Teacher Recruitment Exam 2022 ಶಿಕ್ಷಕರ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ

By Suvarna NewsFirst Published May 13, 2022, 1:05 PM IST
Highlights

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ  ಮೇ. 21 ಮತ್ತು ಮೇ 22 ರಂದು ನಡೆಯಲಿದ್ದು,   ಪರೀಕ್ಷೆಗೆ ಹಾಜರಾಗಲು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಬಿಡುಗಡೆಯಾಗಿದೆ. 

ಬೆಂಗಳೂರು (ಮೇ.13): 15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ (Karnataka Teacher Recruitment 2022) ಪರೀಕ್ಷೆ ಮೇ. 21 ಮತ್ತು ಮೇ 22 ರಂದು ನಡೆಯಲಿದ್ದು,   ಪರೀಕ್ಷೆಗೆ ಹಾಜರಾಗಲು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ (Admit card) ಬಿಡುಗಡೆಯಾಗಿದೆ. ಅಭ್ಯರ್ಥಿಗಳು ಅಡ್ಮಿಟ್ ಕಾರ್ಡ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ https://www.schooleducation.kar.nic.in/ ಗೆ ಭೇಟಿ ನೀಡಲು ಕೋರಲಾಗಿದೆ. "ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್ ಮಾಡಿ" ಎಂಬ ಬಾಕ್ಸ್ ಕ್ಲಿಕ್ ಮಾಡಿ ಬಳಿಕ ಓಪನ್ ಆದ ಪೇಜ್‌ನಲ್ಲಿ ಯೂಸರ್ ನೇಮ್, ಪಾಸ್‌ವರ್ಡ್‌ ನೀಡಿ ಲಾಗಿನ್‌ ಆಗಿ.  ಇಲ್ಲವೆಂದರೆ 'Download Hall Ticket' ಎಂಬಲ್ಲಿ ಕ್ಲಿಕ್ ಮಾಡಿ. ಪ್ರವೇಶ ಪತ್ರ  ಡೌನ್‌ಲೋಡ್ ಮಾಡಿ ಮಾಡಿಕೊಳ್ಳಿ. 

ಸಮಾಜ ವಿಜ್ಞಾನ, ಗಣಿತ, ಇಂಗ್ಲಿಷ್ ಮತ್ತು ಜೀವ ವಿಜ್ಞಾನ ಶಿಕ್ಷಕರ 15 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಮೇ.10 ರಂದು ಸುದ್ದಿಗೋಷ್ಠಿ ನಡೆಸಿದ  ಶಿಕ್ಷಣ ಸಚಿವ ಬಿ.ಸಿ ನಾಗೇಶ್,   1 ಲಕ್ಷದ 6 ಸಾವಿರಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈಗಾಗಲೇ ಭದ್ರತೆ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಪೋಲಿಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ, ಚರ್ಚಿಸಿ ಒಂದಷ್ಟು ಮಾಹಿತಿ‌ ಪಡೆದಿದ್ದೇವೆ. ಒಟ್ಟು 435 ಕೇಂದ್ರಗಳಲ್ಲಿ  ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಯಲಿದ್ದು, ಚಿಕ್ಕೋಡಿಯಲ್ಲಿ ಹೆಚ್ಚು ಕೇಂದ್ರಗಳು ಇರಲಿವೆ. ಪರೀಕ್ಷಾ ಕೇಂದ್ರಗಳಲ್ಲಿ ಎರಡು ಹಂತದಲ್ಲಿ ತಪಾಸಣೆ ನಡೆಯಲಿದೆ.  ಪೊಲೀಸರು ಮೊದಲ ಹಂತದಲ್ಲಿ ತಪಾಸಣೆ ನಡೆಸಿದ ಬಳಿಕ  ನಮ್ಮ‌ ಇಲಾಖೆಯವರು ಎರಡನೇ ಹಂತದಲ್ಲಿ ತಪಾಸಣೆ ನಡೆಸಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಮೇ 21ರಂದು ನಿಗದಿಯಾಗಿರುವ NEET-PG Exam ಮುಂದೂಡುವಂತೆ ಮನವಿ

ಇನ್ನು ಪರೀಕ್ಷೆ  ಬರೆಯುವ ಅಭ್ಯರ್ಥಿಗಳಿಗೆ ಕೆಲವು ನಿಯಮಗಳನ್ನು ಮಾಡಲಾಗಿದ್ದು, ಈ ಬಗ್ಗೆ ಮೇ 14ರಂದು ಪರೀಕ್ಷಾ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮೊದಲೇ ಹಾಜರಾಗಬೇಕು. ಯಾರಿಗೂ ಕೈಗಡಿಯಾರಕ್ಕೆ ಅವಕಾಶ ಇಲ್ಲ.  ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್‌ ವಸ್ತು ಒಯ್ಯುವಂತಿಲ್ಲ. ಮೊಬೈಲ್‌, ವಾಚ್‌, ಎಲೆಕ್ಟ್ರಾನಿಕ್‌ ಡಿವೈಸ್‌ಗೆ ಅವಕಾಶ ಇಲ್ಲ. ಪ್ರಶ್ನೆಪತ್ರಿಕೆ ಗೌಪ್ಯತೆ, ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲೇ ಗೋಡೆ ಗಡಿಯಾರ ಅಳವಡಿಸಲಾಗುವುದು ಜೊತೆಗೆ   ಸಿಸಿಟಿವಿ ಅಳವಡಿಕೆ ಕಡ್ಡಾಯವಾಗಿರಲಿದೆ ಎಂದು ಸಚಿವರು ತಿಳಿಸಿದ್ದಾರೆ. 

ಒಂದು ಕೊಠಡಿಯಲ್ಲಿ 20 ಮಂದಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು.  ಮೆಟಲ್ ಡಿಟೆಕ್ಟರ್ ಬಳಕೆ ಬಗ್ಗೆಯೂ ತೀರ್ಮಾನ ಮಾಡಲಾಗಿದೆ. ಅಗತ್ಯವಿರುವ ಸೂಕ್ಷ್ಮ ಕೇಂದ್ರಗಳಲ್ಲಿ ಮೆಟಲ್ ಡಿಟೆಕ್ಟರ್ ಬಳಸಲಾಗುವುದು. ಮೂರು ದಿನದ ಮೊದಲೇ ಪರೀಕ್ಷಾ ಕೇಂದ್ರಗಳನ್ನ ವಶಕ್ಕೆ ಪಡೆಯುತ್ತೇವೆ. ಪರೀಕ್ಷಾ ಸಂಬಂಧ ಮೂರು ಕಮಿಟಿಯನ್ನು ಈಗಾಗಲೇ ರಚಿಸಲಾಗಿದೆ.

KSU Act 2000 ತಿದ್ದುಪಡಿಗೆ ನಿವೃತ್ತ ವಿಸಿ ಫೋರಂ ಸಲಹೆ!

ಪರೀಕ್ಷಾ ಕೇಂದ್ರದ ಶಾಲೆಗಳ ಶಿಕ್ಷಕರನ್ನು ಅದೇ ಕೇಂದ್ರಕ್ಕೆ ನೇಮಿಸಿಲ್ಲ. ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಸಿಇಓ, ಎಸ್ಪಿಗಳ ನೇತೃತ್ವದಲ್ಲಿ ಕಮಿಟಿ ಮಾಡಲಾಗಿದೆ. ಈ ಕಮಿಟಿ ಪರೀಕ್ಷಾ ಕೇಂದ್ರಗಳ ಮೇಲೆ ಹದ್ದಿನ ಕಣ್ಣಿಡಲಿದೆ.  144 ಸೆಕ್ಷನ್ ಪರೀಕ್ಷಾ ಕೇಂದ್ರದಲ್ಲಿ ಇರಲಿದೆ. ಯಾವುದೇ ಆತಂಕಕ್ಕೆ ಒಳಗಾಗೋದು ಬೇಡ. ಮೊಬೈಲ್ ಗಳನ್ನ ಪರೀಕ್ಷಾ ಕೇಂದ್ರಗಳಿಗೆ ತರುವಂತಿಲ್ಲ. ಅರ್ಧ ಗಂಟೆಗೂ‌ ಮೊದಲೇ ತಪಾಸಣೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. 

click me!