ಚಿತರದುರ್ಗದಲ್ಲಿ ಶಾಲೆಯಿಂದ ಹೊರಗುಳಿದು ಕುರಿ ಕಾಯುತ್ತಿದ್ದ ವಿದ್ಯಾರ್ಥಿಯ ಬಗ್ಗೆ ಮಾಹಿತಿ ತಿಳಿದ 24 ಗಂಟೆಗಳಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲೆಗೆ ಸೇರಿಸಿದ್ದಾರೆ.
ಚಿತ್ರದುರ್ಗ (ಸೆ.12): ರಾಜ್ಯದಲ್ಲಿ ಶಾಲೆಯನ್ನು ಬಿಟ್ಟು ಕುರಿ ಕಾಯಲು ಹೋಗಿದ್ದ ಮಗುವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿ ಕೇವಲ 24 ಗಂಟೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮುಯ್ಯ ಸೂಚನೆ ಮೇರೆಗೆ ಅಧಿಕಾರಿಗಳ ತಂಡವು ಕುರಿ ಕಾಯುತ್ತಿದ್ದ ಬಾಲಕನನ್ನು ಶಾಲೆಗೆ ಸೇರಿಸಿದ್ದಾರೆ.
ಹೌದು, 6ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಶಿಕ್ಷಣ ಮೂಲಭೂತ ಹಕ್ಕು ಎಂದು ಸಂವಿಧಾನದಲ್ಲಿ ಉಲ್ಲೇಖ ಮಾಡಿದ್ದರೂ ಇನ್ನೂ ಶಾಲೆಯಿಂದ ಹೊರಗುಳಿಯುವ ಸಾವಿರಾರು ಮಕ್ಕಳು ಪ್ರತಿವರ್ಷ ಪತ್ತೆಯಾಗುತ್ತಿದ್ದಾರೆ. ಇನ್ನು ಚಿತ್ರದುರ್ಗ ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದಲ್ಲಿ ಶಾಲೆಯನ್ನು ಬಿಟ್ಟು ಕುರಿ ಕಾಯಲು ಹೋಗುತ್ತಿದ್ದ ಬಾಲಕನ ಫೋಟೋ ಮತ್ತು ವಿಡಿಯೋವನ್ನು ಸ್ಥಳೀಯ ವ್ಯಕ್ತಿ ಮಹೇಂದ್ರ ಎನ್ನುವವರು ಶಾಲೆ ತೊರೆದು ಕುರಿ ಕಾಯುತ್ತಿದ್ದ ಬಾಲಕನ ವಿಡಿಯೋವನ್ನು ಮೊಬೈಲ್‍ನಲ್ಲಿ ಫೋಟೊ ತೆಗೆದು ಮುಖ್ಯಮಂತ್ರಿಗಳನ್ನು ಟ್ಯಾಗ್ ಮಾಡಿದ್ದರು.
undefined
ನನ್ನ ಹೆಣವೂ ಬಿಜೆಪಿಗೆ ಹೋಗಲ್ಲ, ಕೋಮುವಾದಿ ಶಕ್ತಿಗಳ ವಿರುದ್ಧವೇ ರಾಜಕಾರಣ: ಸಿದ್ಧರಾಮಯ್ಯ
ಮಹೇಂದ್ರ ಎನ್ನುವರು "ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸಾಪುರ ಗ್ರಾಮದ ಮಂಜಣ್ಣ ಎಂಬುವರ ಪುತ್ರ ಯೋಗೇಶ್ ವಯಸ್ಸು (11) 2 ವರ್ಷದಿಂದ ಕುರಿ ಕಾಯುತ್ತ ಇದ್ದಾನೆ. ನಾಗರಿಕ ಜನಗಳ ಮದ್ಯ ಸ್ವಂತ ಮಗನನ್ನೇ ಅನಾಗರಿಕ ಮಾಡಲು ಹೊರಟಿರುವುದು ನೋವಿನ ಸಂಗತಿ' ಎಂದು ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಟ್ಬೀಟ್ ಮಾಡಿದಗ್ದರು. ಈ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾದ ಮುಖ್ಯಮಂತ್ರಿ ಸಾಮಾಜಿಕ ಜಾಲತಾಣದ ನಿರ್ವಹಣೆ ಸಿಬ್ಬಂದಿ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ, ಬಾಲಕನನ್ನು ಗುರುತಿಸಿ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ 2 ವರ್ಷದಿಂದ ಯೋಗೀಶ್ ಶಾಲೆಗೆ ಹೋಗದೆ ಕುರಿಕಾಯಲು ತೆರಳುತ್ತಿದ್ದ ಎನ್ನಲಾಗಿದೆ. ಈ ಕುರಿತಾಗಿ ಸಿಎಂ ಆಫ್ ಕರ್ನಾಟಕ ಎಕ್ಸ್ ಖಾತೆಗೆ ಟ್ಯಾಗ್ ಮಾಡಲಾಗಿತ್ತು. ಈ ಕುರಿತು ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ, ತಮ್ಮ ಬಾಲ್ಯದ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ 'ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಬಸಾಪುರದ ಯೋಗೇಶ್ ಎಂಬ ಬಾಲಕನನ್ನು ಆತನ ತಂದೆ ತಾಯಿ ಒತ್ತಾಯಪೂರ್ವಕವಾಗಿ ಶಾಲೆ ಬಿಡಿಸಿ ಕಳೆದ 2 ವರ್ಷದಿಂದ ಕುರಿ ಮೇಯಿಸಲು ತೊಡಗಿಸಿದ್ದರು.
ಈ ವಿಚಾರವು ಸ್ಥಳೀಯರೊಬ್ಬರಿಂದ ನಮ್ಮ ಗಮನಕ್ಕೆ ಬಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಬಾಲಕನ ಮನೆಗೆ ಕಳುಹಿಸಿ, ಆತನ ತಂದೆ ತಾಯಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಿ, ಕೇವಲ 24 ಗಂಟೆಗಳ ಒಳಗೆ ಬಾಲಕನನ್ನು ಶಾಲೆಗೆ ಸೇರ್ಪಡೆ ಮಾಡಿಸಲಾಗಿದೆ. ಬಡತನದ ಕಾರಣಕ್ಕೆ ಶಿಕ್ಷಣದಿಂದ ವಂಚಿತನಾಗಿದ್ದ ಯೋಗೇಶ್ ಈಗ ಇತರ ಮಕ್ಕಳಂತೆ ಶಾಲೆಯಲ್ಲಿ ಕಲಿಯುತ್ತಾ, ನಲಿಯುತ್ತಾ ಉಜ್ವಲ ಭವಿಷ್ಯದೆಡೆಗೆ ಹೆಜ್ಜೆ ಹಾಕುತ್ತಿದ್ದಾನೆ' ಎಂದು ಬರೆದುಕೊಂಡಿದ್ದಾರೆ.
ಗೌರಿ ಗಣೇಶ ಹಬ್ಬದ ಪ್ರಯುಕ್ತ 1,200 ಹೆಚ್ಚುವರಿ ಬಸ್‌ಗಳನ್ನು ಬಿಟ್ಟ ಕೆಎಸ್‌ಆರ್‌ಟಿಸಿ
ಮುಂದುವರೆದು, ಬಾಲ್ಯದಲ್ಲಿ ನಾನು ಕೂಡ ಯೋಗೇಶ್ ನಂತೆ ಶಾಲೆಯಿಂದ ವಂಚಿತನಾಗಿದ್ದೆ, ರಾಜಪ್ಪ ಮೇಸ್ಟ್ರು ನನ್ನನ್ನು ನೇರವಾಗಿ 5ನೇ ತರಗತಿಗೆ ದಾಖಲಾತಿ ಮಾಡಿ ಶಿಕ್ಷಣ ಸಿಗುವಂತೆ ಮಾಡಿದ್ದರಿಂದ ಇಂದು ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ. ಮರಳಿ ಶಿಕ್ಷಣದತ್ತ ಮುಖಮಾಡಿರುವ ಈ ಬಾಲಕನ ಭವಿಷ್ಯವೂ ಉಜ್ವಲವಾಗಲಿ ಎಂಬ ಹಾರೈಕೆ ನನ್ನದು. ಇಂತಹ ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳು ನಿಮಗೂ ಕಂಡು ಬಂದರೆ ನಮ್ಮ ಕಚೇರಿಯ @osd_cmkarnataka ಎಕ್ಸ್ ಖಾತೆಯನ್ನು ಸಂಪರ್ಕಿಸಿ' ಎಂದು ಬರೆದುಕೊಂಡಿದ್ದಾರೆ.