ಬೆಂಗಳೂರು(ಅ.24): ಕೆಪಿಸಿಸಿ(KPCCಕಚೇರಿಯಲ್ಲಿ ಅಧ್ಯಕ್ಷರ ಬಗ್ಗೆ ಮಾಧ್ಯಮ ಸಮನ್ವಯಕಾರ ಸಲೀಂ ಅವರೊಂದಿಗೆ ನಡೆದಿದ್ದ ಸಂಭಾಷಣೆ ಕುರಿತು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ನೋಟಿಸ್‌ಗೆ ಉತ್ತರ ನೀಡಿದ್ದಾರೆ. ಮೇಲ್ನೋಟಕ್ಕೆ ಉಗ್ರಪ್ಪ ಏನೂ ಮಾತನಾಡಿಲ್ಲ ಎಂದು ರಾಜ್ಯ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್(Rehman khan) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾತುಕತೆ ವೇಳೆ ಉಗ್ರಪ್ಪ ಅವರು ಸಲೀಂ ಅವರ ಮಾತಿಗೆ ನಕ್ಕಿದ್ದು, ನಾವೇ ಡಿ.ಕೆ.ಶಿವಕುಮಾರ್(DK Shivakumar) ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದಾಗಿ ಹೇಳಿದ್ದಾರೆ. ಅದೇನೂ ದೊಡ್ಡ ತಪ್ಪಲ್ಲ ಎಂದರು.
undefined
ಎಲ್‌ಕೆಜಿ, ಯುಕೆಜಿ ಆರಂಭಕ್ಕೂ ಚಿಂತನೆ: ಸಚಿವ ನಾಗೇಶ್
ಇದೇ ವೇಳೆ, ಸಲೀಂ ಮಾತುಗಳು ಸ್ಪಷ್ಟವಾಗಿದ್ದು, ಲಘು ದಾಟಿಯಲ್ಲಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಉಗ್ರಪ್ಪ ಅವರು ಈ ಬಗ್ಗೆ ಮುಚ್ಚಿದ ಲಕೋಟೆಯಲ್ಲಿ ಉತ್ತರ ನೀಡಿದ್ದು, ನಾವು ಇನ್ನೂ ನೋಡಿಲ್ಲ. ವಿ.ಎಸ್.ಉಗ್ರಪ್ಪ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದು ಎಐಸಿಸಿಗೆ ಬಿಟ್ಟವಿಚಾರ ಎಂದು ಸ್ಪಷ್ಟಪಡಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಉಗ್ರಪ್ಪ ನೀಡಿದ ಉತ್ತರದಲ್ಲಿ ಏನಿದೆ ಎಂಬುದನ್ನು ಬಹಿರಂಗಪಡಿಸುವುದಿಲ್ಲ. ಸದ್ಯದಲ್ಲೇ ಶಿಸ್ತು ಸಮಿತಿ ಸಭೆ ನಡೆಸಿ ಈ ಉತ್ತರವನ್ನು ಸಭೆ ಮುಂದಿಟ್ಟು ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.