ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಸಚಿವ ಶ್ರೀನಿವಾಸ್​ ಪೂಜಾರಿ

By Suvarna News  |  First Published Oct 12, 2021, 6:17 PM IST

* ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಸಚಿವ ಶ್ರೀನಿವಾಸ್​ ಪೂಜಾರಿ
* ವಿದ್ಯಾರ್ಥಿ ವೇತನ ಬಂದಿಲ್ಲವೆಂದು ಪರಿತಪಿಸುತ್ತಿದ್ದವರಿಗೆ ಗುಡ್‌ನ್ಯೂಸ್
* ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕೋಟಾ ಶ್ರೀನಿವಾಸ್​ ಪೂಜಾರಿ


ಬೆಂಗಳೂರು, (ಅ.12): ವಿದ್ಯಾರ್ಥಿ ವೇತನ ಬಂದಿಲ್ಲವೆಂದು ಪರಿತಪಿಸುತ್ತಿದ್ದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ  ಕೋಟಾ ಶ್ರೀನಿವಾಸ್​ ಪೂಜಾರಿ(Kota Srinivas Poojary) ಸಿಹಿ ಸುದ್ದಿ  ನೀಡಿದ್ದಾರೆ.

ವಿದ್ಯಾರ್ಥಿ ವೇತನ ಬಂದಿಲ್ಲ ಅಂತ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲೇ ತಕ್ಷಣವೇ  ಸಚಿವ  ಕೋಟಾ ಶ್ರೀನಿವಾಸ್​ ಪೂಜಾರಿ ಸ್ಪಂದಿಸಿದ್ದು, ಕೂಡಲೇ  ವಿದ್ಯಾರ್ಥಿ ವೇತನ (Students scholarship) ಹಾಗೂ ಪ್ರೋತ್ಸಾಹ ಧನ ಬಾಕಿ ಮೊತ್ತವನ್ನು ರಿಲೀಸ್ ಮಾಡುವಂತೆ ತಮ್ಮ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

Tap to resize

Latest Videos

ರಾಜ್ಯದಲ್ಲಿ ಶುರುವಾಯ್ತು ಪವರ್‌ ಕಟ್‌, ಸೋತರೂ RCBಗೆ ಸಪೋರ್ಟ್; ಅ.12ರ ಟಾಪ್ 10 ಸುದ್ದಿ!

ಇನ್ನು ಈ  ಬಗ್ಗೆ ಇಂದು (ಅ.12) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಪೂಜಾರಿ, ಮ್ಯಾನೇಜ್ಮೆಂಟ್ ಕೋಟಾ ಅಡಿ 13 ಸಾವಿರ ಜನ ವಿದ್ಯಾರ್ಥಿಗಳು ಇದ್ದಾರೆ. ಮಾನವೀಯ ಆಧಾರದ ಮೇಲೆ ಅವರಿಗೂ ವಿದ್ಯಾರ್ಥಿ ವೇತನದ ಹಣ ಬಿಡುಗಡೆ ಮಾಡಲು ಸೂಚನೆ ನೀಡಿದ್ದೇನೆ. ಇದಕ್ಕಾಗಿ 8-9 ಕೋಟಿ ಹಣ ವೆಚ್ಚವಾಗಲಿದೆ ಎಂದು ಎಂದರು.

ವಿದ್ಯಾರ್ಥಿ ವೇತನ ಬಂದಿಲ್ಲ ಅಂತ ಮಾಧ್ಯಮಗಳಲ್ಲಿ ನೋಡಿದ್ದೇನೆ. ಬಳಿಕ ಸಮಾಜ ಕಲ್ಯಾಣ ಇಲಾಖೆ, ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳನ್ನು ಕರೆದು ಚರ್ಚೆ ಮಾಡಿದ್ದೇನೆ. ಎಸ್ ಸಿ ಹಾಗೂ ಎಸ್ ಟಿ ವಿದ್ಯಾರ್ಥಿಗಳು ಮ್ಯಾನೇಜ್ಮೆಂಟ್ ಕೋಟಾದಲ್ಲಿ ಇದ್ದರು. ಅವರಿಗೆ ಹಣ ಬಿಡುಗಡೆ ಮಾಡುವ ಪ್ರಸ್ತಾಪ ಇರಲಿಲ್ಲ. ಎಸ್‍ಎಸ್‍ಎಲ್‍ಸಿ ತೇರ್ಗಡೆಯಾದ ಪ.ಜಾ.ಮಕ್ಕಳಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಿರಲಿಲ್ಲ. ಇದೀಗ 55 ಕೋಟಿ ಹಣ ಬಿಡುಗಡೆ ಮಾಡಲು ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 55 ಕೋಟಿ ರೂಪಾಯಿ ಸಿಗಬೇಕಿದೆ. ಇದನ್ನು ಶೀಘ್ರದಲ್ಲೇ ನೀಡಲಾಗುವುದು. ಒಟ್ಟು 1.90 ಲಕ್ಷ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ Other Backward Classes Students) ವಿದ್ಯಾರ್ಥಿ ವೇತನ ನೀಡಬೇಕಿದೆ. ವಾರದೊಳಗಾಗಿ ಈ ವಿದ್ಯಾರ್ಥಿ ವೇತನವು ಮಕ್ಕಳ ಕೈ ಸೇರಲಿದೆ ಎಂದು ತಿಳಿಸಿದರು.

click me!