ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ವರದಿಯನ್ನು ಕಳುಹಿಸಿದ್ದು, ರಾಜ್ಯದಲ್ಲಿ ಶಾಲೆ ಓಪನ್ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುವಂತೆ ತಿಳಿಸಿದೆ
ಬೆಂಗಳೂರು, (ಅ.08) : ಕೊರೋನಾ ಸಂಕಷ್ಟದ ಭೀತಿಯ ನಡುವೆಯೂ ಈ ವರ್ಷ ನಮ್ಮ ಮಕ್ಕಳು ಶಾಲೆಗೆ ಹೋಗದೇ ಇದ್ದರೂ ಪರವಾಗಿಲ್ಲ. ಕೊರೋನಾ ರೋಗಕ್ಕೆ ತುತ್ತಾಗಿ ಮಕ್ಕಳು ತೊಂದರೆ ಅನುಭವಿಸೋದು ಬೇಡ. ಸದ್ಯಕ್ಕೆ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭವಾಗೋದು ಬೇಡ ಅಂತ ಅನೇಕ ಪೋಷಕರು, ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.
ಆದ್ರೆ,, ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಮಾತ್ರ, ಶಾಲೆ ಓಪನ್ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಶಾಲೆ-ಕಾಲೇಜು ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್: ಹೊಸ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ
ಈ ಕುರಿತಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಹೊರಡಿಸಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆಗೆ ಪತ್ರ ಬರೆದಿದೆ. ಈಗಾಗಲೇ ತಜ್ಞರು ಸರ್ಕಾರಕ್ಕೆ ಸಲ್ಲಿಸಿರುವ ಅಂಶಗಳನ್ನೇ ಮಕ್ಕಳ ಹಕ್ಕುಗಳ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಪತ್ರದಲ್ಲಿ ಮಾರ್ಗಸೂಚಿಗಳನ್ನ ಸರಿಯಾಗಿ ಅನುಷ್ಠಾನ ಗೊಳಿಸುವಂತೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ.
ಮಕ್ಕಳ ಆಯೋಗ ಹಾಗೂ ಶಿಕ್ಷಣ ತಜ್ಞರ ಶಿಫಾರಸ್ಸುಗಳು
1. ಲಭ್ಯವಿರೋ ಅಂಶದ ಪ್ರಕಾರ ,ಹಾಗೂ ವರದಿಯ ಪ್ರಕಾರ ಶಾಲೆಗಳನ್ನು ತೆರೆಯಬಹುದು..
2.ಕೋವಿಡ್ ೧೯ ಬಗೆಗಿನ ಅಗತ್ಯ ಮುನ್ನೆಚ್ಚರಿಕಾ ಸಲಕರಣೆಗಳನ್ನ ನೀಡುವುದು
3.ಕೈತೊಳೆಯಲು ಸಾಬೂನು ನಿರಂತರ ಶುಚಿ ನೀರಿನ ವ್ಯವಸ್ಥೆ ಮಾಡುವುದು
4.ಎಲ್ಲಾ ಮಕ್ಕಳಿಗೂ ಮಾಸ್ಕ್ ನೀಡುವುದು ೧೦ ವರ್ಷಕ್ಕಿಂತ ಕೆಳಗಿರೋ ಮಕ್ಕಳಿಗೆ ಅಗತ್ಯ ಮಾಸ್ಕ್ ವಿತರಿಸುವುದು.
5.ಶಾಲಾ ಆವರಣವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡುವುದು.
6.ಕಟ್ಟುನಿಟ್ಟಾಗಿ ದೈಹಿಕ ಅಂತರ ಕಾಪಾಡುವಂತೆ ಅರಿವು ಮೂಡಿಸುವುದು.
ಮಕ್ಕಳಿಗೆ ನೀಡಬೇಕಾದ ಅವಶ್ಯಕ ಪೂರೈಕೆಗಳು
1.ಮಕ್ಕಳಿಗೆ ಶಾಲೆಯಲ್ಲಿ ದಿನನಿತ್ಯ ಪೌಷ್ಟಿಕ ಆಹಾರ, ಹಾಗೂ ಬೆಳಗ್ಗಿನ ಬಿಸಿ ಹಾಲು ವಿತರಣೆ ಮಾಡ್ಬೇಕು
2.ಉಚಿತ ಕೋವಿಡ್ ಎಚ್ಚರಿಕಾ ಸಾಧನ ಪೂರೈಸಬೇಕು
3.ಶಾಲಾ ಎಲ್ಲಾ ಮಕ್ಕಳಿಗೆ ಬಿಸಿ ಕುಡಿಯುವ ನೀರಿನ ವ್ಯವಸ್ಥೆ ಆಗ್ಬೇಕು
4.ಆಹಾರದ ಜೊತೆಗೆ ರೋಗ ನಿರೋಧಕ ವಿಟಮಿನ್ ಮಾತ್ರೆಗಳನ್ನು ನೀಡ್ಬೇಕು
5.ಎಲ್ಲಾ ಮಕ್ಕಳಿಗೆ ನಿರಂತರವಾಗಿ ಆರೋಗ್ಯ ತಪಾಸಣೆ ಮಾಡ್ಬೇಕು
6.ಶಿಕ್ಷಕರಿಗೆ, ಮಕ್ಕಳಿಗೆ ಸೋಂಕು ಕಂಡು ಬಂದಲ್ಲಿ ತಕ್ಷಣವೇ ವೈದ್ಯಕೀಯ ಸೇವೆ ಲಭ್ಯವಿರಬೇಕು
7.ಮಕ್ಳಳ ಆರೋಗ್ಯ ವಿಚಾರ SDMC ಹಾಗೂ ತಾಲೂಕಿನ ಶಿಕ್ಷಣ ಅಧಿಕಾರಿ ನೋಡ್ಕೊಬೇಕು
ಶಾಲೆಗಳ ಪ್ರಾರಂಭ ಹಾಗೂ ಶೈಕ್ಷಣಿಕ ನೀತಿ
1. 2020-21 ಪರೀಕ್ಷಾ ರಹಿತ ಕಲಿಕಾ ವರ್ಷವೆಂದು ಘೋಷಿಸಬೇಕು
2..ಮೂವತ್ತು ಕ್ಕಿಂತ ಕಡಿಮೆ ಮಕ್ಕಳಿರೋ ಸರ್ಕಾರಿ ಹಿರಿಯ ಕಿರಿಯ ಶಾಲೆಗಳನ್ನ ಪ್ರಾರಂಭಿಸಬೇಕು
3. ಈ ಶಾಲೆಗಳು ಮೊದಲ ೧೫ ದಿನ ಅರ್ಧ ದಿನ ಕಾರ್ಯನಿರ್ವಹಿಸಬೇಕು
4. ಕಿರಿಯ ಪ್ರಾಥಮಿಕ ಶಾಲೆಗಳನ್ನ ಶೀಘ್ರವಾಗಿ ಪ್ರಾರಂಭಿಸಬೇಕು
5.ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿರೋ ಶಾಲೆಗಳನ್ನ ಪಾಳಿಪದ್ದತಿಯಲ್ಲಿ ಪ್ರಾರಂಭಿಸಬೇಕು
6..ವಿವಿರವಾದ ಮಾರ್ಗಸೂಚಿಗಳನ್ನ ಶಾಲೆ ತೆರೆದ ನಂತರ ಕಾಲ ಕಾಲಕ್ಕೆ ಅಗತ್ಯಕ್ಕೆ ತಕ್ಕಂತೆ ರೂಪಿಸಬಹುದು.