ಭಾರೀ ಪ್ರವಾಹ : 10ನೇ ತರಗತಿ ಕೆಓಎಸ್‌ ಪರೀಕ್ಷೆ ಮುಂದೂಡಲು ಮನವಿ

By Suvarna News  |  First Published Jul 25, 2021, 11:02 AM IST
  • ರಾಜ್ಯದ ಹಲವು ಕಡೆ ಪ್ರವಾಹ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆ 
  • 10 ನೇ ತರಗತಿ ಕೆಓಎಸ್ ಪರೀಕ್ಷೆ ಮುಂದೂಡುವಂತೆ ಮನವಿ

ಬೆಂಗಳೂರು (ಜು.25):  ರಾಜ್ಯದ ಹಲವು ಕಡೆ ಪ್ರವಾಹ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆ 10 ನೇ ತರಗತಿ ಕೆಓಎಸ್ ಪರೀಕ್ಷೆ ಮುಂದೂಡುವಂತೆ ಮನವಿ ಮಾಡಲಾಗಿದೆ.

ಕರ್ನಾಟಕ ಓಪನ್ ಸ್ಕೂಲ್, ಭಾರತಿ ಇನ್ಸ್ಟಿಟ್ಯೂಟ್ ಆಫ್ ಸ್ಕೂಲಿಂಗ್ ನಿಂದ ಶಿಕ್ಷಣ ಸಚಿವರಿಗೆ ಪರೀಕ್ಷೆ ಮುಂದೂಡಲು ಮನವಿ ಮಾಡಲಾಗಿದೆ. ನಾಳೆಯಿಂದ ರಾಜ್ಯಾದ್ಯಂತ  ಖಾಸಗಿ ವಿದ್ಯಾರ್ಥಿಗಳ ಕೆಒಎಸ್ 10 ನೇ ತರಗತಿ ಪರೀಕ್ಷೆ ಆರಂಭವಾಗುತ್ತಿದೆ. 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದೆ.

Tap to resize

Latest Videos

ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಡೇಟ್ ಫಿಕ್ಸ್

ಆದರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಹಾಜರಾಗಲು ತೊಂದರೆಯಾಗಿದೆ. ಮಳೆ ಹೆಚ್ಚಾಗಿರುವ  ಉತ್ತರ ಕರ್ನಾಟಕ ಭಾಗದಲ್ಲೇ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.

ನಾಳೆ ಪರೀಕ್ಷೆಗೆ ಇನ್ನೂ ಯಾರು ಸಹ ಹಾಲ್ ಟಿಕೆಟ್ ಪಡೆದಿಲ್ಲ.ಪ್ರವಾಹ ಹಿನ್ನಲೆ ರಸ್ತೆ ಸಂಪರ್ಕ ಕಡಿತಗೊಂಡಿದೆ, ಬಸ್ ಸಂಚಾರವಿಲ್ಲ ಹಾಗಾಗಿ ವಿದ್ಯಾರ್ಥಿಗಳಿಗೆ ನಾಳೆಯಿಂದ ಆರಂಭವಾಗುವ ಪರೀಕ್ಷೆಗೆ ಹಾಜರಾಗುವುದು ಕಷ್ಟವಾಗಿದೆ. ಶಿಕ್ಷಣ ಸಚಿವರು ತಕ್ಷಣ ಈ ಬಗ್ಗೆ ಗಮನ ಹರಿಸಿ ಪರೀಕ್ಷೆ ಮುಂದೂಡಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮವಹಿಸುವಂತೆ ಮನವಿ ಮಾಡಲಾಗಿದೆ.

click me!