ಬಿಕಿನಿ ಧರಿಸಿದ ಉಪನ್ಯಾಸಕಿಯೊಬ್ಬರಿಗೆ ಸಂಕಷ್ಟ ಎದುರಾಗಿದೆ. ಉಪನ್ಯಾಸಕಿಯ ಬಿಕಿನಿಯನ್ನು ವಿದ್ಯಾರ್ಥಿ ನೋಡಿದ್ದು, ವಿದ್ಯಾರ್ಥಿ ನೋಡುತ್ತಿದ್ದುದ್ದನ್ನು ಆತನ ಪೋಷಕರು ಗಮನಿಸಿ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.
ಕೋಲ್ಕತ್ತಾ: ಇಲ್ಲಿನ ಪ್ರತಿಷ್ಠಿತ ಸೇಂಟ್ ಕ್ಸೇವಿಯರ್ ಕಾಲೇಜಿನ ಮಾಜಿ ಮಹಿಳಾ ಸಹಾಯಕ ಪ್ರಾಧ್ಯಾಪಕರೊಬ್ಬರು ಕಾಲೇಜಿನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಇವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಕಿನಿ ಧರಿಸಿದ್ದ ಫೋಟೋ ಹಾಕಿದ್ದಾರೆ ಎನ್ನಲಾಗಿದ್ದು, ಇದನ್ನು ಇವರ ವಿದ್ಯಾರ್ಥಿಯೊಬ್ಬ ನೋಡುತ್ತಿದ್ದ, ವಿದ್ಯಾರ್ಥಿ ಶಿಕ್ಷಕಿಯ ಬಿಕಿನಿ ಫೋಟೋ ನೋಡುತ್ತಿರುವುದನ್ನು ವಿದ್ಯಾರ್ಥಿ ಪೋಷಕರು ಗಮನಿಸಿದ್ದಾರೆ. ಅಲ್ಲದೇ ಮಗನ ಕೈಯಿಂದ ಮೊಬೈಲ್ ಕಿತ್ತುಕೊಂಡ ಪೋಷಕರಿಗೆ ಫೋನ್ ಪರಿಶೀಲಿಸಿದಾಗ ಆಘಾತ ಕಾದಿತ್ತು. ಏಕೆಂದರೆ ಮಗ ನೋಡುತ್ತಿದ್ದ ಬಿಕಿನಿ ಫೋಟೋ ಬೇರೆ ಯಾರದ್ದೂ ಅಲ್ಲ, ಸ್ವತಃ ತಮ್ಮ ಪುತ್ರನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಉಪನ್ಯಾಸಕಿ ಆಕೆ ಆಗಿದ್ದಳು. ಇದರಿಂದ ಗಾಬರಿಬಿದ್ದ ಪೋಷಕರು ಸೀದಾ ಹೋಗಿ ಶಾಲಾ ಆಡಳಿತ ಮಂಡಳಿಗೆ ಶಿಕ್ಷಕಿಯ ಬಗ್ಗೆ ದೂರು ನೀಡಿದ್ದಾರೆ.
ನಂದಿನಿ ಗುಹಾ(ಹೆಸರು ಬದಲಾಯಿಸಲಾಗಿದೆ) ಎಂಬ ಶಿಕ್ಷಕಿ ತನ್ನ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಬಿಕಿನಿ ಫೋಟೋಗಳನ್ನು ಹಾಕಿದ್ದರು ಎನ್ನಲಾಗಿದೆ. ಪ್ರಥಮ ವರ್ಷದ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಯೋರ್ವನ ತಂದೆ ಶಾಲಾ ಆಡಳಿತ ಮಂಡಳಿಗೆ ಕಳೆದ ವರ್ಷ ದೂರು ನೀಡಿದ ಬಳಿಕ ಕಾಲೇಜು ನನ್ನನ್ನು ಸೇವೆಯಿಂದ ತೆಗೆದು ಹಾಕಿದೆ ಎಂದು ಉಪನ್ಯಾಸಕಿ ಆರೋಪಿಸಿದ್ದಾರೆ. ಆ ಪತ್ರದಲ್ಲಿ ಪೋಷಕರು ಹೀಗೆ ಬರೆದಿದ್ದಾರೆ. ತನ್ನ ಪುತ್ರ ಉಪನ್ಯಾಸಕಿಯೊಬ್ಬರ ಫೋಟೋವನ್ನು ನೋಡುತ್ತಿದ್ದಾಗ ನನ್ನ ಕೈಗೆ ಸಿಕ್ಕಿಬಿದ್ದಿದ್ದಾನೆ. ಆ ಫೋಟೋ ಆಕ್ಷೇಪಾರ್ಹ, ಅಶ್ಲೀಲ ಮತ್ತು ಬಹುತೇಕ ನಗ್ನತೆಯ ಗಡಿಯಲ್ಲಿತ್ತು ಎಂದು ಪೋಷಕರು ಆರೋಪಿಸಿದ್ದಾರೆ. ಹೀಗೆ ದೂರು ನೀಡಿದ ವಿದ್ಯಾರ್ಥಿಯ ತಂದೆಯನ್ನು ಬಿ.ಕೆ. ಮುಖರ್ಜಿ ಎಂದು ಗುರುತಿಸಲಾಗಿದೆ.
ಪಿಂಕ್ ಬಿಕಿನಿಯಲ್ಲಿ ಮಿಂಚಿದ ಶಿವಲಿಂಗ ಬ್ಯೂಟಿ; ವೇದಿಕಾ ಹಾಟ್ ಲುಕ್ ವೈರಲ್
ಇತ್ತೀಚೆಗೆ, ನನ್ನ ಮಗ ಪ್ರೊ. ಅವರ ಕೆಲವು ಚಿತ್ರಗಳನ್ನು ನೋಡುತ್ತಿರುವುದನ್ನು ಕಂಡು ನಾನು ಗಾಬರಿಗೊಂಡಿದ್ದೇನೆ, ಅಲ್ಲಿ ಆಕೆ ಉದ್ದೇಶಪೂರ್ವಕವಾಗಿ ಸಾರ್ವಜನಿಕ ಎಕ್ಸ್‌ಪೋಸ್ ಮಾಡುವ, ಲೈಂಗಿಕವಾಗಿ ಅಶ್ಲೀಲ ರೀತಿಯಲ್ಲಿ ಪೋಸ್ ನೀಡಿದ್ದಾಳೆ. ಶಿಕ್ಷಕಿಯೊಬ್ಬಳು ತನ್ನ ಒಳ ಉಡುಪುಗಳನ್ನು ಧರಿಸಿ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಗಳನ್ನು ಅಪ್‌ಲೋಡ್ ಮಾಡುವುದನ್ನು ನೋಡುವುದು ಪೋಷಕರಾಗಿ ನನಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಏಕೆಂದರೆ ನಾನು ನನ್ನ ಮಗನನ್ನು ಈ ರೀತಿಯ ಘೋರ ಅಸಭ್ಯತೆ, ಅಶ್ಲೀಲತೆಯಿಂದ ರಕ್ಷಿಸಲು ಪ್ರಯತ್ನಿಸಿದ್ದೆ. 18 ವರ್ಷದ ವಿದ್ಯಾರ್ಥಿಯೋರ್ವ ಆತನಿಗೆ ಪಾಠ ಮಾಡುವ ಶಿಕ್ಷಕಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ಅರೆಬೆತ್ತಲೆಯಾಗಿ ನೋಡುವುದು ಸರಿಯಲ್ಲ ಹಾಗೂ ಅಶ್ಲೀಲ ಹಾಗೂ ಅಸಭ್ಯವಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಇದಾದ ಬಳಿಕ 2021ರ ಅಕ್ಟೋಬರ್ 7 ರಂದು ಸೇಂಟ್ ಕ್ಸೇವಿಯರ್‌ನ ಉಪಕುಲಪತಿ ಮತ್ತು ಇತರ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ, ಗುಹಾ ಅವರಿಗೆ ಪೋಷಕರ ದೂರು ಪತ್ರ ಮತ್ತು ಅವರ ಖಾಸಗಿ ಇನ್‌ಸ್ಟಾಗ್ರಾಮ್ ಖಾತೆಯಿಂದ ತೆಗೆದ ಕೆಲವು ಛಾಯಾಚಿತ್ರಗಳನ್ನು ಹೊಂದಿರುವ ಕಾಗದವನ್ನು ತೋರಿಸಲಾಗಿದೆ ಎಂದು ಉಪನ್ಯಾಸಕಿ ಹೇಳಿದ್ದಾರೆ. ಆದಾಗ್ಯೂ, ನನ್ನ ಆ ಛಾಯಾಚಿತ್ರಗಳನ್ನು ಹೇಗೆ ಪಡೆಯಲಾಗಿದೆ, ಪುರುಷ ವಿದ್ಯಾರ್ಥಿ ನೋಡುತ್ತಿರುವ ಚಿತ್ರಗಳು ಆಕ್ಷೇಪಾರ್ಹವೆಂದು ಕಂಡುಬಂದಿದೆಯೇ ಎಂದು ನನಗೆ ತಿಳಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಬೀಚ್‌ನಲ್ಲಿ ಬಿಕಿನಿ ಸೆಲ್ಫಿ ಕಡ್ಡಾಯ ಎಂದು ಮತ್ತೆ ಹಾಟ್ ಫೋಟೋ ಶೇರ್ ಮಾಡಿದ ಇಲಿಯಾನಾ
ಅಲ್ಲದೇ ವಿಶ್ವವಿದ್ಯಾನಿಲಯದ ಪ್ರತಿಷ್ಠೆಗೆ ಚ್ಯುತಿ ತಂದಿರುವ ಕಾರಣ ಕೆಲಸದಿಂದ ತೆಗೆದು ಹಾಕುವಂತೆ ಒತ್ತಡ ಹೇರಿ ನನ್ನನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಗುಹಾ ಆರೋಪಿಸಿದ್ದಾರೆ. ಆದಾಗ್ಯೂ, ಸೇಂಟ್ ಕ್ಸೇವಿಯರ್ ಕಾಲೇಜು ಅವರ ಆರೋಪಗಳನ್ನು ನಿರಾಕರಿಸಿದೆ ಮತ್ತು ಸಹಾಯಕ ಪ್ರಾಧ್ಯಾಪಕರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದೆ.