನೆ , ಕಲಿಕೆ , ಸಂಪನ್ಮೂಲ ಸಂಗ್ರಹ , ಸಂಶೋಧನೆ ಮತ್ತು ವೃತ್ತಿಪರತೆ , ಫಲಿತಾಂಶ , ಜನರನ್ನು ತಲುಪುವುದು ಹಾಗೂ ಒಳಗೊಳ್ಳುವ ರೀತಿ. ಪ್ರಮುಖ ಐದು ಅಂಶಗಳನ್ನು ಆಧಾರವಾಗಿಟ್ಟುಕೊಂಡು ಎನ್‌ಐಆರ್‌ಎಫ್  ರ‍್ಯಾಂಕಿಂಗ್ ನೀಡುತ್ತದೆ.

ಶಿವಮೊಗ್ಗದ ಕುವೆಂಪು ವಿವಿಗೆ ಮೊದಲ ಸ್ಥಾನ

2021ನೇ ಸಾಲಿನಲ್ಲಿ ಕುವೆಂಪು ವಿವಿ ಹಿಂದಿನ ರ‍್ಯಾಂಕಿಂಗ್ ಕ್ಕಿಂತ 8 ಸ್ಥಾನದಲ್ಲಿ ಕುಸಿತ ಕಂಡಿದೆ. 2020 ರಲ್ಲಿ 42.45 ಅಂಕಗಳೊಂದಿಗೆ ರ‍್ಯಾಂಕಿಂಗ್ ಪಟ್ಟಿಯಲ್ಲಿ 73 ನೇ ಸ್ಥಾನ ಪಡೆದಿದ್ದ ಕುವೆಂಪು ವಿವಿ ಪ್ರಸಕ್ತ ಸಾಲಿನಲ್ಲಿ 40.40 ( ಕಳೆದ ಬಾರಿಗಿಂತ 2.5 ಅಂಕ ಕಡಿಮೆ ) ಅಂಕದೊಂದಿಗೆ 81ನೇ ಸ್ಥಾನ ಪಡೆದಿದೆ. 

ಆದರೆ ಸತತ ನಾಲ್ಕನೇ ವರ್ಷವೂ ಟಾಪ್ ನೂರರೊಳಗೆ ಸ್ಥಾನ ಪಡೆದಿದೆ. 2017 ರಲ್ಲಿ 150 ರಿಂದ 200ರ ವರ್ಗದಲ್ಲಿ ಸ್ಥಾನ ಪಡೆದಿದ್ದ ವಿವಿ 2018 ರಲ್ಲಿ ಭಾರಿ ಜಿಗಿತ ಕಂಡು 78 ನೇ ಸ್ಥಾನಕ್ಕೇರಿತ್ತು. 

2019 ಮತ್ತು 2020 ರಲ್ಲಿ 73 ನೇ ಸ್ಥಾನ ಪಡೆದಿತ್ತು.  ಇದೀಗ ರ‍್ಯಾಂಕಿಂಗ್ ಪಟ್ಟಿಯಲ್ಲಿ ವಿವಿ ಕುಸಿತ ಕಂಡಿದೆ.

click me!