ವಿದ್ಯಾರ್ಥಿಗಳಿಗೆ ದುರ್ವಾಸನೆ ನಡುವೆ ಪಾಠ: ಪಾಳುಬಿದ್ದಿರುವ ಕಟ್ಟಡದಿಂದ ಮಕ್ಕಳಿಗೆ ಅಪಾಯ

By Govindaraj S  |  First Published Aug 8, 2022, 9:32 PM IST

ಪ್ರತಿಷ್ಠಿತರು ಓದಿದಂತಹ ಶಾಲೆ ಇದು. ಇಲ್ಲಿ ವ್ಯಾಸಂಗ ಮಾಡಿದವರು ರಾಜ್ಯದ ನಾನಾ ಹುದ್ದೆಗಳಲ್ಲಿ ಇಂದು ಹೆಸರು ಪಡೆದಿದ್ದಾರೆ. ಪ್ರತಿಭಾನ್ವಿತರು ಹೊರಹೊಮ್ಮಿದ ಶಾಲೆ ಕಟ್ಟಡದ ಇಂದಿನ ಸ್ಥಿತಿ ನಿಜಕ್ಕೂ ಕೂಡ ಶೋಚನೀಯವಾಗಿದೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಆ.08): ಪ್ರತಿಷ್ಠಿತರು ಓದಿದಂತಹ ಶಾಲೆ ಇದು. ಇಲ್ಲಿ ವ್ಯಾಸಂಗ ಮಾಡಿದವರು ರಾಜ್ಯದ ನಾನಾ ಹುದ್ದೆಗಳಲ್ಲಿ ಇಂದು ಹೆಸರು ಪಡೆದಿದ್ದಾರೆ. ಪ್ರತಿಭಾನ್ವಿತರು ಹೊರಹೊಮ್ಮಿದ ಶಾಲೆ ಕಟ್ಟಡದ ಇಂದಿನ ಸ್ಥಿತಿ ನಿಜಕ್ಕೂ ಕೂಡ ಶೋಚನೀಯವಾಗಿದೆ. ಕುಸಿಯುವ ಹಂತದಲ್ಲಿ ಇದ್ದರೂ ಮಕ್ಕಳ ಪ್ರಾಣದ ಜೊತೆಗೆ ಚೆಲ್ಲಾಟವನ್ನು ಶಿಕ್ಷಣ ಇಲಾಖೆ ತಾಳಿದೆ. ಹಳೇ ಕಟ್ಟಡ ಸಂಪೂರ್ಣ ಶಿಥಿಲವಾಗಿ ಅಪಾಯಕ್ಕೆ ಆಹ್ವಾನ ನೀಡಿದ್ದರೂ ಶಿಕ್ಷಣ ಇಲಾಖೆ ಮೌನಕ್ಕೆ ಜಾರಿದಿದೆ. 

Tap to resize

Latest Videos

ಪಾಳುಬಿದ್ದಿರುವ ಕಟ್ಟಡದಿಂದ ಮಕ್ಕಳಿಗೆ ಅಪಾಯ: ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಕಾಲೇಜು ವಿಭಾಗದ ಹಳೇ ಕಟ್ಟಡ ಇಂದು ಕುಸಿಯುವ ಹಂತದಲ್ಲಿ ಇದೆ., ಶಿಥಿಲಾವಸ್ಥಗೆ ತಲುಪಿರುವ ಕಟ್ಟಡದ ಕಾರಿಡಾರ್ ನಲ್ಲಿ ಜೀವ ಭಯದಲ್ಲಿ ಮಕ್ಕಳು ಓಡಾಟ ನಡೆಸುತ್ತಿದ್ದಾರೆ. ಈ ಕಟ್ಟಡ ಇಂದು  ಪಾಳು ಬಿದ್ದಿರುವ ಸ್ಥಿತಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯವೇ ಕಾರಣ. ಕಾಲೇಜ್ ವಿಭಾಗದ  5 ಕೊಠಡಿಗಳು ಸಂಪೂರ್ಣವಾಗಿ ಶಿಥಲೀಕರಣಗೊಂಡಿದ್ದು ಯಾವುದೇ ಸಮಯದಲ್ಲಿ ಕುಸಿದು ಬೀಳುವ ಆತಂಕ ಎದುರಾಗಿದೆ.

Chikkamagaluru;ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಸಚಿವ ಭೈರತಿ ಬಸವರಾಜ

ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡು ಪ್ರಯೋಜನಕ್ಕೆ ಬಾರದಂತಾಗಿವೆ. ಈಗ ಈ ಕೊಠಡಿಗಳು ಹಾವು, ಚೇಳು ಮುಂತಾದ ವಿಷ ಜಂತುಗಳ ವಾಸಸ್ಥಾನವಾಗಿವೆ. ಅಲ್ಲದೆ, ಕೊಳಚೆಯಿಂದಾಗಿ ಗಬ್ಬು ವಾಸನೆ ನಿರಂತರ ಬರುತ್ತಿದ್ದು, ಇದರಿಂದ ಹೊಸ ಕಟ್ಟಡದಲ್ಲಿ ಪಾಠ ಕೇಳುವ ವಿದ್ಯಾರ್ಥಿಗಳಿಗೆ ನರಕ ಯಾತನೆಯಾಗಿದೆ. ಶತಮಾನದ ವರ್ಷಗಳ ಕಂಡ ಶಾಲೆ, ಇತ್ತೀಚೆಗೆ ಕರ್ನಾಟಕ ಪಬ್ಲಿಕ್ ಶಾಲೆ ಎಂಬ ಕೀರ್ತಿ ಪಡೆದಿದ್ದು, ಪ್ರಾಥಮಿಕ, ಪ್ರೌಢಶಾಲೆ ವಿಭಾಗ ಮತ್ತು ಕಾಲೇಜು ವಿಭಾಗಗಳು ತರಗತಿಗಳು ನಡೆಯುತ್ತಿವೆ. 

ಮಳೆಗೆ ಕಟ್ಟಡ ಬೀಳುವುದಂತು ಗ್ಯಾರಂಟಿ: ಪ್ರಥಮ, ದ್ವಿತೀಯ ಪಿಯುಸಿಯಲ್ಲಿ 400ಕ್ಕೂ ಹೆಚ್ಚು ಮಕ್ಕಳ ವ್ಯಾಸಂಗ ಮಾಡುತ್ತಿದ್ದಾರೆ. ಕಲಾ, ವಿಜ್ಷಾನ, ವಾಣಿಜ್ಯ ತರಗತಿಗಳು ನಡೆಯುತ್ತಿದ್ದು, ಕೊಠಡಿಗಳ ಸಮಸ್ಯೆಯಿಂದ ಲ್ಯಾಬ್ ಮತ್ತು ಲೈಬ್ರರಿ ವ್ಯವಸ್ಥೆ ಇಲ್ಲದಂತಾಗಿದೆ. ನೂತನವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳಲ್ಲಿ ವಿದ್ಯಾರ್ಥಿಗಳು ಪಾಠ ಕೇಳುವುದಕ್ಕೆ ಸೀಮಿತವಾಗಿದೆ. ಇದರ ಜತೆಗೆ ಬಹಳ ಮುಖ್ಯವಾಗಿ ಶೌಚಾಲಯ ಸಮಸ್ಯೆ ಎದುರಿಸುತ್ತಿದೆ. ನೀರಿನ ಸೌಕರ್ಯವಿಲ್ಲದ ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಗಬ್ಬುನಾತ ಬೀರುತ್ತಿದೆ. ಪಾಳುಬಿದ್ದ ಐದು ಕೊಠಡಿಗಳನ್ನು ದುರಸ್ತಿ ಮಾಡಲು ಸಾಧ್ಯವಾದರೆ ಮಾಡಿ, ಇಲ್ಲವಾದರೆ ಅದನ್ನು ಕೆಡವಿ ನೂತನ ಕಟ್ಟಡ ಕಟ್ಟಬೇಕು ಎಂಬುವುದು ಸ್ಥಳೀಯ ಆಗ್ರಹವಾಗಿದೆ. 

Chitradurga Heavy Rain: ಜಿಟಿ ಜಿಟಿ ಮಳೆಗೆ ಕಂಗಾಲಾದ ಕೋಟೆನಾಡಿನ ಅನ್ನದಾತ

ದಾಖಲಾತಿಗೆ ಬರುವ ವಿದ್ಯಾರ್ಥಿಗಳು ಕಾಲೇಜಿನ ಕೊಠಡಿ, ಮೂಲ ಸೌಲಭ್ಯಗಳ ಕೊರತೆ ನೋಡಿ ವಾಪಸ್ ಹೋಗುತ್ತಿದ್ದಾರೆ. ಈ ಕಾರಣದಿಂದಾಗಿ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ. ಒಟ್ಟಾರೆ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿರುವ ಕಟ್ಟಡವನ್ನು ಇಟ್ಟುಕೊಂಡು ಶಿಕ್ಷಣ ಇಲಾಖೆ ಯಾವ ಘನಕಾರ್ಯ ಸಾಧಿಸಲು ಹೊರಟಿದ್ಯೋ ಗೊತ್ತಿಲ್ಲ ಸದ್ಯ ಮಲೆನಾಡಿನಲ್ಲಿ ಸುರಿಯುತ್ತಿರುವ ಜೋರು ಮಳೆಗೆ ಈ ಕಟ್ಟಡ ಬೀಳುವುದಂತು ಗ್ಯಾರಂಟಿ. ಆದರೆ ಶಾಲಾ ಮಕ್ಕಳು ಅಲ್ಲಿಯೇ ಓಡಾಟ ನಡೆಸುತ್ತಿರುವುದರಿಂದ ಅನಾಹುತ ನಡೆದಾಗ ಎಚ್ಚೆತ್ತುಕೊಳ್ಳುವ ಬದಲು ಈಗಲೇ ಅಲರ್ಟ್ ಆಗುವುದು ಒಳ್ಳೆಯದು.

click me!