ಗಡಿನಾಡು ಸರ್ಕಾರಿ ಶಾಲೆಗೆ ಮತ್ತೆ ಆಪತ್ತು; ಕನ್ನಡದ ಗಂಧಗಾಳಿ ಗೊತ್ತಿಲ್ಲದ ಮಲಯಾಳಂ ಶಿಕ್ಷಕಿ ನೇಮಿಸಿದ ಕೇರಳ!

By Ravi JanekalFirst Published Jun 20, 2023, 8:53 AM IST
Highlights

ಗಡಿನಾಡು ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಒಂದು ಕಡೆ ಪೋಷಕರು ಮಕ್ಕಳನ್ನು ಕಳಿಸಲು ನಿರಾಸಕ್ತಿ ತೋರಿಸುತ್ತಿದ್ದಾರೆ ಇನ್ನೊಂದೆಡೆ ಕನ್ನಡ ಶಿಕ್ಷಕರ ನೇಮಕ ಆಗದಿರುವುದು. ಇದೀಗ ಕೇರಳ ಸರ್ಕಾರ ಗಡಿನಾಡ ಕನ್ನಡಿಗರ ಮೇಲೆ ಕೇರಳ ಸರ್ಕಾರದಿಂದ ಅಪತ್ತು ಎದುರಾಗಿದೆ.

ಮಂಗಳೂರು (ಜೂ.20) : ಗಡಿನಾಡು ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಒಂದು ಕಡೆ ಪೋಷಕರು ಮಕ್ಕಳನ್ನು ಕಳಿಸಲು ನಿರಾಸಕ್ತಿ ತೋರಿಸುತ್ತಿದ್ದಾರೆ ಇನ್ನೊಂದೆಡೆ ಕನ್ನಡ ಶಿಕ್ಷಕರ ನೇಮಕ ಆಗದಿರುವುದು. ಇದೀಗ ಕೇರಳ ಸರ್ಕಾರ ಗಡಿನಾಡ ಕನ್ನಡಿಗರ ಮೇಲೆ ಕೇರಳ ಸರ್ಕಾರದಿಂದ ಅಪತ್ತು ಎದುರಾಗಿದೆ.

ಕನ್ನಡ ಮಕ್ಕಳು ಓದುತ್ತಿರುವ ಶಾಲೆಗಳಿಗೆ ಮಲಯಾಳಂ ಶಿಕ್ಷಕರ ನೇಮಿಸಿ ಕೇರಳ ಸರ್ಕಾರ ಉದ್ಧಟತನ ಮೆರೆದಿದೆ.

ಮಂಗಳೂರು ಗಡಿ ಭಾಗದ ಕೇರಳದ ಕಾಸರಗೋಡಿನ ಅಡೂರಿನ ಸರ್ಕಾರಿ ಹಿರಿಯ ಪ್ರೌಢಶಾಲೆ ಇದೆ. ಈ ಶಾಲೆಯಲ್ಲಿ ಕನ್ನಡದ ಮಕ್ಕಳು ಹೆಚ್ಚು ಓದುತ್ತಿರುವ ಈ ಶಾಲೆ ಕನ್ನಡ ಶಿಕ್ಷಕರ ನೇಮಿಸುವ ಬದಲು ಮಲಯಾಳಂ ಶಿಕ್ಷಕನ್ನು ನೇಮಿಸುವ ಮೂಲಕ ಗಡಿನಾಡ ಕನ್ನಡಿಗರ ಮೇಲೆ ಕೇರಳ ಸರ್ಕಾರದಿಂದ ಮತ್ತೆ ಗದಾ ಪ್ರಹಾರ ನಡೆಸಿದೆ.

Chikkaballapur: ಕನ್ನಂಪಲ್ಲಿ ಕೆರೆ ಸ್ವಚ್ಛತೆ ಕ್ರಮ: ಸಚಿವ ಡಾ.ಎಂ.ಸಿ ಸುಧಾಕರ್‌ ಭರವಸೆ

ಕನ್ನಡ ಶಾಲೆಗೆ ಮಲಯಾಳಂ ಶಿಕ್ಷಕಿ ನೇಮಕ:

ಅಡೂರು ಶಾಲೆಗೆ ಕನ್ನಡ ಕಲಿಸಲು ಮಲಯಾಳಂ ಶಿಕ್ಷಕಿಯನ್ನು ನೇಮಿಸಲಾಗಿದೆ. ಕನ್ನಡ ಶಿಕ್ಷಕರನ್ನು ನೇಮಕ ಮಾಡುವಂತೆ  ಮಕ್ಕಳು ಮತ್ತು ಪೋಷಕರು ಮನವಿ ಸಲ್ಲಿಸಿದ್ರೂ ಕ್ಯಾರೇ ಎನ್ನದ ಕೇರಳ ಸರ್ಕಾರ. ಈಗ ನೇಮಕವಾಗಿರುವ ಮಲಯಾಳಂ ಶಿಕ್ಷಕಿಗೆ ಕನ್ನಡದ ಗಂಧಗಾಳಿ ಗೊತ್ತಿಲ. ಇಂಥವರು ಮಕ್ಕಳಿಗೆ ಕನ್ನಡ ಕಲಿಸುವುದು ಸಾಧ್ಯವಾ ಎಂದು ಪೋಷಕರು ಪ್ರಶ್ನೆ.

ಪಾಠ ಅರ್ಥವಾಗದೆ ತರಗತಿ ಬಹಿಷ್ಕರಿಸಿದ ಮಕ್ಕಳು:

ಕನ್ನಡ ಗೊತ್ತಿಲ್ಲದೆ ಮಲಯಾಳಂ ಭಾಷೆಯಲ್ಲಿ ಪಾಠ ಮಾಡುವ ಶಿಕ್ಷಕಿ. ಶಿಕ್ಷಕಿಯ ಪಾಠ ಮಕ್ಕಳಿಗೆ ಅರ್ಥವಾಗದೇ ತರಗತಿ ಬಹಿಷ್ಕರಿ ಹೊರನಡೆದಿರುವ ಮಕ್ಕಳು. ಕನ್ನಡ ಶಿಕ್ಷಕರ ನೇಮಕಗೊಳಿಸುವಂತೆ ಪ್ರತಿಭಟನೆ ನಡೆಸಿದ್ದಾರೆ. ಶಿಕ್ಷಣ ಇಲಾಖೆ ಹಾಗೂ ಕೇರಳ ಸರ್ಕಾರದ ನಡೆಯ ವಿರುದ್ದ ಪೋಷಕರು ಗರಂ ಆಗಿದ್ದಾರೆ. 

ಕೇರಳಕ್ಕೆ ಸೇರಿದ್ರೂ ಕನ್ನಡ ಭಾಷಿಕರೇ ಹೆಚ್ಚಿರೋ ಪ್ರದೇಶ:

ಕಾಸರಗೋಡು ಕೇರಳಕ್ಕೆ ಸೇರಿದರೂ ಕನ್ನಡ ಭಾಷಿಕರೇ ಹೆಚ್ಚಿದ್ದಾರೆ. ಅಡೂರು ಸರ್ಕಾರಿ ಶಾಲೆಯಲ್ಲಿ ಕನ್ನಡ ಮಕ್ಕಳು ಹೆಚ್ಚು ಓದುತ್ತಿದ್ದಾರೆ. ಈ ಶಾಲೆಗೆ ಕನ್ನಡ ಶಿಕ್ಷಕರಿಲ್ಲ. ಕೇರಳ ಸರ್ಕಾರದ ನಿರ್ಲಕ್ಷ್ಯ. ಮಲಯಾಳಂ ಶಿಕ್ಷಕರ ನೇಮಕ. ಇದು ಮತ್ತೊಂದು ಸ.ಹಿ.ಪ್ರಾ.ಶಾಲೆ ಕಾಸರಗೋಡು ಸಿನಿಮಾ ಹೋಲುವ ಸ್ಟೋರಿ.

ಕರ್ನಾಟಕದ ಗಡಿಯಾಗಿರುವ ಕಾರಣ ಇಲ್ಲಿ ಕನ್ನಡದಲ್ಲೂ ಶಿಕ್ಷಣ ನೀಡಬೇಕು ಅನ್ನೋ ನಿಯಮವಿದೆ.  ಹೀಗಾಗಿ ಕನ್ನಡ ಮಾಧ್ಯಮ ತರಗತಿಗಳು ಹತ್ತನೇ ತರಗತಿಯವರೆಗೆ ನಡೆಯುತ್ತೆ. ಕನ್ನಡ ಭಾಷೆ ಬಲ್ಲ ಶಿಕ್ಷಕರೇ ಎಲ್ಲ ಪಾಠಗಳನ್ನ ಮಕ್ಕಳಿಗೆ ನಡೆಸ್ತಾರೆ. ಈ ಮಧ್ಯೆ ಹೈಸ್ಕೂಲ್ ನ ಕನ್ನಡ ವಿಷಯಕ್ಕೆ ಮಲಯಾಳಂ ಶಿಕ್ಷಕಿ ನೇಮಿಸಿ ಕೇರಳ ಸರ್ಕಾರ ಉದ್ದಟತನ ಮಾಡಿದೆ. ಕಾಸರಗೋಡಿನಲ್ಲಿ ಕನ್ನಡ ವಿಭಾಗದದಲ್ಲಿ  ಶಾಲೆಗಳಿಗೆ ಶಿಕ್ಷಕರ ನೇಮಕಕ್ಕೆ 2015ರಲ್ಲಿ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಕಾಸರಗೋಡಿನ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕ ಕಡ್ಡಾಯವಾಗಿದೆ. ಹೀಗಿದ್ದರೂ ಮತ್ತೆ ಮತ್ತೆ ಮಲಯಾಳಿಗಳನ್ನ ನೇಮಿಸಿ ಸರ್ಕಾರ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಲೆ ಬಂದಿದೆ.

ಕರಾವಳಿ ಜಿಲ್ಲೆಯ ಶಾಲಾ- ಕಾಲೇಜು ವಿದ್ಯಾರ್ಥಿಗಳ ಮೇಲೆ ನಿಗಾ: ಡ್ರಗ್ಸ್‌ ವಿರೋಧಿ ಸಮಿತಿ ರಚನೆ

ಸದ್ಯ ಅಸಮಾಧಾನಗೊಂಡ ಪೋಷಕರಿಂದ ಕಾನೂನು ಹೋರಾಟಕ್ಕೆ ನಿರ್ಧಾರ. ಕೇರಳ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಪೋಷಕರ ನಿರ್ಧರಿಸಿದ್ದಾರೆ. ಕೇವಲ ಹತ್ತು ತಿಂಗಳು ಕನ್ನಡ ತರಬೇತಿ ಪಡೆದು ಬಂದಿರುವ ಮಲಯಾಳಂ ಶಿಕ್ಷಕ. ಇಂಥ ಶಿಕ್ಷಕಿ ಕನ್ನಡದಲ್ಲಿ ಮಕ್ಕಳಿಗೆ ಹೇಗೆ ಪಾಠ ಮಾಡಬಲ್ಲರು. ಹೀಗಾಗಿ ಈ ಶಿಕ್ಷಕನ ನೇಮಕಾತಿ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲು ಸಿದ್ದತೆ ನಡೆಸಿರುವ ಕನ್ನಡಿಗರು. 

click me!